ಶಿವಮೊಗ್ಗ: ನಗರದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ(Reporters) ಸಂವಾದ ನಡೆಸಿದ ಬಹುಭಾಷಾ ನಟ ಪ್ರಕಾಶ್ ರೈ(Prakash Rai) ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಕೈಗೊಂಡಿರುವ ಬಹುತೇಕ ಯೋಜನೆಗಳೇ ವಿಫಲವಾಗಿವೆ. ಆದರೆ ಈ ಬಗ್ಗೆ ಮಾತನಾಡುವವರು ಯಾರು ? ಅವರದ್ದು ಅಧಿಕಾರ 5 ವರ್ಷ ಮುಗಿಯುತ್ತೆ. ಅವರೇನು ದೇವರಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಸರ್ಕಾರ(Government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಜನಪರವಾಗಿದೆ ಇದರಿಂದ ಜನರಿಗೆ ತುಂಬಾ ಒಳ್ಳೆಯದಾಗುತ್ತಿದೆ. ಈ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ವಿರೋಧಿಸಿದ್ದಾರೆ. ದೇಶದಲ್ಲಿ ಅವರ ಯೋಜನೆಗಳೇ ಫೇಲ್ಯೂರ್(Failure) ಆಗಿವೆ ಎಂದರು.

ಪಠ್ಯ ಪುಸ್ತಕಗಳ ಬದಲಾವಣೆ ವಿಚಾರ.
ಈ ವಿಷಯದಲ್ಲಿ ಮಕ್ಕಳ ಮೇಲೆ ಸರ್ಕಾರ ಅನ್ಯಾಯ ಮಾಡಿದ ಹಾಗೆ. ಪಠ್ಯ ಪುಸ್ತಕಗಳ(Text Books) ಬದಲಾವಣೆ ಮೂಲಕ ಮಕ್ಕಳ ಮೇಲೆ ಕೆಟ್ಟ ಪರಿಣಾಮವು ಬೀರುತ್ತಿದೆ. ಅವರು ನಮ್ಮ ಮೇಲೆ ಅಂದರೆ ಜನರ ಮೇಲೆ ನಮ್ಮ ದುಡ್ಡು, ನಾವು ಕೊಟ್ಟ ಅಧಿಕಾರದಿಂದ ಸವಾರಿ ಮಾಡುತ್ತಿದ್ದಾರೆ. ಮಕ್ಕಳ ಮೇಲೆ ಪಠ್ಯ ಪುಸ್ತಕಗಳ ಬದಲಾವಣೆ ಪರಿಣಾಮ ಬೀರುತ್ತದೆ. ಜನರ ದುಡ್ಡಿನಿಂದ ಐಷಾರಾಮಿ ಕಾರಿನಲ್ಲಿ ಓಡಾಡಿ, ನಮ್ಮ ಮಕ್ಕಳ ಭವಿಷ್ಯದ ಮೇಲೆ ಇದೀಗ ಪರಿಣಾಮ ಉಂಟು ಮಾಡುತ್ತಿದ್ದಾರೆ.ಕೇಸರಿ ಬಣ್ಣವನ್ನು ಇಡೀ ಕಾಲೇಜು, ಶಾಲೆಗಳಲ್ಲಿ ಬಳಿದರೆ ಹೇಗೆ….!? ಎಂದರು.
ಬಸ್ಸಿನಲ್ಲಿ ಮುಸ್ಲಿಂ ನಿರ್ವಾಹಕನ ಟೋಪಿ ಪ್ರಕರಣ
ಓರ್ವ ಹೆಣ್ಣುಮಗಳು ಬಸ್ಸಿನಲ್ಲಿ(Bus) ಕಾರ್ಯ ನಿರ್ವಹಿಸುತ್ತಿದ್ದ ಮುಸ್ಲಿಂ(Muslim) ನಿರ್ವಾಹಕ ಹಾಕಿರುವ ಟೋಪಿ ತೆಗಿ ಎಂದು ಜಗಳ ಮಾಡ್ತಾಳೆ. ಅಯ್ಯಪ್ಪ ಸ್ವಾಮಿ(Ayyappa Swamy) ಭಕ್ತ ಕಂಡಕ್ಟರ್ ಮಾರನೇ ದಿನ ಮಾಲೆ ಹಾಕಿಕೊಂಡು ಓಡಾಡಬಹುದಲ್ಲ…? ಇದರಿಂದ ಯಾವುದೇ ಸಮಸ್ಯೆ ಆಗಿಲ್ಲವಲ್ಲ..ನೋಡಿ ನಾವು ಎಂಥ ಪರಿಸ್ಥಿತಿಗೆ ತಲುಪಿದ್ದೇವೆ..

ಆದರೆ ಇನ್ನೊಬ್ಬ ಆಂಜನೇಯನ ಭಕ್ತ ಅವನು ಹಣೆಗೆ ತಿಲಕ ಇಟ್ಟುಕೊಂಡು ಬರುತ್ತಾನೆ. ಬರಲಿ ಪಾಪ. ಅವನು ಅವನ ಪಾಡಿಗೆ ಕಂಡಕ್ಟರ್(Conductor) ಕೆಲಸ ಮಾಡುತ್ತಿದ್ದಾನೆ ತಾನೇ ಅಷ್ಟೇ. ಇವತ್ತಿನ ತನಕ ಇದರಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಅವನು ಮಾಡುತ್ತಿರುವುದು ಕಂಡಕ್ಟರ್ ಕೆಲಸ ಅಲ್ಲವೇ…? ನಾವು ಸುತ್ತಲೂ ನೋಡಿಕೊಂಡು ಆ ಹೆಣ್ಣು ಮಗಳು ಬೈಯುತ್ತಿರುವುದನ್ನ ನೋಡಿಯೂ ಸುಮ್ಮನಿದ್ದೇವೆ…? ಈ ರೀತಿ ಆಗಬಾರದು ಅಲ್ವಾ…?
ಅವರವರ ಧರ್ಮವನ್ನು ನಮ್ಮ ದೇಶದಲ್ಲಿ ಅವರವರು ಪಾಲಿಸಬೇಕು ಎಂದರು.
ಸೌಜನ್ಯ ಕೊಲೆ ಪ್ರಕರಣ ವಿಚಾರ
ಮಂಪರು ಪರೀಕ್ಷೆಗೆ ಅಪರಾಧಿಗಳನ್ನು ಒಳಪಡಿಸಬೇಕೆಂದು ಅನೇಕ ಬಾರಿ ಆಗ್ರಹ ಕೇಳಿ ಬರುತ್ತಿದೆ.ನಿಜಾಂಶ ತಿಳಿಯುವ ಅವಶ್ಯಕತೆ ಇದ್ದರೆ ಹಾಗೂ ಇದು ತನಿಖೆಯ ಭಾಗವಾಗಿದ್ದರೆ, ಮಾಡಲಿ.bನನ್ನ ಆಕ್ಷೇಪವೇನೂ ಈ ವಿಷಯಗಳ ಬಗ್ಗೆ ಇಲ್ಲ. ಅಷ್ಟೇ ಅಲ್ಲದೆ ಧರ್ಮಸ್ಥಳ(Dharmasthala) ಬಿಡಿ ಅಥವಾ ಧರ್ಮ ಬಿಡಿ ಎಂದು ನಾನು ಹೇಳಲು ಆಗುವುದಿಲ್ಲ . ಕೊನೆಯದಾಗಿ ಧರ್ಮ ಕೂಡ ಉಳಿಯಬೇಕು ಎಂದರು.

ಮಕ್ಕಳಿಗಾಗಿ ವಿಶೇಷವಾಗಿ ರಂಗ ತರಬೇತಿ
ನಾವು ರಂಗಭೂಮಿ ಕಲೆ ಬೆಳೆಸಲು ಹೊರಟಿದ್ದೇವೆ. ವಿಶೇಷವಾಗಿ ರಂಗಕಲೆ ಕಲಿಸಲು ಮಕ್ಕಳಿಗಾಗಿ ಮುಂದಾಗಿದ್ದೆವೆ. ಪ್ರಪಂಚದ ಬೇರೆ ಬೇರೆ ಬರಹಗಾರರ ಬರವಣಿಗೆ ಹಾಗೂ ಕವಿಗಳ ಬರವಣಿಗೆ ಇಟ್ಟುಕೊಂಡು ನಾಟಕ (Drama)ಮಾಡಿಸಲು ಹೊರಟಿದ್ದೆವೆ. ನಟನ ನಡುವೆ ಮತ್ತು ಪ್ರೇಕ್ಷಕನ ನಡುವೆ ಬಾಂಧ್ಯವ್ಯ ಬೆಸೆಯಲು ಮುಂದಾಗಿದ್ದೆವೆ. ಮನುಷ್ಯನಲ್ಲಿ ಪ್ರೀತಿ ಇದೆ, ಅದನ್ನು ಹಂಚಿ ಬದುಕಬೇಕು. ಇವತ್ತುಕೂಡ ದೇಶದಲ್ಲಿ ಹಿಂಸೆಗಳು ನಡೆಯುತ್ತಿದೆ. ಮಾನವೀಯತೆ ತುಳಿಯುವವರ ವಿರುದ್ಧ ನಾವು ಪ್ರೀತಿಯಿಂದ ನಿಲ್ಲುತ್ತಿದ್ದೆವೆ. ನಮಗೆ ಯಾವುದೇ ಕಾರಣಕ್ಕೋ ದ್ವೇಷ ಬೇಕಿಲ್ಲ, ನಮಗೆ ಬೇಕಾಗಿರೋದು ಬರೀ ಪ್ರೀತಿ. ಸಮಾನತೆ ಎಲ್ಲರಲ್ಲೂ ಇರಬೇಕು. ದೇಶ ಹಾಳಾಗಲು ನಮ್ಮ ಕ್ರೌರ್ಯ, ವಿರೋಧ ಕಾರಣವಾಗುತ್ತದೆ ಎಂದರು.
ರಶ್ಮಿತಾ ಅನೀಶ್