ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್‌‌‌‌ ರದ್ಧತಿಗೆ ಕೋರಿ ಪ್ರಧಾನಿಗೆ ಸಿದ್ದರಾಮಯ್ಯ ಮನವಿ

Bengaluru: ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಮೇ22 ರಂದು ಪ್ರಧಾನಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ “ಪ್ರಜ್ವಲ್ ರೇವಣ್ಣ” ಏಪ್ರಿಲ್ 27 ರಂದು ತನ್ನ ಹೇಯ ಕೃತ್ಯ ಸುದ್ದಿ ಹೊರಗೆ ಬೀಳುತ್ತಿದ್ದಂತೆ ಸ್ವಲ್ಪ ಸಮಯದ ನಂತರ ತನ್ನ ರಾಜತಾಂತ್ರಿಕ ಪಾಸ್‌ಪೋರ್ಟ್‌‌‌‌ ಬಳಸಿಕೊಂಡು ವಿದೇಶಕ್ಕೆ ಪಲಾಯನ ಮಾಡಿದ್ದಾರೆ” ಎಂದು ಹೇಳಿದ್ದಾರೆ.

ತನ್ನ ಲೈಂಗಿಕ ಪ್ರಕರಣ ಹೊರಬೀಳುತ್ತಿದ್ದಂತೆ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ ರೇವಣ್ಣ ತನ್ನ ರಾಜತಾಂತ್ರಿಕ ಪಾಸಪೋರ್ಟನ್ನು ದುರುಪಯೋಗ ಪಡಿಸಿಕೊಂಡು ಬೇರೆ ದೇಶಕ್ಕೆ ಪಲಾಯನ ಮಾಡಿದ್ದಾರೆ ಅವರ ಪಾಸಪೋರ್ಟನ್ನು ರದ್ದುಗೊಳಿಸುವಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ (Modi) ಯವರಿಗೆ 2ನೇ ಪತ್ರ ಬರೆದಿದ್ದಾರೆ. ಸರ್ಕಾರದ ಈ ಮನವಿಯನ್ನು ವಿದೇಶಾಂಗ ಸಚಿವಾಲಯವು ಸ್ವೀಕರಿಸಿದ್ದು, ಇನ್ನೂ ಪ್ರಕ್ರಿಯೆಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

ಮೇ 22ರಂದು ಬರೆದ ಪತ್ರದಲ್ಲಿ ಪ್ರಜ್ವಲ ರೇವಣ್ಣ ತನ್ನ ಹೇಯ ಕೃತ್ಯ ಸುದ್ದಿ ಹೊರಗೆ ಬೀಳುತ್ತಿದ್ದಂತೆ, ಅವನ ವಿರುದ್ಧ ಎಫ್‌ಐರ್ (FIR) ದಾಖಲಾಗುವ ಕೆಲವೇ ಗಂಟೆಗಳ ಮೊದಲು ತಮ್ಮ ರಾಜತಾಂತ್ರಿಕ ಪಾಸಪೋರ್ಟ ಬಳಸಿಕೊಂಡು ವಿದೇಶಕ್ಕೆ ಪ್ರಯಾಣ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ಮತ್ತೇ ಅವರು ತಮ್ಮ ಕ್ರಿಮಿನಲ್ ಮೊಕದ್ದಮೆಗಳಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಪ್ರಯಾಣ ಮಾಡುವ ಮೂಲಕ ರಾಜತಾಂತ್ರಿಕ ಸವಲತ್ತುಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ.

ಪ್ರಜ್ವಲ ರೇವಣ್ಣರವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಹಲವು ವಿಡಿಯೋಗಳು ಕರ್ನಾಟಕ ರಾಜ್ಯದ ಕೆಲವೆಡೆ ಹರಿದಾಡಿದ್ದು, ಮೊದಲ ಹಂತದ ಲೋಕಸಭೆ ಚುನಾವಣೆಯ ಮತದಾನಕ್ಕಿಂತ ಮುನ್ನ ಪ್ರಜ್ವಲ ರೇವಣ್ಣ ವಿರುದ್ಧ ಅರೆಸ್ಟ ವಾರೆಂಟ ಹೊರಡಿಸಲಾಗಿತ್ತು. ಹಾಸನದಿಂದ ಬಿಜೆಪಿ-ಜೆಡಿಎಸ್ (BJP-JDS) ಅಭ್ಯರ್ಥಿಯಾಗಿರುವ ಈಗಾಗಲೇ ಪ್ರಜ್ವಲ ರೇವಣ್ಣನ (Prajwal Revanna) ವಿರುದ್ಧ ಲೈಂಗಿಕ ಕಿರುಕುಳ, ಅತ್ಯಾಚಾರ, ದೌರ್ಜನ್ಯ, ಬೆದರಿಕೆ, ಬ್ಲಾಕಮೇಲ್‌ಗಳಂತಹ ಆರೋಪಗಳು ದಾಖಲೆಯಾಗಿದ್ದು, ಇಂಟರಪೊಲ್ ಅತನ ವಿರುದ್ಧ ಬ್ಲೂö್ಯ ಕಾರ್ನರ್ ನೋಟಿಸ್ (Blue Corner Notice) ಜಾರಿ ಮಾಡಿದೆ.

ಈ ಪ್ರಕರಣದ ತನಿಖೆಗಾಗಿ ನಮ್ಮ ರಾಜ್ಯ ಸರ್ಕಾರವು ಈಗಾಗಲೇ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದು, ನಮ್ಮ ಸರ್ಕಾರವು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಪ್ರಮುಖವಾದ ಕ್ರಮಗಳನ್ನು ಕೈಗೊಂಡಿದೆ ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಎಸ್‌ಐಟಿ (SIT) ತಮ್ಮ ತನಿಖೆಯನ್ನು ನಡೆಸಲು ಆರೋಪಿಯ ಉಪಸ್ಥಿತಿಯು ಅವಶ್ಯಕವಾಗಿದೆ, ಇಂತಹ ಸಮಯದಲ್ಲಿ ಆರೋಪಿಯು ತಲೆಮರೆಸಿಕೊಂಡಿರುವುದು ತೀವ್ರ ಕಳವಳಕಾರಿ ವಿಷಯವಾಗಿದೆ. ಲುಕ್ ಔಟ್ ಸುತ್ತೋಲೆ, ಬ್ಲೂö್ಯ ಕಾರ್ನರ್ ನೋಟಿಸ್ ಮತ್ತು ತನಿಖಾ ಅಧಿಕಾರಿಗಳಿಂದ ಎರಡು ನೋಟಿಸ್‌ಗಳ ಹೊರತಾಗಿಯೂ ಆರೋಪಿಯು ಬರದೇ ಇರುವುದು ವಿಷಾದನಿಯ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಆದ್ದರಿಂದ 1967ರ ಪಾಸಪೋರ್ಟ ಕಾಯಿದೆಯ ಸೆಕ್ಷನ್ 10(3)(ಎಚ್) ಅಡಿಯಲ್ಲಿ ಅಥವಾ ಯಾವುದೇ ಸಂಬಂಧಿತ ಅಡಿಯಲ್ಲಿ ಪ್ರಜ್ವಲ ರೇವಣ್ಣರವರ ರಾಜತಾಂತ್ರಿಕ ಪಾಸಪೋರ್ಟನ್ನು ರದ್ದುಗೊಳಿಸಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಮತ್ತು ತ್ವರಿತ, ಅಗತ್ಯ ಕ್ರಮಗಳನ್ನು ತಗೆದುಕೊಳ್ಳಲು ನಾನು ನಿಮ್ಮನ್ನು ಒತ್ತಾಯಿಸುತ್ತಿದ್ದೇನೆ. ಕಾನೂನು, ಸಾರ್ವಜನಿಕ ಹಿತಾಶಕ್ತಿಯಿಂದ ಅವರು ದೇಶಕ್ಕೆ ಮರಳುವುದನ್ನು ಸುರಕ್ಷಿತಗೊಳಿಸಿ” ಎಂದು ಕೇಳಿಕೊಂಡಿದ್ದಾರೆ.

ರೇವಣ್ಣ ಅವರ ವಿರುದ್ಧ ನೀಡಿರುವ ಬಂಧನ ವಾರೆಂಟ ಆಧಾರದ ಮೇಲೆ ಅವರ ರಾಜತಾಂತ್ರಿಕ ಪಾಸಪೋರ್ಟ ರದ್ದುಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ (G Parameshwara) ಅವರು ಹೇಳಿಕೆ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡಿದಿದೆ. ನ್ಯಾಯಾಲಯದಿಂದ ಬಂಧನ ವಾರೆಂಟ್ ಜಾರಿಯಾಗಿದೆ, ಆದರೂ ಕೇಂದ್ರ ಸರ್ಕಾರ ಪಾಸಪೋರ್ಟ ರದ್ದುಗೊಳಿಸಿಲ್ಲ ಎಂದಿದ್ದರು.

Exit mobile version