ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮ ಸೇನೆಯ 25 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ : ಪ್ರಮೋದ್ ಮುತಾಲಿಕ್‌

Bengaluru :  ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Pramod Muthalik Politics Game) ತಮ್ಮ ಸಂಘಟನೆಯ 25 ಸದಸ್ಯರು ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ‌ಘೋಷಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಬಿಜೆಪಿ ಸರ್ಕಾರದಿಂದ (BJP Government) ಹಿಂದೂ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ! ಹೀಗಾಗಿ ಇದೀಗ ನಾವೇ ಅಖಾಡಕ್ಕೆ ಇಳಿಯುತ್ತಿದ್ದೇವೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಶ್ರೀರಾಮ ಸೇನೆಯ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.

ನಾನು ಉಡುಪಿಯ (Udupi) ಕಾರ್ಕಳದಿಂದ ಸ್ಪರ್ಧೆ ಮಾಡಲು ಬಯಸಿದ್ದೇನೆ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. ಕಾರ್ಕಳದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಮೋದ್ ಮುತಾಲಿಕ್, ನೀವು ನನಗಾಗಿ ನಿಮ್ಮ ಸ್ಥಾನವನ್ನು ತ್ಯಾಗ ಮಾಡುತ್ತೀರಾ ನೋಡೋಣ?

https://fb.watch/hqrANwX1d2/ ಸುಪ್ರೀಂಕೋರ್ಟ್ ಆದೇಶದವರೆಗೂ ಸಂಯಮ ಕಾಪಾಡಿ, ಗಡಿ ವಾದವನ್ನು ರಾಜಕೀಕರಣಗೊಳಿಸಬೇಡಿ! : ಅಮಿತ್ ಶಾ

ನನ್ನ ಗುರುಗಳು ಬಂದಿದ್ದಾರೆ. ನನ್ನನ್ನು ಬೆಳೆಸಿದವರು ಬಂದಿದ್ದಾರೆ. ಹೀಗಾಗಿ ನಾನು ಕಾರ್ಕಳದಿಂದ ಸ್ಪರ್ಧಿಸುವುದಿಲ್ಲ ಎಂದು ನಿಮ್ಮ ನಾಯಕರಿಗೆ ಹೇಳಿ. ನಾನು ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ, ಆದರೆ ನಮ್ಮ ಗುರುಗಳ ವಿರುದ್ದ ಕಾರ್ಕಳದಿಂದ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ.

ನಿಜವಾಗಿಯೂ ನಿಮ್ಮಲ್ಲಿ ಆರ್‌ಎಸ್‌ಎಸ್ (RSS) ಮನೋಭಾವ ಇದ್ದರೆ, ನಿಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ, ಶಾಸಕ ಸ್ಥಾನವನ್ನು ತ್ಯಾಗ ಮಾಡಿ ಎಂದು ಹಾಲಿ ಕಾರ್ಕಳ ಬಿಜೆಪಿ ಶಾಸಕ ಸುನೀಲ್‌ ಕುಮಾರ್‌ಗೆ ಮುತಾಲಿಕ್‌ ಸವಾಲು ಹಾಕಿದ್ದಾರೆ.

ಇನ್ನು ಶ್ರೀರಾಮ ಸೇನೆಯ ಸದಸ್ಯರು ಬೆಂಗಳೂರಿನಿಂದ ಕರಾವಳಿ (Pramod Muthalik Politics Game) ಕರ್ನಾಟಕದವರೆಗೆ ವ್ಯಾಪಿಸಿರುವ ವಿವಿಧ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸುವುದರಿಂದ ಇದರ ಪರಿಣಾಮ ನೇರವಾಗಿ ಬಿಜೆಪಿ ಮೇಲಾಗಲಿದೆ. ಬಲಪಂಥೀಯ(Right Wing) ಸಂಘಟನೆಯಾಗಿರುವ ಶ್ರೀರಾಮ ಸೇನೆಯು ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಹೆಚ್ಚು ಪ್ರಬಲವಾಗಿದೆ.

ಇದನ್ನೂ ಓದಿ : https://vijayatimes.com/biopic-of-vijaya-sankeshwar/

ಹೀಗಾಗಿ ಶ್ರೀರಾಮ ಸೇನೆ ಚುನಾವಣೆಗೆ ಸ್ಪರ್ಧೆ ಮಾಡಿದರೆ, ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವು ಕಷ್ಟಕರವಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Exit mobile version