ನಿತೀಶ್ ಕುಮಾರ್ ಬಿಜೆಪಿ ಸಂಪರ್ಕದಲ್ಲಿದ್ದಾರೆ! ; ಇದಕ್ಕೆ ದೊಡ್ಡ ಪುರಾವೆ ಏನು ಅಂದ್ರೆ : ಪ್ರಶಾಂತ್ ಕಿಶೋರ್

Patna : ಬಿಹಾರ ಮುಖ್ಯಮಂತ್ರಿ (Prashanth Slams Bihar CM) ನಿತೀಶ್ ಕುಮಾರ್ (Nithish Kumar) ಅವರು ಈ ವರ್ಷದ ಆಗಸ್ಟ್‌ನಲ್ಲಿ ಎನ್‌ಡಿಎ ತೊರೆದು ಆರ್‌ಜೆಡಿಯೊಂದಿಗೆ,

ಮತ್ತೆ ಕೈಜೋಡಿಸಿದ್ದರೂ ಕೂಡ ಬಿಜೆಪಿಯೊಂದಿಗಿನ ಸಂಪರ್ಕದ ಕೊಂಡಿಯನ್ನು ಕಳೆದುಕೊಂಡಿಲ್ಲ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashanth Kishore) ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಮೂಲಕ ಸಂಪರ್ಕವಿದೆ ಎಂದು ಹೇಳಿದ್ದಲ್ಲದೇ, ನಿತೀಶ್ ಕುಮಾರ್ ಮೈತ್ರಿಯಿಂದ ಹೊರಬಂದಿದ್ದಾರೆಯೇ ಎಂದು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿದೆ!

ಅವರ ಒಬ್ಬ ಸಂಸದ ಇನ್ನೂ ರಾಜ್ಯಸಭೆಯಲ್ಲಿ ಪ್ರಮುಖ ಸ್ಥಾನವನ್ನು (Prashanth Slams Bihar CM) ಏಕೆ ಹೊಂದಿದ್ದಾರೆ? ಎಂಬುದು ಗೊಂದಲಮಯ.

ನನಗೆ ತಿಳಿದಿರುವಂತೆ ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗೆ ಇನ್ನು ಸಂಪರ್ಕವನ್ನು ಕಳೆದುಕೊಂಡಿಲ್ಲ ಎಂದು ಪ್ರಶಾಂತ್ ಕಿಶೋರ್ ಎಎನ್‌ಐಗೆ ಮಾತನಾಡಿರುವ ವೀಡಿಯೊದಲ್ಲಿ ತಿಳಿದುಬಂದಿದೆ.

“ನನಗೆ ತಿಳಿದಿರುವಂತೆ, ನಿತೀಶ್ ಕುಮಾರ್ ಖಂಡಿತವಾಗಿಯೂ ಮಹಾಘಟಬಂಧನ್ ಜೊತೆಗಿದ್ದಾರೆ.

ಇದನ್ನೂ ಓದಿ : https://vijayatimes.com/state-govt-responds-to-kantara/

ಆದ್ರೆ, ಬಿಜೆಪಿಯೊಂದಿಗೆ ತಮ್ಮ ಸಂಪರ್ಕವನ್ನು ಕಳೆದುಕೊಂಡಿಲ್ಲ, ಜೆಡಿ-ಯು ಸಂಸದರಾಗಿರುವ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಅವರು ತಮ್ಮ ಸ್ಥಾನಕ್ಕೆ ಅಥವಾ ಪಕ್ಷಕ್ಕೆ ರಾಜೀನಾಮೆ ನೀಡಲಿಲ್ಲ ಎಂಬುದೇ ದೊಡ್ಡ ಪುರಾವೆಯಾಗಿದೆ!

ನಿತೀಶ್ ಕುಮಾರ್ ಅವರು ಈ ವರ್ಷದ ಆಗಸ್ಟ್‌ನಲ್ಲಿ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದು, ಮಹಾಘಟಬಂಧನ್‌ನಲ್ಲಿ ರಾಷ್ಟ್ರೀಯ ಜನತಾ ದಳ ಮತ್ತು ಇತರ ಪಕ್ಷಗಳೊಂದಿಗೆ ಮತ್ತೆ ಕೈಜೋಡಿಸಿ ನಂತರ ಬಿಹಾರ ಮುಖ್ಯಮಂತ್ರಿಯಾಗಿ ಮತ್ತೆ ಪ್ರಮಾಣ ವಚನ ಸ್ವೀಕರಿಸಿದ್ದರು.

ಕೇಂದ್ರದಲ್ಲಿ ಬಿಜೆಪಿ(BJP) ವಿರುದ್ಧ ದೊಡ್ಡ ಮೈತ್ರಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಕೆಲವರು ರಾಜಕೀಯ ವಲಯದಲ್ಲಿ ಮಾತನಾಡುತ್ತಿದ್ದಾರೆ. ಆದ್ರೆ, ಇದು ಹೆಚ್ಚು ವಿಶ್ವಾಸಾರ್ಹವಲ್ಲ ಎಂದು ಕಿಶೋರ್ ಹೇಳಿದ್ದಾರೆ.

ನಿತೀಶ್ ಕುಮಾರ್ ಅವರು 17 ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದು, 14 ವರ್ಷಗಳಿಂದ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹೇಳಿದರು. ನಿತೀಶ್ ಕುಮಾರ್ ಮತ್ತು ಪ್ರಹಾಂತ್ ಕಿಶೋರ್ ಇಬ್ಬರೂ ಇತ್ತೀಚೆಗೆ ಪರಸ್ಪರ ಮಾತಿನ ಚಕಮಕಿಯಲ್ಲಿ ಭಾಗಿಯಾಗಿದ್ದರು.

ಜೆಡಿಯುಗೆ ಸೇರ್ಪಡೆಗೊಂಡಿದ್ದ ಮತ್ತು ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಕಿಶೋರ್ ಅವರನ್ನು 2020ರ ಜನವರಿಯಲ್ಲಿ “ಪಕ್ಷದ ನಿರ್ಧಾರಗಳಿಗೆ ವಿರುದ್ಧವಾಗಿ ವರ್ತಿಸಿದ” ಕಾರಣಕ್ಕಾಗಿ ಪಕ್ಷದಿಂದ ಹೊರಹಾಕಲಾಯಿತು.

https://youtu.be/QLbWeNvYzSE GATE CRASH ಹಣ ಕೊಟ್ರೆ ರೇಷನ್‌ !

ಈ ತಿಂಗಳ ಮೊದಲು ನಿತೀಶ್ ಕುಮಾರ್, ಪ್ರಶಾಂತ್ ಕಿಶೋರ್ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಎಸಗಿದ್ದರು. ಈ ಹೇಳಿಕೆಗಳ ವಿರುದ್ಧ ಈಗ ಪ್ರಶಾಂತ್, ನಿತೀಶ್ ಕುಮಾರ್ ಅವರಿಗೆ ಮಾತಿನ ಚಾವಟಿ ಬೀಸಿದ್ದಾರೆ.
Exit mobile version