Lucknow : ಉತ್ತರ ಪ್ರದೇಶ (Uttar Pradesh) ರಾಜ್ಯ ಬಿಜೆಪಿ (State BJP) ಘಟಕವು ಪ್ರಧಾನಿ ನರೇಂದ್ರ ಮೋದಿಯವರ(Narendra Modi) ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಸೇವಾ ಕಾರ್ಯವನ್ನು ಆಚರಿಸಲಿದೆ.

ಪ್ರಧಾನ ಮಂತ್ರಿಯವರ ಜನ್ಮದಿನವನ್ನು ಬಿಜೆಪಿ ಪಕ್ಷವು ಅದ್ಧೂರಿಯಾಗಿ ಆಚರಿಸಲು ಯೋಜಿಸಿದ್ದು, ಪಕ್ಷದ ಎಲ್ಲಾ ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ‘ಸೇವಾ ಪಖ್ವಾರಾ’ ಅಥವಾ `ಸೇವಾ ಶಿಬಿರʼವನ್ನು ಆಯೋಜಿಸಲು ತಿಳಿಸಲಾಗಿದೆ.
ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬೂತ್, ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಜನರನ್ನು ಸಂಪರ್ಕಿಸಲಿದ್ದಾರೆ.
ಇದನ್ನೂ ಓದಿ : https://vijayatimes.com/hyderabad-liberation-day/
ಕೇಂದ್ರ ಸಚಿವರು, ರಾಜ್ಯ ಸಚಿವರು ಮತ್ತು ಶಾಸಕರು ಪ್ರತಿದಿನ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಉತ್ತರ ಪ್ರದೇಶ ಬಿಜೆಪಿ ಘಟಕವು ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂದರ್ಭದಲ್ಲಿ ಕೈಗೊಳ್ಳಲಿರುವ ಕಾರ್ಯಕ್ರಮಗಳ ವಿವರಗಳನ್ನು ಬಿಡುಗಡೆ ಮಾಡಿದೆ.

ರಕ್ತದಾನ, ಬಡವರಿಗೆ ಸಹಾಯ ಮಾಡುವಂತಹ ಉಪಕ್ರಮಗಳೊಂದಿಗೆ ಬಿಜೆಪಿ ಹದಿನೈದು ದಿನಗಳ ರಾಷ್ಟ್ರವ್ಯಾಪಿ ಸಾರ್ವಜನಿಕ ಸಂಪರ್ಕವನ್ನು ಪ್ರಾರಂಭಿಸಲಿದೆ.
ಇದೇ ವೇಳೆ 2024ರ ಮುನ್ಸಿಪಲ್ ಚುನಾವಣೆ ಮತ್ತು ಸಂಸತ್ತಿನ ಚುನಾವಣೆಗೆ ಮುನ್ನ ಬಿಜೆಪಿ ಪಕ್ಷವು ಕೈಗೊಂಡ ಕೆಲಸವನ್ನು ಎತ್ತಿ ಹಿಡಿಯಲು ಬಿಜೆಪಿ ಕಾರ್ಯಕರ್ತರು (BJP Workers) ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ.
ಕಾರ್ಯಕ್ರಮಗಳ ವಿವರ :
- ಸೆಪ್ಟೆಂಬರ್ 17 ರಕ್ತದಾನ ಶಿಬಿರ : ಬಿಜೆಪಿ ಸಂಸದರು(BJP MP) ಮತ್ತು ಶಾಸಕರು ರಕ್ತದಾನ ಶಿಬಿರಗಳಿಗೆ ತೆರಳಿ ರಕ್ತದಾನ(Blood Donation) ಮಾಡುತ್ತಾರೆ. ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಆರೋಗ್ಯ ತಪಾಸಣೆ
- ಸೆಪ್ಟೆಂಬರ್ 20 : ಬಿಜೆಪಿ ಕಾರ್ಯಕರ್ತರು ಪ್ರತಿ ವಾರ್ಡ್ನಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಿದ್ದಾರೆ.
- ಸೆಪ್ಟೆಂಬರ್ 21 : ಬಿಜೆಪಿ ಕಾರ್ಯಕರ್ತರಿಂದ ಕೆರೆಗಳು ಮತ್ತು ಕೊಳಗಳಲ್ಲಿ ಶ್ರಮದಾನ.
- ಸೆಪ್ಟೆಂಬರ್ 23 : ಸ್ವಾವಲಂಬಿ ಭಾರತದ ಕಲ್ಪನೆಯನ್ನು ಉತ್ತೇಜಿಸಲು ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಪ್ರದರ್ಶನ ನಡೆಯಲಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಸ್ಥಳೀಯ ಉತ್ಪನ್ನಗಳಿಗೆ ಪ್ರಚಾರ ನೀಡಲಿದ್ದಾರೆ.
https://youtu.be/kbwSg9_8jrY ವೆಹಿಕಲ್ ಟೋಯಿಂಗ್ ಅವಶ್ಯಕತೆ ಇದೆಯಾ?
- ಸೆಪ್ಟೆಂಬರ್ 24 : ಕೃತಕ ಅಂಗಾಂಗ ಉಪಕರಣ ನೀಡುವ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ದೇಣಿಗೆ ನೀಡುವಂತೆ ನಾಗರಿಕರಿಗೆ ಮನವಿ ಮಾಡಲಾಗುವುದು.
- ಸೆಪ್ಟೆಂಬರ್ 25 : ರಂದು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದಂದು, ಮನ್ ಕಿ ಬಾತ್ ಅನ್ನು ಬೂತ್ ಮಟ್ಟದಲ್ಲಿ ಆಯೋಜನೆ.
- ಸೆಪ್ಟೆಂಬರ್ 26 : ಪ್ರತಿ ಜಿಲ್ಲೆಗಳಲ್ಲಿ ‘ಅಪ್ನಾ ದೇಶ್ ಅಪ್ನಾ ಮತಿ’ ಎಂಬ ವಿನೂತನ ಪ್ರಯೋಗವನ್ನು ಆಯೋಜಿಸಲಾಗುವುದು, ಅಲ್ಲಿ ಯುಪಿಗೆ ಹೊರಗಿನ ರಾಜ್ಯಗಳ ಜನರನ್ನು ಆಹ್ವಾನಿಸಲಾಗುತ್ತದೆ ಮತ್ತು ಅವರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು.

- ಸೆಪ್ಟೆಂಬರ್ 27 : ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿಗೆ ಶುಭ ಹಾರೈಕೆಗಳನ್ನು ಬರೆಯಲಿದ್ದಾರೆ
- ಸೆಪ್ಟೆಂಬರ್ 30 : ‘ಟಿಬಿ-ಮುಕ್ತ್ ಭಾರತ್’ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು, ಇದರ ಭಾಗವಾಗಿ ಸಂಸದರು ಮತ್ತು ಶಾಸಕರು ಟಿಬಿ ರೋಗಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮಾಡಲಾಗುವುದು.
- ಅಕ್ಟೋಬರ್ 2 : ಖಾದಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಲು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಖಾದಿ ಬಟ್ಟೆಗಳನ್ನು ಖರೀದಿಸುತ್ತಾರೆ.
- ಮಹೇಶ್ ಪಿ.ಎಚ್