ಬಿಜೆಪಿ ಶಾಸಕನ ವಿರುದ್ದ ಅತ್ಯಾಚಾರ ಆರೋಪ

ರಾಜಸ್ಥಾನ ನ 18 : ಇಲ್ಲಿನ ಗೋಗುಂಡಾದ ಬಿಜೆಪಿ ಶಾಸಕ ಪ್ರತಾಪ್ ಭೀಲ್ ವಿರುದ್ಧ 10 ತಿಂಗಳ ಅವಧಿಯಲ್ಲಿ ಎರಡು ಅತ್ಯಾಚಾರ ಪ್ರಕರಣ ದಾಖಲಾಗಿದೆ.

ರೋಪಿ ಪ್ರತಾಪ್ ಭೀಲ್, ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ನಂತರ ಮದುವೆಯಾಗುವ ನೆಪವೊಡ್ಡಿ ಅತ್ಯಾಚಾರವೆಸಗಿದ್ದಾರೆ ಎಂದು ಇಬ್ಬರು ಮಹಿಳೆಯರು ಆರೋಪಿಸಿದ್ದಾರೆ.

ಇತ್ತೀಚಿನ ಪ್ರಕರಣವೊಂದರಲ್ಲಿ ಅಂಬಾಮಾತಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಿದ ಮಹಿಳೆ, ಶಾಸಕ ಪ್ರತಾಪ್ ಭೀಲ್ ತನಗೆ ಕೆಲಸ ನೀಡುವುದಾಗಿ ಭರವಸೆ ನೀಡಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಸುಖೇರ್ ನಲ್ಲಿ 10 ತಿಂಗಳ ಹಿಂದೆ ಕೂಡ ಶಾಸಕರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.

ಮದುವೆ ನೆಪದಲ್ಲಿ ಶಾಸಕ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ಮಹಿಳೆ ಆರೋಪಿಸಿದ್ದಾಳೆ. ಮಹಿಳೆ ಹಾಗೂ ಶಾಸಕ ಒಂದೇ ಸಮುದಾಯಕ್ಕೆ ಸೇರಿದ್ದು, ಕಳೆದ ಮೂರು ವರ್ಷಗಳ ಹಿಂದೆ ಪರಿಚಯವಾಗಿದ್ದರು ಎನ್ನಲಾಗಿದೆ. ಕಾಂಗ್ರೆಸ್​ ಭದ್ರಕೋಟೆಯಾಗಿದ್ದ ಗೋಗುಂಡಾದಲ್ಲಿ ಬಿಜಿಪಿ ಶಾಸಕ ಪ್ರತಾಪ್​ಲಾಲ್​ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ.

Exit mobile version