ರಾಗಿಗುಡ್ಡದ ಹಿಂದೂ ಸಮುದಾಯದವರಿಗೆ ಸಾಂತ್ವನ ಹೇಳಲು ಹೊರಟಿದ್ದವನ ಬಂಧನ: ಪ್ರಮೋದ್‌ ಮುತಾಲಿಕ್‌ ಆಕ್ರೋಶ

Davanagere: ರಾಜ್ಯದಲ್ಲಿ ಹಿಂದೂಗಳಿಗೆ ಸ್ವಾತಂತ್ರ್ಯವಿಲ್ಲ. ಶಿವಮೊಗ್ಗದ ರಾಗಿಗುಡ್ಡದಲ್ಲಿ (Pramod Muthalik Slams Congress) ಇತ್ತೀಚೆಗೆ ಗಲಭೆ ನಡೆದಿದ್ದ ಹಿನ್ನೆಲೆಯಲ್ಲಿ ಅಲ್ಲಿನ

ಹಿಂದೂಗಳನ್ನು ಭೇಟಿಯಾಗಲುಹೊರಟಿದ್ದೆ, ನಾನೇನು ಅಲ್ಲಿ ಪ್ರಚೋದನಕಾರಿ ಭಾಷಣ ಮಾಡಲು ಹೊರಟಿರಲಿಲ್ಲ. ನಮ್ಮದು ಎಂತ ಕರ್ಮ ನೋಡಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ

ಪ್ರಮೋದ್‌ ಮುತಾಲಿಕ್‌ (Pramod Muthalik) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದ ಮಾಸ್ತಿಕಟ್ಟೆ ಬಳಿ ತಡರಾತ್ರಿ ಪೊಲೀಸರು, ರಾಗಿಗುಡ್ಡಕ್ಕೆ ತೆರಳುತ್ತಿದ್ದ ಪ್ರಮೋದ್ ಮುತಾಲಿಕ್ ಅವರನ್ನು ವಶಕ್ಕೆ ಪಡೆದಿದ್ದು, ಪ್ರಚೋದನಕಾರಿ ಭಾಷಣ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ

ಪ್ರಮೋದ್‌ ಮುತಾಲಿಕ್‌ ಅವರನ್ನು ಬಂಧಿಸಿ ತದ ನಂತರ ಅವರನ್ನು ಶಿವಮೊಗ್ಗ ಗಡಿ ದಾಟಿಸಿ ದಾವಣಗೆರೆಗೆ ತಂದು ಬಿಟ್ಟಿದ್ದರು. ಪೊಲೀಸರ ನಡೆಯನ್ನು ಪ್ರಮೋದ್‌ ಮುತಾಲಿಕ್‌ ಖಂಡಿಸಿದ್ದು,

ಕಾಂಗ್ರೆಸ್‌ (Congress) ಸರ್ಕಾರದ (Pramod Muthalik Slams Congress) ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ದಾವಣಗೆರೆಯಲ್ಲಿ ಮಾತನಾಡಿದ ಅವರು, ಪೊಲೀಸರು ನನ್ನ ಬಸ್ ಟ್ರೇಸ್ (Bus Trace) ಮಾಡಿ ಬಂಧಿಸಿದ್ದಾರೆ. ಬೆಳಗ್ಗೆ 6 ಗಂಟೆಗೆ ದಾವಣಗೆರೆಗೆ ತಂದು ಬಿಟ್ಟಿದ್ದಾರೆ. ನಾನೇನು ಶಿವಮೊಗ್ಗದ

ರಾಗಿಗುಡ್ಡದಲ್ಲಿ ಪ್ರಚೋದನಕಾರಿ ಭಾಷಣ ಮಾಡಲು ಹೊರಟಿರಲಿಲ್ಲ. ನಮ್ಮದು ಎಂತ ಕರ್ಮ ನೋಡಿ ಎಂದ ಪ್ರಮೋದ್ ಮುತಾಲಿಕ್ ಅವರು, ಕಾಂಗ್ರೆಸ್ ಹಿಂದು ವಿರೋಧಿ ಎನ್ನುವುದು ಇದರಿಂದ ಸ್ಪಷ್ಟ ಆಗಿದೆ ಎಂದರು.

ಸಾವಿರಾರು ಜನರ ಸಾವಿಗೆ ಕಾರಣವಾಗಿರುವ ಭಯೋತ್ಪಾದಕ ಅಬ್ದಲ್ ನಾಸಿರ್ ಮದನಿಯನ್ನ ಜಾಮೀನಿನ ಮೇಲೆ ಬಿಟ್ಡು ಕರೆದೊಯ್ಯುತ್ತಾರೆ. ಆತನನ್ನ ತಂದೆಯ ಭೇಟಿಗಾಗಿ ಕರೆದೊಯ್ಯುತ್ತಾರೆ.

ನಾವು ಹಿಂದೂಗಳಿಗೆ ಸಾಂತ್ವನ ಹೇಳಲು ಹೋಗಬಾರದು, ಭಯೋತ್ಪಾದಕರು ಎಲ್ಲಿ ಬೇಕಾದರು ಹೋಗಬಹುದು. ಇದು ಕಾಂಗ್ರೆಸ್ ಸರ್ಕಾರದ ನೀತಿ ಎಂದು ಪ್ರಮೋದ್‌ ಮುತಾಲಿಕ್‌ ಕಿಡಿಕಾರಿದರು.

ಇದನ್ನು ಓದಿ: ಬಿಜೆಪಿ ಗುಂಪೊಂದು ಕಾಂಗ್ರೆಸ್ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದೆ: ಡಿ.ಕೆ.ಶಿವಕುಮಾರ್

Exit mobile version