‘ಕಾಂಗ್ರೆಸ್ ಎಂದಿಗೂ ರಾಮನನ್ನು ನಂಬಲಿಲ್ಲ’ ; ಪ್ರಧಾನಿ ನರೇಂದ್ರ ಮೋದಿ

Ahemdabad: ಮೋದಿಯನ್ನು ಯಾರು ಹೆಚ್ಚು ನಿಂದಿಸಬಹುದು, ಯಾರು ಹೆಚ್ಚು ಕುಟುಕಬಹುದು ಎಂಬುದಕ್ಕೆ ಪೈಪೋಟಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Slams Mallikarjun Kharge)

ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ‘ರಾವಣ’ ಹೇಳಿಕೆಯನ್ನು ಉಲ್ಲೇಖಿಸಿ (PM Slams Mallikarjun Kharge) ತಿರುಗೇಟು ನೀಡಿದ್ದಾರೆ.

ಗುಜರಾತ್ನ (Gujarat) ಕಲೋಲ್ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ರಾಮನ ಅಸ್ತಿತ್ವವನ್ನು ಎಂದಿಗೂ ನಂಬದವರು ಈಗ ರಾಮಾಯಣದಿಂದ ‘ರಾವಣ’ ಅನ್ನು ತಂದಿದ್ದಾರೆ.

ಇನ್ನು ಅವರು ಎಂದಿಗೂ ಪಶ್ಚಾತ್ತಾಪ ಪಡಲಿಲ್ಲ, ನನಗೆ ಇಂತಹ ಕಟುವಾದ ಪದಗಳನ್ನು ಬಳಸಿದ ನಂತರ, ಕ್ಷಮೆಯಾಚಿಸುವ ಬಗ್ಗೆ ಮರೆತುಬಿಡುತ್ತಾರೆ.

ಕೆಲವರು ನನ್ನನ್ನು ರಾಕ್ಷಸ ಎಂದು ಕರೆಯುತ್ತಾರೆ, ಕೆಲವರು ಜಿರಳೆ ಎಂದು ಹೇಳುತ್ತಾರೆ. ಆದರೆ ನಾನು ಯಾರೆಂದು ದೇಶದ ಜನ ನಿರ್ಧರಿಸುತ್ತಾರೆ ಎಂದು ಕಾಂಗ್ರೆಸ್ ವಿರುದ್ದ ಮೋದಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : https://vijayatimes.com/state-congress-tweet-fires/

ಇದೇ ವೇಳೆ ಕಾಂಗ್ರೆಸ್ ನಾಯಕ ಮಧುಸೂದನ್ ಮಿಸ್ತ್ರಿ ಮಾಡಿದ ‘ಔಕಾತ್’ ಟೀಕೆಯನ್ನು ಉಲ್ಲೇಖಿಸಿದ ನರೇಂದ್ರ ಮೋದಿ ಅವರು, ಈ ಚುನಾವಣೆಯು ಪ್ರಧಾನಿ ಮೋದಿ ಅವರ ‘ಔಕಾತ್’ ಅನ್ನು ತೋರಿಸುತ್ತದೆ. ಗೌರವಾನ್ವಿತ ಖರ್ಗೆ ಜೀ ಅವರು ನನ್ನನ್ನು ರಾವಣನಿಗೆ ಹೋಲಿಸಿದರು.

ರಾಮನ ಅಸ್ತಿತ್ವವನ್ನು ಎಂದಿಗೂ ನಂಬದವರು ಈಗ ರಾಮಾಯಣದಿಂದ ‘ರಾವಣ’ ನನ್ನು ತಂದಿದ್ದಾರೆ ಎಂದು ಕುಟುಕಿದರು. ಕೆಲ ದಿನಗಳ ಹಿಂದೆ ಗುಜರಾತ್ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge),

ಎಲ್ಲಾ ಚುನಾವಣೆಗಳ ಮುಖವಾಗಿರುವುದರಿಂದ ಪ್ರಧಾನಿ ಮೋದಿಗೆ 100 ತಲೆಗಳಿವೆಯೇ? ಪ್ರಧಾನಿ ಮೋದಿಯವರು ಯಾವಾಗಲೂ ತಮ್ಮ ಬಗ್ಗೆಯೇ ಮಾತನಾಡಿ,

ಯಾರನ್ನೂ ನೋಡಬೇಡಿ, ಮೋದಿಯನ್ನು ನೋಡಿ ಮತ ಹಾಕಿ ಎಂದು ಹೇಳುತ್ತಾರೆ. ನಾವು ಎಷ್ಟು ಬಾರಿ ನಿಮ್ಮತ್ತ ನೋಡಬೇಕು?

ಇದನ್ನೂ ಓದಿ : https://vijayatimes.com/condom-packets-in-students-bag/

ಪಾಲಿಕೆ ಚುನಾವಣೆ, ಶಾಸಕರ ಚುನಾವಣೆ ಮತ್ತು ಸೇರಿದಂತೆ ಎಲ್ಲ ಚುನಾವಣೆಗಳಲ್ಲಿಯೂ ನಾವು ನಿಮ್ಮ ಮುಖವನ್ನು ನೋಡಬೇಕು. ಹಾಗಾದ್ರೆ ನಿಮಗೆ ರಾವಣನಂತೆ 100 ಮುಖಗಳಿವೆಯೇ? ಎಂದು ಖರ್ಗೆ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದರು. 

ಮಲ್ಲಿಕಾರ್ಜುನ್ಖರ್ಗೆ ಅವರು  ಬಳಸಿದ ʼರಾವಣʼ ಪದವು ವಿವಾದಕ್ಕೆ ಕಾರಣವಾಗಿದೆ.

Exit mobile version