Bengaluru: ಮುಖ್ಯಮಂತ್ರಿ ಸಿದ್ದರಾಮಯ್ಯ (Political Retirement-Siddaramaiah) ಅವರು, ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ
ಗುತ್ತಿಗೆದಾರರ ಸಮಾವೇಶದಲ್ಲಿ ರಾಜಕೀಯ ನಿವೃತ್ತಿ ಕುರಿತು ಮಾತನಾಡಿದ್ದಾರೆ. ಏನಪ್ಪಾ ಇದು ಅಂತಾ ಆಶ್ಚರ್ಯ ಪಡುತ್ತಿದ್ದೀರಾ? ಹೀಗೆ ಹೇಳಿದ ಮಾತ್ರಕ್ಕೆ
ಅವರು ಇನ್ನೇನು ರಾಜಕೀಯದಿಂದ ನಿವೃತ್ತರಾಗಿ ಬಿಟ್ಟರು ಎಂದು ತಿಳಿದುಕೊಳ್ಳಬೇಡಿ. ಯಾಕಂದ್ರೆ ಈ ರೀತಿ ಹೇಳಲು ಕಾರಣವಿದೆ..

ಬಾಕಿ ಬಿಲ್ ಪಾವತಿ ಮಾಡಬೇಕೆಂದು ಗುತ್ತಿಗೆದಾರರು ಕೇಳಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೇಲೆ ಆ ಕುರಿತು 4-5 ಬಾರಿ ಸಭೆ ಮಾಡಿದ್ದೇವೆ. ಈ ಹಿಂದೆ ನಮ್ಮ
ಸರ್ಕಾರ ಇದ್ದಾಗ ಬಾಕಿ ಬಿಲ್ ಉಳಿಸಿಕೊಂಡಿರಲಿಲ್ಲ. ಬಿಜೆಪಿ (BJP) ಕಾಲದಲ್ಲಿ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಪ್ರತಿಪಕ್ಷದ ವಿರುದ್ಧ
ಆರೋಪ ಮಾಡಿದರು. ನಾನೇನು ದುಡ್ಡು ಪ್ರಿಂಟ್ (Political Retirement-Siddaramaiah) ಮಾಡಬೇಕೇ ಎಂದು ಗುತ್ತಿಗೆದಾರರಿಗೆ ಪ್ರಶ್ನೆ
ಒಂದೇ ಬಾರಿ ಬಾಕಿ ಬಿಲ್ ರಿಲೀಸ್ (Bill Release) ಮಾಡಿ ಎಂದು ಕೇಳಿದ್ದೀರಿ. ಈ ಹಿಂದೆ ಬಿಜೆಪಿಯವರು ಅವರ ಸರ್ಕಾರವಿದ್ದಾಗ ಹಣ ಇಲ್ಲದೆ ಟೆಂಡರ್
ಕರೆದಿದ್ದರು. ಹಾಗೆ ಮಾಡಲು ನಾನೇನು ದುಡ್ಡು ಪ್ರಿಂಟ್ ಮಾಡಲೇ ಎಂದು ಸಿದ್ದರಾಮಯ್ಯ ಗುತ್ತಿಗೆದಾರರನ್ನು ಪ್ರಶ್ನಿಸಿದರು.

ಇದನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡ ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದಿತ್ತು. ಕಾಂಗ್ರೆಸ್ (Congress) ಸರ್ಕಾರ ಬಂದ ಬಳಿಕವೂ ಬಾಕಿ ಬಿಲ್
ಬಿಡುಗಡೆ ಮಾಡಲು 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಇತ್ತೀಚೆಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದರು. ಇದಾದ ಕೆಲವೇ
ದಿನಗಳಲ್ಲಿ ಮತ್ತೆ ಪತ್ರಿಕಾಗೋಷ್ಠಿ ನಡೆಸಿದ್ದ ಕೆಂಪಣ್ಣ (Kempanna), ಕಮಿಷನ್ಗೆ ಬೇಡಿಕೆಯಿಡದೆ ಲೋಕೋಪಯೋಗಿ ಇಲಾಖೆಯ 600 ಕೋಟಿ ರೂ. ಮೊತ್ತದ
ಬಿಲ್ ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದರು.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಕಾಂಗ್ರೆಸ್, ಆಗಿನ ಆಡಳಿತರೂಢ ಬಿಜೆಪಿ ವಿರುದ್ಧ ಸತತ ಅಭಿಯಾನ
ನಡೆಸಿತ್ತು. ಇನ್ನು ಬಿಜೆಪಿ ಸರ್ಕಾರವಿದ್ದಾಗ ಕೆಂಪಣ್ಣ ಮಾಡಿದ್ದ 40 ಪರ್ಸೆಂಟ್ ಕಮಿಷನ್ (Commission) ಆರೋಪ ತೀವ್ರ ರಾಜಕೀಯ ಕೋಲಾರಹಲಕ್ಕೆ
ಕಾರಣವಾಗಿತ್ತು. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಇತರ ಸಚಿವರ ವಿರುದ್ಧ ‘ಪೇ ಸಿಎಂ’ ಪೋಸ್ಟರ್
ಅಭಿಯಾನವನ್ನೂ ನಡೆಸಿತ್ತು. ಇದು ಬಿಜೆಪಿಗೆ ತೀವ್ರ ಹಿನ್ನಡೆ ಉಂಟು ಮಾಡಿತ್ತು.
ಇದನ್ನು ಓದಿ: ದೆಹಲಿಯ ಮಹಿಳೆಯರಿಗೆ ಪ್ರತಿ ತಿಂಗಳು 1000 ರೂ ಘೋಷಣೆ: ಕೇಜ್ರಿವಾಲ್ ಸರ್ಕಾರ