Dehli: ದೆಹಲಿ (Dehli) ಸರ್ಕಾರವು ‘ಮುಖ್ಯಮಂತ್ರಿ ಮಹಿಳಾ (Good News For DL Womens) ಸಮ್ಮಾನ್ ಯೋಜನೆ’ (Mukhyamantri
Mahaila Samman Yojana)ಯನ್ನು ಜಾರಿಗೆ ತರುತ್ತಿದ್ದು, ಹೆಣ್ಣುಮಕ್ಕಳಿಗೆ ಸರ್ಕಾರವು ಪ್ರತಿ ತಿಂಗಳು 1 ಸಾವಿರ ರೂ. ನೀಡುವುದಾಗಿ ದೆಹಲಿ ಹಣಕಾಸು
ಸಚಿವ ಅತಿಶಿ ಹೇಳಿದ್ದಾರೆ
18ರಿಂದ ಮೇಲ್ಪಪಟ್ಟ ಎಲ್ಲಾ ಮಹಿಳೆಯರಿಗೂ 2024-25 ಹಣಕಾಸು ವರ್ಷದಿಂದ ಒಂದು ಸಾವಿರ ರೂಪಾಯಿ ಹಣವನ್ನು ನೀಡಲಾಗುತ್ತದೆ ಎಂದು ಅರವಿಂದ್
ಕೇಜ್ರಿವಾಲ್ (Aravind Kejriwal) ನೇತೃತ್ವದ ಸರ್ಕಾರ ಘೋಷಣೆ ಹೊರಡಿಸಿದೆ. ಶಿಕ್ಷಣ, ಹಣಕಾಸು ಸಚಿವೆ ಅತಿಶಿ ಮರ್ಲೆನಾ ಅವರು ಇಂದು ತಮ್ಮ
ಚೊಚ್ಚಲ ಬಜೆಟ್ (Budget) ಮಂಡನೆ ಮಂಡಿಸಿದ್ದು, ಈ ವೇಳೆ ಮಾಹಿತಿ ನೀಡಿರುವ ಸಚಿವೆ.. ಕೇಜ್ರಿವಾಲ್ ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೂ
1 ಸಾವಿರ ರೂಪಾಯಿ ನೀಡಲಿದೆ. ‘ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ’ ಅಡಿಯಲ್ಲಿ ಮಹಿಳೆಯರಿಗೆ ಈ ಸೌಲಭ್ಯವನ್ನು ನೀಡಲಾಗುವುದು ಎಂದರು.
ಬಜೆಟ್ ಗಾತ್ರವು 76 ಸಾವಿರ ಕೋಟಿ ರೂಪಾಯಿ ಆಗಿದ್ದು, ರಾಮ ರಾಜ್ಯದ ಕನಸನ್ನು ನನಸು ಮಾಡುವ ಗುರಿಯನ್ನು ಹೊಂದಿರೋದಾಗಿ ಬಜೆಟ್ನಲ್ಲಿ ತಿಳಿಸಲಾಗಿದೆ.
ಇಂದು ಬೆಳಗ್ಗೆ ದೆಹಲಿ ವಿಧಾನಸಭೆಯಲ್ಲಿ ಅತಿಶಿ (Atishi) ಬಜೆಟ್ ಮಂಡನೆ ಮಾಡಿದರು.
ಅತಿಶಿ ಅವರು ಹಿಂದೆ, ಸೀಮಿತ ಸಂಪನ್ಮೂಲಗಳನ್ನು ಹೊಂದಿದ್ದ ದೆಹಲಿಯ ನಿವಾಸಿಗಳು ತಮ್ಮ ಪುತ್ರರನ್ನು ಖಾಸಗಿ ಶಾಲೆಗಳಿಗೆ ಮತ್ತು ಹೆಣ್ಣು ಮಕ್ಕಳನ್ನು
ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಿದ್ದರು ಎಂದು ಹೇಳಿದರು. ಒಮ್ಮೆ 95 ಪ್ರತಿಶತ ಹುಡುಗಿಯರು ತಮ್ಮ ಸಹೋದರರು ಖಾಸಗಿ ಶಾಲೆಗಳಲ್ಲಿ ಓದುತ್ತಾರೆ
ಎಂದು ನನಗೆ ಹೇಳಿದರು. ಆದರೆ ಈಗ, ದೆಹಲಿಯ ಸರ್ಕಾರಿ ಶಾಲೆಗಳ ಹುಡುಗಿಯರು IIT, NEET ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಿದ್ದಾರೆ ಎಂದು
ಅವರು ಹೇಳಿದರು.
ಇದುವರೆಗೆ ಶ್ರೀಮಂತ ಕುಟುಂಬದ ಮಗು ಶ್ರೀಮಂತ ಮತ್ತು ಬಡ ಕುಟುಂಬದ ಮಗು ಬಡವಾಗಿರುತ್ತದೆ ಆದರೆ ಇದು ರಾಮ ರಾಜ್ಯ ಪರಿಕಲ್ಪನೆಗೆ ಸಂಪೂರ್ಣವಾಗಿ
ವಿರುದ್ಧವಾಗಿದೆ ಎಂದು ದೆಹಲಿ ಹಣಕಾಸು ಸಚಿವರು ಹೇಳಿದರು. ಕೇಜ್ರಿವಾಲ್ ಸರ್ಕಾರವು 2015 ರಿಂದ 22,711 ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಿದೆ.
ಶಿಕ್ಷಣವು ನಮ್ಮ ಸರ್ಕಾರದ ಆದ್ಯತೆಯಾಗಿದೆ, ಈ ವರ್ಷ ಶಿಕ್ಷಣಕ್ಕಾಗಿ 16,396 ಕೋಟಿ ರೂ.ಗಳನ್ನು ಒದಗಿಸಿದೆ ಎಂದರು.
ಕಳೆದ 10 ವರ್ಷಗಳ ಎಎಪಿ (AAP) ಸರ್ಕಾರದ ಅವಧಿಯಲ್ಲಿ ದೆಹಲಿಯ ಚಿತ್ರಣ ಹೇಗೆ ಬದಲಾಗಿದೆ ಎಂಬುದನ್ನು ದೆಹಲಿ ಸರ್ಕಾರದ ಹಣಕಾಸು ಸಚಿವರು
ಉಲ್ಲೇಖಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಸರ್ಕಾರ ಹತ್ತನೇ ಬಜೆಟ್ ಮಂಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ದೆಹಲಿ ಚಿತ್ರಣವನ್ನು ಬದಲಿಸಲು
ಕೇಜ್ರಿವಾಲ್ ಭರವಸೆಯ ಕಿರಣವಾಗಿ ಬಂದರು. ನಾವೆಲ್ಲರೂ ರಾಮರಾಜ್ಯದಿಂದ ಸ್ಫೂರ್ತಿ ಪಡೆದಿದ್ದೇವೆ. ರಾಮರಾಜ್ಯದ ಕನಸನ್ನು ನನಸು ಮಾಡಲು ನಾವು
ಶ್ರಮಿಸುತ್ತಿದ್ದೇವೆ ಎಂದಿದ್ದಾರೆ.
ಇದನ್ನು ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬಸ್ ಸ್ಟಾಂಡ್ನಲ್ಲೇ ಬಾಂಬ್ಗೆ ಟೈಮರ್ ಸೆಟ್ ಮಾಡಿದ ಶಂಕಿತ ಉಗ್ರ