ಚೆನ್ನಾಗಿರೋ ರೂಮ್ ಕೊಡ್ರಿ: SIT ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡ ಪ್ರಜ್ವಲ್‌ ರೇವಣ್ಣ.

Bengaluru: ದೇಶಾದ್ಯಂತ ಬಾರೀ ಸದ್ದು ಮಾಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ (Prajwal Revanna Pendrive Case) ದಿನಕ್ಕೊಂದು ರೀತಿಯಲ್ಲಿ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ಎಸ್‌ ಐ ಟಿ ಅಧಿಕಾರಿಗಳಿಂದ ಗುರುವಾರ ತಡರಾತ್ರಿ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಸಂಸದ ಪ್ರಜ್ವಲ್ ರೇವಣ್ಣರನ್ನ ನ್ಯಾಯಾಲಯ ಆರು ದಿನಗಳ ಎಸ್‌ಐಟಿ ಕಸ್ಟಡಿಗೆ ನೀಡಿತ್ತು . ಆದರೆ ಈಗ ಎಸ್‌ ಐಟಿ ಅಧಿಕಾರಿಗಳ ಜೊತೆಗೆ ಪ್ರಜ್ವಲ್‌ ರೇವಣ್ಣ ಕಿರಿಕ್‌ ಮಾಡಿಕೊಂಡಿದ್ದಾರೆ.

ಈಗಾಗಲೇ ಪ್ರಜ್ವಲ್‌ ರೇವಣ್ಣ ಅವರನ್ನ ಎಲ್ಲ ವಿಧಗಳಿಂದ ವಿಚಾರಣೆಗೆ ಒಳಪಡಿಸಿರುವ ಎಸ್‌ ಐಟಿ (SIT) ಅಧಿಕಾರಗಳ ಜೊತೆಗೆ ಮೊದಲ ದಿನವೇ ಕಿರಿಕ್‌ ಮಾಡಿಕೊಂಡಿದ್ದಾರೆ. ಎಸ್‌ಐಟಿ ಕಚೇರಿಯಲ್ಲಿ ಶೌಚಾಲಯ, ಕೊಠಡಿ ಶುಚಿಯಾಗಿಲ್ಲ, ಕೆಟ್ಟ ವಾಸನೆ ಬರುತ್ತಿದೆ. ಎಸ್‌ಐಟಿ ಕಚೇರಿಯಲ್ಲಿ ಉಸಿರಾಡಲು ಕಷ್ಟವಾಗಿದೆ ಎಂದು ನ್ಯಾಯದೀಶರ ಮುಂದೆ ಗೋಳು ತೋಡಿಕೊಂಡಿದ್ದ ಪ್ರಜ್ವಲ್.

ಇದೀಗ ಮತ್ತೆ ಎಸ್‌ಐಟಿ ಅಧಿಕಾರಿಗಳೊಂದಿಗೆ ಕೂಡ ಕಿರಿಕ್ ಮಾಡಿಕೊಂಡಿದ್ದಾರೆ. ನಾನು ಹಿಂಗೆಲ್ಲ ಬದುಕಿಲ್ಲ. ನನಗೆ ಚೆನ್ನಾಗಿರುವ ಟಾಯ್ಲೆಟ್ ಹಾಗೂ ಮಲಗಲು ರೂಂ ಕೊಡಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಗಲಾಟೆ ಮಾಡಿದ್ದಾರೆ.

ಹಾಸನ ಸಂಸದ ಹಾಗೂ ಆರೋಪಿ ಪ್ರಜ್ವಲ್‌ ರೇವಣ್ಣ ಅವರ ಮನವಿಗೆ ಎಸ್‌ ಐ ಟಿ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಯಾವುದೇ ಆರೋಪಿಗಳಿಗಾದರೂ ಅದೇ ರೂಂ, ಅದೇ ಟಾಯ್ಲೆಟ್ (Toilet). ನಿಮ್ಮ ತಂದೆಗೆ ಸಹ ಇದೇ ರೂಂ, ಇದೇ ಟಾಯ್ಲೆಟ್ ಬಳಸಿದ್ದಾರೆ ನಿಮಗೆಂದು ಸ್ಪೆಷಲ್ ರೂಮ್ ವ್ಯವಸ್ಥೆ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ಕೆಟ್ಟ ವಾಸನೆ ಬರುತ್ತಿದೆ . ನೊಣ, ಸೊಳ್ಳೆ ಹಾರಾಡುತ್ತವೆ ಉಸಿರಾಡುವುದು ಕಷ್ಟವಾಗ್ತಿದೆ ಎಂದು ಪ್ರಜ್ವಲ್‌ ರೇವಣ್ಣ ಹೇಳಿಕೊಂಡಿದ್ದಾರೆ.

ನ್ಯಾಯಾಲಯದಲ್ಲಿ ವಾದ ನಡೆದ ವೇಳೆ ವಕೀಲ, ಆರೋಪಿಗೆ ಯಾವುದೇ ಐಷಾರಾಮಿ ವ್ಯವಸ್ಥೆ ಬೇಡ, ಸಾಮಾನ್ಯ ಕೈದಿ ಇರುವಂತೆ ಸಾಮಾನ್ಯ ಕೊಠಡಿಯಲ್ಲಿರಲಿ ಎಂದಿದ್ದರು. ಹೀಗಾಗಿ ಎಸ್‌ ಐಟಿ ಅಧಿಕಾರಿಗಳು ಹಾಸನ ಹಾಲಿ ಸಂಸದ ಹಾಗೂ ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ (Prajwal Revanna) ಅವರಿಗೆ ಸಾಮಾನ್ಯರಂತೆ ಕೊಠಡಿಯನ್ನ ನೀಡಿದ್ದಾರೆ . ಹಾಗಾಗಿ ಇದು ಹುಟ್ಟಿನಿಂದಲೂ ಐಷಾರಾಮಿ ಜೀವನಶೈಲಿಯನ್ನ ರೂಢಿಸಿಕೊಂಡು ಬಂದಿದ್ದ ಪ್ರಜ್ವಲ್ ರೇವಣ್ಣ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Exit mobile version