ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ : ಪ್ರಕಾಶ್‌ರಾಜ್‌

Bengaluru :  ಬಹುಭಾಷಾ ನಟ ಪ್ರಕಾಶ್‌ ರಾಜ್‌ (Prakash Raj new controversy) ಇದೀಗ ಮತ್ತೋಮ್ಮೆ ಸುದ್ದಿಯಾಗಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ಮೋದಿಯವರನ್ನು ಟೀಕಿಸುವ ಮೂಲಕ ಸದಾ ಸುದ್ದಿಯಲ್ಲಿರುತ್ತಿದ್ದ

ಪ್ರಕಾಶ್‌ ರಾಜ್‌ ಈ ಬಾರಿ ಟ್ವೀಟರ್‌ನಲ್ಲಿ(Prakash Raj new controversy) ಕನ್ನಡ ಪರ ಧ್ವನಿ ಎತ್ತುವ ಮೂಲಕ ಸದ್ದು ಮಾಡುತ್ತಿದ್ದಾರೆ.

ಕರ್ನಾಟಕ ನಕಾಶೆ ಒಳಗೆ ‘ನಂಗೆ ಹಿಂದಿ ಬರಲ್ಲ ಹೋಗ್ರಪ್ಪ’ ಎಂದು ಬರೆದುಕೊಂಡಿರುವ ಶರ್ಟ್​ನ ಪ್ರಕಾಶ್ ರಾಜ್ ಧರಿಸಿದ್ದಾರೆ. ಈ ಫೋಟೋವನ್ನು ಶಶಾಂಕ್ ಶೇಖರ್ ಖಾ (Shashank Shekar Kha) ಎಂಬುವವರು ಶೇರ್‌ಮಾಡಿ,

‘ತಮಿಳುನಾಡು ಪೊಲೀಸರೇ ಪ್ರಕಾಶ್ ರಾಜ್ ವಿರುದ್ಧ ಎಫ್​ಐಆರ್​ (FIR)ದಾಖಲು ಮಾಡಿಕೊಂಡಿದ್ದೀರೇ’ ಎಂದು ಪ್ರಶ್ನೆ ಮಾಡಿ ಟ್ವೀಟ್‌ಮಾಡಿದ್ದಾರೆ.

ಇದನ್ನು ಓದಿ: ಸರ್ಕಾರಿ ನೌಕರರ ವೇತನದಲ್ಲಿ ಶೇ.೧೭ ಏರಿಕೆ ! ಮೂಗಿಗೆ ತುಪ್ಪ ಸವರಿದ್ರಾ ಸಿಎಂ

 ಈ ಟ್ವೀಟ್​​ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಪ್ರಕಾಶ್‌ ರಾಜ್‌ಅವರು,  “ನನ್ನ ಬೇರು ನನ್ನ ಮೂಲ ನನ್ನ ಕನ್ನಡ.. ನನ್ನ ತಾಯಿಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ ಹೆದರೊಲ್ಲ, ಅಷ್ಟೇ”  ಎಂದು ಟ್ವೀಟ್‌ (Tweet) ಮಾಡಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ, “ನಾನು ಏಳು ಭಾಷೆಗಳನ್ನು ಬಲ್ಲೆ. ಒಂದು ಭಾಷೆಯನ್ನು ಕಲಿತು ಮಾತನಾಡುವುದು ಎಂದರೆ ಆ ಭಾಷೆಯ ಜನರನ್ನು ಗೌರವಿಸುವುದು. ನಾನು ಹೋಗುವಲ್ಲೆಲ್ಲಾ ಆಯಾ ಭಾಷೆಯಲ್ಲಿ ಸಂವಾದಿಸುತ್ತೇನೆ.

ನನ್ನ ಭಾಷೆಯನ್ನು ಹೇರುವುದಿಲ್ಲ. ಆದರೆ ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ” ಎಂದು ಪ್ರಕಾಶ್ ರಾಜ್ (Prakash Raj) ಬರೆದುಕೊಂಡಿದ್ದಾರೆ.

ಜೊತೆಗೆ ಹಿಂದಿ ಹೇರಿಕೆ ನಿಲ್ಲಿಸಿ ಎನ್ನುವ ಹ್ಯಾಶ್​​ಟ್ಯಾಗ್ ಹಾಕಿದ್ದಾರೆ.

ಇನ್ನು ಕರ್ನಾಟಕದ ಪುತ್ತೂರಿನವರಾದ ಪ್ರಕಾಶ್ ರಾಜ್‌ ಬೆಂಗಳೂರಿನಲ್ಲಿ ಸೈಂಟ್ ಜೋಸೆಫ್ಸ್(St.Joseph) ಕಾಲೇಜಿನಲ್ಲಿ ಓದುತ್ತಿದ್ದಾಗಲೇ, ನಾಟಕಗಳಲ್ಲಿ ನಟಿಸಿ ಮುಂದೆ ಹವ್ಯಾಸಿ ರಂಗಭೂಮಿ ಮತ್ತು ದೂರದರ್ಶನದ ಪಾತ್ರಗಳಲ್ಲಿ ನಟಿಸಿದರು.

ಗುಡ್ಡದ ಭೂತ, ಬಿಸಿಲು ಕುದುರೆ, ಹರಕೆಯ ಕುರಿ, ನಾಗಮಂಡಲದಂತಹ ಕಲಾತ್ಮಕ ಚಿತ್ರಗಳ ಮೂಲಕ ಪ್ರಕಾಶ್‌ರಾಜ್‌ಕನ್ನಡದಲ್ಲಿ ಹೆಸರು ಮಾಡಿದರು. ನಂತರ ಅವರು ತಮಿಳು ಚಿತ್ರರಂಗಕ್ಕೆ ಹೋಗಿ ದೊಡ್ಡ ಹೆಸರು ಮಾಡಿದರು. 

ತಮಿಳಿನ ನಂತರ ಹಿಂದಿ, ತೆಲುವು, ಮಲೆಯಾಳಿ ಸೇರಿದಂತೆ ಏಳು ಭಾಷೆಗಳ ಚಿತ್ರಗಳಲ್ಲಿ  ಪ್ರಕಾಶ್‌ರಾಜ್‌ ಅಭಿನಯಿಸಿದ್ದಾರೆ.

Exit mobile version