download app

FOLLOW US ON >

Monday, August 8, 2022
Breaking News
ನೋಯ್ಡಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬುಲ್ಡೋಜರ್ ಕ್ರಮ!“ರಮೇಶ್ ಕುಮಾರ್‍ಗೆ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ” : ಬಿಜೆಪಿಹೆಣ ಕಂಡರೆ ಓಡೋಡಿ ಬರುವ ಶೋಭಾ ಕರಂದ್ಲಾಜೆ, ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? : ಕಾಂಗ್ರೆಸ್‌ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!
English English Kannada Kannada

ಪವರ್ ಸ್ಟಾರ್ `ಜೇಮ್ಸ್’ ಚಿತ್ರದಲ್ಲಿ ದೊಡ್ಮನೆ ಅಣ್ಣಂದಿರ ಎಂಟ್ರಿ.!

ಪುನೀತ್ ರಾಜ್‍ಕುಮಾರ್ ಅವರನ್ನು ಅವರ ಅಭಿಮಾನಿಗಳು ಈ ಹಿಂದೆ ನಡೆದಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ನೀವು ನಿಮ್ಮ ಅಣ್ಣಂದಿರೊಟ್ಟಿಗೆ ಯಾವಾಗ ಅಭಿನಯಿಸಲಿದ್ದೀರಾ.? ನಾವು ಯಾವಾಗ ನೋಡಬಹುದು.? ಎಂಬ ಅನೇಕ ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಆದರೆ ಈ ಮಾತಿಗೆಲ್ಲಾ ಅಪ್ಪು ನೋಡಣ, ಮಾಡೋಣ ಅದಕ್ಕೆಲ್ಲಾ ಒಂದು ಒಳ್ಳೆ ಸಮಯ ಬರಲಿದೆ, ಕಾಯಬೇಕು ಎಂದಿದ್ದರು.
james
  • ಮೋಹನ್‌ ಶೆಟ್ಟಿ

ಜನಮೆಚ್ಚಿದ, ಜಗಮೆಚ್ಚಿದ ಪವರ್ ಸ್ಟಾರ್(Powerstar) ಅಪಾರ ಸಂಖ್ಯೆಯ ಅಭಿಮಾನಿಗಳನ್ನು ದೈಹಿಕವಾಗಿ ಅಗಲಿ, ಇಂದು ನಮ್ಮೆಲ್ಲರ ಮನಸ್ಸಿನಲ್ಲಿ ಆರಾಧ್ಯ ದೈವವಾಗಿ ನೆಲೆಯೂರಿದ್ದಾರೆ. ಪ್ರೀತಿಯಿಂದ ಜನರು ಪುನೀತ್ ರಾಜ್‍ಕುಮಾರ್(Puneethrajkumar) ಅವರನ್ನು ಅಪ್ಪು(Appu) ಎಂದೇ ಕರೆಯುತ್ತಿದ್ದರು. ಇಂದಿಗೂ ಕೂಡ ಅಪ್ಪು ಎಂಬ ನಾಮಸ್ಮರಣೆ ಕೋಟಿ ಕೋಟಿ ಹೃದಯಗಳಲ್ಲಿ ಮಂತ್ರ ಪಠನೆಯಾಗಿ ರಾರಾಜಿಸುತ್ತಿದೆ. ಪುನೀತ್ ರಾಜ್‍ಕುಮಾರ್(Puneethrajkumar) ಅವರು ಕಡೆಯದಾಗಿ ನಟಿಸಿದ ಚಲನಚಿತ್ರ ಎಂದರೆ ಅದು `ಜೇಮ್ಸ್'(James).

ಈ ಸಿನಿಮಾದ ಕೊಂಚ ಭಾಗ ಮಾತ್ರ ಚಿತ್ರೀಕರಣಕ್ಕೆ ಬಾಕಿ ಉಳಿದಿತ್ತು. ಸದ್ಯ ಈ ಕುರಿತು ಚಿತ್ರದ ನಿರ್ದೇಶಕರಾಗಿರುವ ಚೇತನ್ ಅವರು ಜೇಮ್ಸ್ ಚಿತ್ರದ ಬಾಕಿಯನ್ನು ನಾವು ಪೂರ್ಣಗೊಳಿಸಲು ಮುಂದಾಗಿದ್ದೇವೆ. ಹೀಗಾಗಿಯೇ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲು ತಂಡದೊಂದಿಗೆ ಸಜ್ಜಾಗಿದ್ದೇವೆ. ಕಳೆದ ಎರಡು ತಿಂಗಳಿಂದ ಅಭಿಮಾನಿಗಳು ಅಪ್ಪು ಅವರ ಹುಟ್ಟುಹಬ್ಬಕ್ಕೆ ನಾವು ಜೇಮ್ಸ್ ಚಿತ್ರವನ್ನು ನೋಡಲೇಬೇಕು ಎಂದು ಪಟ್ಟು ಹಿಡಿದು ಕುಳಿತ್ತಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದು, ಇದಕ್ಕಾಗಿಯೇ ನಿರ್ದೇಶಕ ಚೇತನ್ ಹರಸಾಹಸ ಮಾಡುತ್ತಿದ್ದು, ಚಿತ್ರೀಕರಣವನ್ನು ಮುಗಿಸಲು ಪ್ಲಾನ್ ಮಾಡಿದ್ದಾರೆ.

ಈ ನಡುವೆ ಅಪ್ಪು ಅವರ ಕೊನೆಯ ಸಿನಿಮಾದಲ್ಲಿ ದೊಡ್ಮನೆ ಅಣ್ಣಂದಿರನ್ನು ಸೇರಿಸುವ ಪ್ರಯತ್ನ ಚೇತನ್ ಮಾಡಿದ್ದಾರೆ. ಹೌದು, ನಟ ಶಿವರಾಜ್‍ಕುಮಾರ್(Shivarajkumar) ಮತ್ತು ರಾಘವೇಂದ್ರ ರಾಜ್‍ಕುಮಾರ್(Raghavendrarajkumar) ಅವರಿಬ್ಬರನ್ನು ವಿಶೇಷ ಪಾತ್ರದಲ್ಲಿ ತೋರಿಸಲು ಚೇತನ್ ನಿರ್ಧರಿಸಿದ್ದಾರಂತೆ. ಈ ಸುದ್ದಿ ಕಳೆದ ಒಂದೆರೆಡು ವಾರಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಅಪ್ಪು ಅವರ ಅಭಿಮಾನಿಗಳಲ್ಲಿ ಕಾತುರ, ಆತುರ ಎರಡು ಮತ್ತಷ್ಟು ಹೆಚ್ಚಾಗಿದೆ.

ಪುನೀತ್ ರಾಜ್‍ಕುಮಾರ್ ಅವರನ್ನು ಅವರ ಅಭಿಮಾನಿಗಳು ಈ ಹಿಂದೆ ನಡೆದಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ನೀವು ನಿಮ್ಮ ಅಣ್ಣಂದಿರೊಟ್ಟಿಗೆ ಯಾವಾಗ ಅಭಿನಯಿಸಲಿದ್ದೀರಾ.? ನಾವು ಯಾವಾಗ ನೋಡಬಹುದು.? ಎಂಬ ಅನೇಕ ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಆದರೆ ಈ ಮಾತಿಗೆಲ್ಲಾ ಅಪ್ಪು ನೋಡಣ, ಮಾಡೋಣ ಅದಕ್ಕೆಲ್ಲಾ ಒಂದು ಒಳ್ಳೆ ಸಮಯ ಬರಲಿದೆ, ಕಾಯಬೇಕು ಎಂದಿದ್ದರು. ಆದರೇ ಈ ರೀತಿ ಆಗುತ್ತೆ ಎಂದು ಯಾರಿಗೂ ತಿಳಿದಿರಲಿಲ್ಲ.!

ಸದ್ಯ ಈಗ ಆ ಕನಸು ನನಸಾಗುವತ್ತ ಸಾಗಿದೆ. ಹೌದು, ಶಿವರಾಜ್‍ಕುಮಾರ್ ಮತ್ತು ರಾಘವೇಂದ್ರ ರಾಜ್‍ಕುಮಾರ್ ಅವರಿಬ್ಬರು ಈಗ ಜೇಮ್ಸ್ ಸಿನಿಮಾದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಖಚಿತವಾಗಿದೆ. ಒಟ್ಟಾರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಈ ಸಿನಿಮಾವನ್ನು ಯಶಸ್ವಿ ಮಾಡುವ ಮೂಲಕ ಪವರ್ ಸ್ಟಾರ್ ಅಪ್ಪು ಅವರಿಗೆ ವಿಶೇಷ ಗೌರವ ಸಲ್ಲಿಸುವುದು ಕನ್ನಡಿಗರ ಗುರಿಯಾಗಿದೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article