ಸದ್ಯ ರಾಷ್ಟ್ರಪ್ರೇಮ ಇರಬೇಕಾಗಿರೋದು ಬೆಲೆ ಏರಿಕೆಯನ್ನು(Price Hike) ಕಡಿಮೆ ಮಾಡಿಸಿ ರಾಷ್ಟ್ರಪ್ರೇಮ ತೋರಿಸಬೇಕು. ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಪಂಚಭಾಷಾ ನಟ(Actor) ಮತ್ತು ರಾಜಕಾರಣಿ(Politician) ಪ್ರಕಾಶ್ ರಾಜ್(Prakash Raj) ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರಪ್ರೇಮ ಇರಬೇಕಾಗಿರೋದು ಬೆಲೆ ಏರಿಕೆಯನ್ನು ಕಡಿಮೆ ಮಾಡಿಸಿ ರಾಷ್ಟ್ರಪ್ರೇಮ ತೋರಿಸಬೇಕು. ಯುವಕರಿಗೆ ಕೆಲಸ ಕೊಡುವ ಮೂಲಕ ರಾಷ್ಟ್ರಪ್ರೇಮ ತೋರಬೇಕು. ಯುವಕರು ಕೆಲಸವಿಲ್ಲದೇ ಅಲೆಯುತ್ತಿರುವಾಗ ನೀವು ರಾಷ್ಟ್ರಪ್ರೇಮದ ಪಾಠ ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು(Central Government) ಟೀಕಿಸಿದರು.
ಪ್ರಧಾನಮಂತ್ರಿ(PrimeMinister) ಬರುತ್ತಾರೆಂದು ರೋಡ್ ಮಾಡುತ್ತಾರೆ. ಆದರೆ ಸರ್ಕಾರಕ್ಕೆ ಟ್ಯಾಕ್ಸ್(Tax) ಕಟ್ಟೋದು ನಾವು, ರಸ್ತೆ ನಮಗಾಗಿ ಮಾಡಬೇಕು. ಪ್ರತಿದಿನ ಆ ರಸ್ತೆಯಲ್ಲಿ ನಾವು ಓಡಾಡುತ್ತೇವೆ. ಆದರೆ ಒಮ್ಮೆ ಬಂದು ಹೋಗುವ ಪ್ರಧಾನಿಗಾಗಿ ರಸ್ತೆ ಮಾಡುತ್ತಾರೆ. ಅದಕ್ಕಾಗಿ 38 ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಇದು ಯಾವ ನ್ಯಾಯ? ಮಂತ್ರಿಗಳು, ಶಾಸಕರು, ಸಂಸದರು ಯಾರು ಅವರ ಮನೆಯಿಂದ ಒಂದು ರೂಪಾಯಿ ತಂದಿಲ್ಲ. ಅವರ ಮನೆ ಬಾಡಿಗೆ, ಓಡಾಡಲು ಪೆಟ್ರೋಲ್, ಸಂಬಳ, ಭತ್ಯೆ, ಬಟ್ಟೆ ಸೇರಿದಂತೆ ಎಲ್ಲವನ್ನೂ ನಾವೇ ಕೊಟ್ಟು, ನಮ್ಮನ್ನು ಸ್ವಲ್ಪ ನೋಡಿಕೊಳ್ಳಿ ಎಂದು ಅಂತಿದ್ದೇವೆ ಅಷ್ಟೇ ಎಂದರು.

ಇನ್ನು ಸ್ವಾತಂತ್ರ್ಯ ದಿನೋತ್ಸವಕ್ಕೆ ಪಾಲಿಸ್ಟರ್ ಧ್ವಜಗಳನ್ನು(Polyster Flag) ಆಮದು(Import) ಮಾಡಿಕೊಳ್ಳಲಾಗುತ್ತಿದೆ. ಅದರಿಂದ ಲಕ್ಷಾಂತರ ಜನ ನೇಕಾರರ ಬದುಕು ನಾಶವಾಗುತ್ತದೆ. ನೇಕಾರಿಕೆಯನ್ನೇ ನಂಬಿಕೊಂಡಿರುವ ಲಕ್ಷಾಂತರ ಕಾರ್ಮಿಕರು ನಮ್ಮ ದೇಶದಲ್ಲಿದ್ದಾರೆ. ಸರ್ಕಾರ ಖಾದಿಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಅದೇ ರೀತಿ ಸಣ್ಣ ಕಾರ್ಮಿಕರು ಮಾಡುವ ಬೀಡಿ ಕಟ್ಟುವುದಕ್ಕೂ ಜಿಎಸ್ಟಿ(GST) ವಿಧಿಸಲಾಗುತ್ತಿದೆ. ಹಾಲಿಗೂ ಜಿಎಸ್ಟಿ ವಿಧಿಸಿದ್ದಾರೆ. ಈ ರೀತಿ ಪ್ರತಿಯೊಂದಕ್ಕೂ ಟ್ಯಾಕ್ಸ್ ಕಟ್ಟಲು ಸಾಧ್ಯವಿಲ್ಲ. ಇದರಿಂದ ಸಾಮಾನ್ಯರ ಬದುಕು ನಾಶವಾಗುತ್ತದೆ ಎಂದು ಸರ್ಕಾರವನ್ನು ಟೀಕಿಸಿದರು.