ಹಿಜಾಬ್‌ ತೀರ್ಪು ; ವಿವಿಧ ನಾಯಕರ ಅಭಿಪ್ರಾಯಗಳು ಹೀಗಿವೆ ನೋಡಿ

India

Karnataka : ತೀವ್ರ ಕುತೂಹಲ ಕೆರಳಿಸಿದ್ದ ಹಿಜಾಬ್‌ ತೀರ್ಪು ಪ್ರಕಟವಾಗಿದ್ದು, ಸುಪ್ರೀಂಕೋರ್ಟ್‌ನ (Supreme Court) ಇಬ್ಬರು ನ್ಯಾಯಾಧೀಶರು (Political Leaders About Hijab Verdict) ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿ ಹೇಮಂತ್ ಗುಪ್ತ ಹೈಕೋರ್ಟ್‌ ಆದೇಶವನ್ನು ಎತ್ತಿ ಹಿಡಿದಿದ್ದು, ಮೇಲ್ಮನವಿ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.

ಆದರೆ ನ್ಯಾಯಮೂರ್ತಿ ಸುಧಾಂಶು ದುಲಿಯಾ, ಹೈಕೋರ್ಟ್‌ ಆದೇಶವನ್ನು ರದ್ದು ಪಡಿಸಿದ್ದಾರೆ. ಹೀಗಾಗಿ ಹಿಜಾಬ್‌ ಅರ್ಜಿಯ (Political Leaders About Hijab Verdict) ವಿಚಾರಣೆಯನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.

ಈ ಕುರಿತು ರಾಜ್ಯದ ಹಲವು ನಾಯಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳ ವಿವರ ಇಲ್ಲಿದೆ ನೋಡಿ.

ಇದನ್ನೂ ಓದಿ : https://vijayatimes.com/hijab-verdict-from-sc/

ಹಿಜಾಬ್ ವಿಚಾರಣೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಆಗಿರುವುದನ್ನು ಸ್ವಾಗತಿಸುತ್ತೇವೆ.

ಕೋರ್ಟ್ ಆದೇಶದಂತೆ ಅಲ್ಲಿಯವರೆಗೂ ಹೈಕೋರ್ಟ್ ಆದೇಶವನ್ನು ಶಿಕ್ಷಣ ಸಂಸ್ಥೆಗಳಲ್ಲಿ ಪಾಲಿಸುತ್ತೇವೆ – ರಾಜ್ಯ ಶಿಕ್ಷಣ ಸಚಿವ(Education Minister) ಬಿ.ಸಿ ನಾಗೇಶ್(BC Nagesh)

ಹಿಜಾಬ್ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.

ನಾವು ಸುಪ್ರೀಂಕೋರ್ಟ್ನ ಮುಂದಿನ ತೀರ್ಪನ್ನು ಎದುರು ನೋಡುತ್ತಿದ್ದೇವೆ. ಅಲ್ಲಿಯವರೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತೆ ಕ್ರಮ ಕೈಗೊಂಡಿದ್ದೇವೆ – ಗೃಹ ಸಚಿವ(Home Minister) ಆರಗ ಜ್ಞಾನೇಂದ್ರ(Araga Jnanendra)

ಇದನ್ನೂ ಓದಿ : https://vijayatimes.com/over-use-of-social-media-leads-depression/

ಇಂದಿನ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಸುಪ್ರೀಂಕೋರ್ಟ್ ಏನೇ ತೀರ್ಪು ಕೊಟ್ಟರೂ ಸ್ವಾಗತಿಸಬೇಕು, ಏಕೆಂದರೆ ಈ ದೇಶ ಸಂವಿಧಾನದ ಮೇಲೆ ನಡೆಯುವುದೇ ಹೊರತು ಯಾವುದೋ ಧಾರ್ಮಿಕ ಆಚರಣೆಗಳು, ಪದ್ಧತಿಗಳ ಮೇಲೆ ನಡೆಯುವುದಲ್ಲ – ಪ್ರಮೋದ್ ಮುತಾಲಿಕ್(Pramod Muthalik)

https://youtu.be/B17BlX9yaF8

ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ನೀಡಿರುವ ತೀರ್ಪುನ್ನು ನಾವು ಗೌರವಿಸುತ್ತೇವೆ.

ಈ ಹಿಂದೆಯೇ ನಾವು ಹಿಜಾಬ್‌ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದೇವು. ಅದರಂತೆ ಇದೀಗ ಪ್ರಕರಣವನ್ನು ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ.

ಇದನ್ನೂ ಓದಿ : https://vijayatimes.com/retail-inflation-effects/

ಮುಂದಿನ ದಿನಗಳಲ್ಲಿ ತೀರ್ಪು ಏನೇ ಬಂದರು ಸ್ವಾಗತ – ಮುಸ್ಲಿಂ ಸಂಘಟನೆಗಳು, ಹಿಜಾಬ್‌ ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಆಗಿರುವುದನ್ನು ಸ್ವಾಗತಿಸುತ್ತೇವೆ. ಅಲ್ಲಿಯವರೆಗೂ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಈ ಹಿಂದಿನ ಹೈಕೋರ್ಟ್‌ ಆದೇಶವನ್ನೇ ಪಾಲಿಸಬೇಕು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai)

Exit mobile version