ಚಳಿಗಾಲದಲ್ಲಿ ಗರ್ಭಿಣಿಯರು ತಮಗೆ ತಾವೇ ಆರೈಕೆ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

Health : ಚಳಿಗಾಲದಲ್ಲಿ (Pregnant care in winter time) ಶೀತ, ಕೆಮ್ಮು,ಚರ್ಮದ ಸಮಸ್ಯೆ ಸೇರಿ ಇನ್ನಿತರ ಕಾಯಿಲೆಗಳು ಸಾಮಾನ್ಯವಾಗಿ ಕಾಣಿಸುವಂತಹ ಸಮಸ್ಯೆಗಳು. ಹೆಣ್ಣಿಗೆ ಗರ್ಭಾವಸ್ಥೆ ಹಂತ ಅಮೂಲ್ಯವಾದ ಘಟ್ಟ.

ಈ ಹಂತದಲ್ಲಿ ತನ್ನ ಹಾಗೂ ಮಗುವಿನ ಕಾಳಜಿ ಅವಳಿಗೆ ಅತ್ಯವಶ್ಯಕವಾಗಿರುತ್ತದೆ. ಗರ್ಭಿಣಿ ಮಹಿಳೆ (pregnant woman) ತನ್ನ ಕಾಳಜಿಯ ಬಗ್ಗೆ ತಾನೇ ನಿರ್ಲಕ್ಷ್ಯ ವಹಿಸಿದರೆ ಮಗುವಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುವುದು ಖಂಡಿತಾ.


ಚಳಿಗಾಲದ ದಿನಗಳಲ್ಲಿ ಗರ್ಭಿಣಿಯರು ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂಬುದು ಇಲ್ಲಿದೆ ತಿಳಿಯಿರಿ:

ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚು ಬಾಯಾರಿಕೆ ಆಗದಿರುವುದರಿಂದ ಕಡಿಮೆ ನೀರನ್ನು ಕುಡಿಯುತ್ತೇವೆ. ಆದರೆ ಚಳಿಗಾಲದಲ್ಲಿ ಅಗತ್ಯವಾಗಿ ನೀರಿನ ಸೇವನೆ ಹೆಚ್ಚಿಸಬೇಕು. ಕಡಿಮೆ ನೀರನ್ನು ಸೇವಿಸುವುಸರಿಂದ ದೇಹ ನಿರ್ಜಲೀಕರಣಗೊಳ್ಳುತ್ತದೆ.

ಈ ನಿರ್ಜಲೀಕರಣದಿಂದ ಗರ್ಭಿಣಿ ಸ್ತ್ರೀಯರಲ್ಲಿ ಆಮ್ನಿಯೋಟಿಕ್ ದ್ರವದ(Amniotic fluid) ಮಟ್ಟವು ಕಡಿಮೆ ಆಗುತ್ತದೆ,

ಇದನ್ನೂ ನೋಡಿ : https://fb.watch/hxhdrQjrDr/ Mandous effect. ಹಾಳಾಯ್ತು ಬೆಳೆ!

ಇದರಿಂದ ಮಗುವಿಗೆ ಗಂಭೀರ ಅಪಾಯವನ್ನುಂಟು ಮಾಡಬಹುದು ಹಾಗೂ (Pregnant care in winter time) ಅಸಹಾಜ ಹೆರಿಗೆ ಅಥವಾ ಸ್ತನ ಹಾಲು ಉತ್ಪತ್ತಿ ಕಡಿಮೆ ಆಗಬಹುದು.

ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ ಹಾಗೂ ಎಳನೀರು,ಹಣ್ಣಿನ ಜ್ಯೂಸ್ ಸೇವನೆ ಕೂಡ ಒಳ್ಳೆಯದು. ಆದರೆ ತಂಪು ಪಾನೀಯ, ಟೀ- ಕಾಫಿಗಳ ಸೇವನೆಗಳಿಂದ ಆದಷ್ಟು ದೂರವಿರಿ.

ಚಳಿಗಾಲದಲ್ಲಿ ಒಣ ಚರ್ಮ (Dry skin), ತುರಿಕೆ ಹಾಗೂ ಇನ್ನಿತರ ಚರ್ಮದ ಸಮಸ್ಯೆಗಳು ಸಾಮಾನ್ಯ. ಆದ್ದರಿಂದ ಚರ್ಮವನ್ನು ಆದಷ್ಟು ಹೈಡ್ರೇಟ್ (Hydrate) ಆಗಿರಿಸಬೇಕು.

ಗರ್ಭಾವಸ್ಥೆಯಲ್ಲಿ ಹೊಟ್ಟೆಯು ದೊಡ್ಡದಾಗಿರುವುದರಿಂದ ಚರ್ಮದ ಮೇಲೆ ಕಲೆಗಳನ್ನು ಉಂಟು ಮಾಡುತ್ತದೆ. ಆದ್ದರಿಂದ ಆದಷ್ಟು ಆಲ್ಕೋಹಾಲ್ ಮುಕ್ತ ಮಾಯಿಶ್ಚರೈಸ್ (Moisturize) ಗಳನ್ನು ಬಳಸಿ. ಸಾಧ್ಯವಾದಲ್ಲಿ ನೈಸರ್ಗಿಕ ವಸ್ತುಗಳಿಂದ ತ್ವಚೆಯ ಆರೈಕೆ ಮಾಡಿ.

ಗರ್ಭಿಣಿಯರು ಸಾಧ್ಯವಾದಷ್ಟು ಮನೆಯ ಒಳಗಡೆ ಇರುವುದು ಉತ್ತಮ. ಇದರಿಂದ ಶೀತ ವಾತಾವರಣದಿಂದ ರಕ್ಷಿಸಿಕೊಳ್ಳಬಹುದು ಹಾಗೂ ಬೆಚ್ಚನೆಯ ಉಡುಪುಗಳನ್ನು ಧರಿಸಿ. ಬ್ಯಾಕ್ಟೀರಿಯಾಗಳಿಂದ ದೂರವಿರಲು ಆಗಾಗ ಕೈಗಳನ್ನು ತೊಳೆಯುತ್ತಿರಬೇಕು.

ಚಳಿಗಾಲದಲ್ಲಿ ಗರ್ಭಿಣಿಯರು ಆದಷ್ಟು ಕಾಲಿನ ಪಾದಗಳನ್ನು ಬಿಸಿಯಾಗಿಡಲು ಪ್ರಯತ್ನಿಸಿ. ಅದಕ್ಕಾಗಿ ಕಾಲು ಚೀಲಗಳನ್ನು (Influenza vaccine) ಬಳಸುವುದು ಉತ್ತಮ.

ಯಾಕೆಂದರೆ ಶೀತ ವಾತಾವರಣದಿಂದ ಚರ್ಮದ ರಕ್ತನಾಳಗಳಲ್ಲಿ ಸಮಸ್ಯೆ ಉಂಟಾಗಬಹುದು. ಹಾಗಾಗಿ ಮಲಗುವ ಮೊದಲು ಬಿಸಿ ನೀರನಿಂದ ಕಾಲನ್ನು ತೊಳೆದುಕೊಳ್ಳಿ.

ಇದನ್ನೂ ಓದಿ : https://vijayatimes.com/kranthi-movie-tweet-by-sumalatha/

ಗರ್ಭಾಧಾರಣೆ ವೇಳೆ ಜ್ವರದಿಂದ ದೂರವಿರಲು ಇನ್ಫ್ಲುಯೆನ್ಸ ಲಸಿಕೆ (Influenza vaccine) ತೆಗೆದುಕೊಳ್ಳಬೇಕು. ತಜ್ಞರು ಅಭಿಪ್ರಾಯದ ಮೇರೆಗೆ,

ಈ ಲಸಿಕೆ ತೆಗೆದುಕೊಂಡರೆ ಮಗು ಜನನ ಆಗಿ 6 ತಿಂಗಳ ಕಾಲ ಜ್ವರದಿಂದ ಕಾಪಾಡಬಹುದು ಹಾಗೂ ಶ್ವಾಸಕೋಶ ಸಂಬಂಧಿ ಸೋಂಕಿನಿಂದ ಕೂಡ ರಕ್ಷಿಸಬಹುದು. ಜೊತೆಗೆ ಸಣ್ಣಪುಟ್ಟ ವ್ಯಾಯಮ ಮಾಡುವುದು ಬಹಳ ಉತ್ತಮ

ರಶ್ಮಿತಾ ಅನೀಶ್

Exit mobile version