ಎದೆಹಾಲಲ್ಲಿ ವಿಷ : ವಿಷಯುಕ್ತ ಎದೆ ಹಾಲು ಕುಡಿದು 111 ನವಜಾತ ಶಿಶುಗಳ ಸಾವು

Shocking News: ನಿಜವಾಗ್ಲೂ ಇದೊಂದು ಶಾಕಿಂಗ್ ನ್ಯೂಸ್‌ ! ಕಳೆದ ಹತ್ತು ತಿಂಗಳಲ್ಲಿ 111 ನವಜಾತ ಶಿಶುಗಳು ಸಾವನ್ನಪ್ಪಿವೆ. ಅದೂ (Poison in breast milk) ತಾಯಿಯ ಎದೆ ಹಾಲು ಕುಡಿದು ಇಷ್ಟೊಂದು ಕಂದಮ್ಮಗಳು ಸಾವನ್ನಪ್ಪಿವೆ ಅಂದ್ರೆ ಬೆಚ್ಚಿ ಬೀಳೋ ವಿಚಾರವೇ

ಈ ಭಯಾನಕ ಘಟನೆ ನಡೆದಿರೋದು ಉತ್ತರ ಪ್ರದೇಶದಲ್ಲಿ(Uthar Pradesh). ತಾಯಿ ಹಾಲು ಮಕ್ಕಳಿಗೆ ವಿಷವಾಗಲು ಕಾರಣ ಏನು ಅಂತ ತಿಳಿಯಲು ಲಕ್ನೋದ(Lucknow) ಕ್ವೀನ್ ಮೇರಿ (Queen Meri)  ಆಸ್ಪತ್ರೆಯು ಗಂಭೀರವಾದ ಸಂಶೋಧನೆಯನ್ನು ಪ್ರಾರಂಭಿಸಿತು.

ಸಾವನ್ನಪ್ಪಿದ ನವಜಾತ ಶಿಶುಗಳು ಕುಡಿದಿರುವ ಹಾಲನ್ನು ಹಾಗೂ ತಾಯಿಯ ಎದೆ ಹಾಲನ್ನು ಪರೀಕ್ಷೆಗೆ ಒಳಪಡಿಸಲಾಯಿತು. (Poison in breast milk) ಆಗ ಬಯಲಾಗಿದ್ದು ಭಯಾನಕ ಸತ್ಯ.

ತಾಯಿ ತಿಂದ ಆಹಾರ ಮಗುವಿಗೆ ವಿಷವಾಯ್ತು :

ಲಕ್ನೋದ ಕ್ವೀನ್ ಮೇರಿ  ಆಸ್ಪತ್ರೆಯ ಅಧ್ಯಯನದಿಂದ ಗೊತ್ತಾದ ಶಾಕಿಂಗ್ ಅಂಶ ಅಂದ್ರೆ ತಾಯಿ ತಿಂದ ಆಹಾರ ಮಗುವಿಗೆ ವಿಷವಾಯ್ತು ಅನ್ನೋದು. ತಾಯಿ ತಿನ್ನೋ ಆಹಾರದಲ್ಲಿ ಸೇರಿದ್ದ ಕೀಟನಾಶಕ, ರಾಸಾಯನಿಕ ಗೊಬ್ಬರಗಳ ಅಂಶ ಎದೆ ಹಾಲಲ್ಲಿ ಸೇರಿ ಅದು ಮಗುವಿಗೆ ನಂಜಾಗಿ ಕಾಡಿತು. ಮಗುವಿನ ಪ್ರಾಣವನ್ನೇ ಬಲಿ ಪಡೆಯಿತು.

ಇದನ್ನೂ ಓದಿ: ಕೆಲಸಕ್ಕಾಗಿ ದುಬೈಗೆ ಹೊರಟಿದ್ದೀರಾ

ಲಕ್ನೋದ ಕ್ವೀನ್ ಮೇರಿ  ಆಸ್ಪತ್ರೆಯು ತಾಯಂದಿರ ಎದೆ ಹಾಲಿನಲ್ಲಿ ಕೀಟನಾಶಕದ ಅಂಶ ಇರುವುದು ಪತ್ತೆ ಮಾಡಿದೆ, ಸಂಶೋಧನಾ ತಂಡವು ಮಾಂಸಹಾರ ಮತ್ತು ಸಸ್ಯಹಾರ ಸೇವಿಸುವ ಒಟ್ಟು 130  ಗರ್ಭಿಣಿಯರ ಹಾಲನ್ನು ಪರೀಕ್ಷೆಗೆ ಒಳಪಡಿಸಿತು.

ಈ ಸಂಶೋಧನೆಯನ್ನು ಪ್ರೊಫೆಸರ್ ಸುಜಾತ, ಡಾಕ್ಟರ್ ಅಬ್ಬಾಸ್ ಅಲಿ, ನೈನಾ ದಿಬೀದಿಯವರು ನಡೆಸಿದ್ದಾರೆ.

ಸಸ್ಯಾಹಾರಿಗಳಿಗಿಂತ ಮಾಂಸಾಹಾರಿಗಳಲ್ಲಿ ಹೆಚ್ಚು ವಿಷ :

ಇನ್ನೊಂದು ಬೆಚ್ಚಿ ಬೀಳಿಸುವ ಅಂಶ ಅಂದ್ರೆ ಸಸ್ಯಾಹಾರಿ ಮಹಿಳೆಯರ ಹಾಲಿಗಿಂತಲೂ ಮಾಂಸಾಹಾರಿ ಮಹಿಳೆಯರ ಎದೆಹಾಲಿನಲ್ಲಿ ಹೆಚ್ಚು ಪ್ರಮಾಣದ ಕೀಟನಾಶಕಗಳು ಕಂಡು ಬಂದಿವೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಬೆಳೆ ತೆಗೆಯಲು ರೈತರು ವಿಷರೀತ ಕೀಟನಾಶಕ, ರಾಸಾಯನಿಕ ಪದಾರ್ಥಗಳನ್ನು ತರಕಾರಿ ಹಣ್ಣುಗಳಿಗೆ ಬಳಸ್ತಾರೆ. ಅಲ್ಲದೆ ಇವುಗಳ ಕೆಡದಂತೆ ಮಾಡಲು ಮತ್ತಷ್ಟು ರಾಸಾಯನಿಕ ಹಾಕ್ತಾರೆ.

ಕೇವಲ ಹಣ್ಣು ತರಕಾರಿಗೆ ಮಾತ್ರವಲ್ಲದೆ  ಆಡು ,ಕೋಳಿಗಳಿಗೂ ಬೇರೆ ಬೇರೆ  ರಾಸಾಯನಿಕಗಳನ್ನು ಇಂಜೆಕ್ಷನ್ ರೂಪದಲ್ಲಿ ನೀಡಿ ದಷ್ಟ ಪುಷ್ಟಗೊಳಿಸಲಾಗುತ್ತಿದೆ.

ಇದು ಇವತ್ತು ಎದೆ ಹಾಲು ನಂಜಾಗಲು ಮುಖ್ಯ ಕಾರಣ ಅನ್ನೋದು ವೈದ್ಯರ ಅಭಿಪ್ರಾಯ.

ಬರೀ ಹಣ್ಣು ತರಕಾರಿ ಮಾಂಸವಲ್ಲ ದಿನನಿತ್ಯ ತಿನ್ನೋ ಇತರ ಆಹಾರಗಳಿಗೂ ಬೇರೆ ಬೇರೆ ರಾಸಾಯನಿಕಗಳನ್ನು ಹಾಕಲಾಗುತ್ತಿದೆ. ಬಣ್ಣ, ಕೃತಕ ಸುವಾಸನೆಗೆ, ಆಹಾರ ಕೆಡದಂತೆ ಇಡಲು ರಾಸಾಯನಿಕಗಳನ್ನು ಬಳಸಿ ಇಂಥಾ ಅಪಾಯಕ್ಕೆ ಜನರನ್ನು ನೂಕಲಾಗಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ನಿರುದ್ಯೋಗದ ಬಗ್ಗೆ ಒಂದೇ ಒಂದು ಪದವಿಲ್ಲ: ಮಮತಾ ಬ್ಯಾನರ್ಜಿ

ಅದ್ರಲ್ಲೂ ನವಜಾತ ಶಿಶುಗಳು ತಾಯಿ ಹಾಲನ್ನು ಮಾತ್ರ ತಿನ್ನೋದ್ರಿಂದ ಆರೋಗ್ಯದಲ್ಲಿ ಏರುಪೇರಾಗಿ ಸಾವಿಗೀಡಾಗುತ್ತಿರಬಹುದು ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಇನ್ನಷ್ಟು ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ  ಆದೇಶ ನೀಡಿದೆ. ಈ ತನಿಖೆ ಇಡೀ ಭಾರತ ದೇಶದಲ್ಲೇ ಕೈಗೊಳ್ಳಬೇಕಾದ ಅನಿವಾರ್ಯಯತೆ ಇದೆ.

Exit mobile version