ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಆಧಾರ್‌ ಡೇಟಾ ಕಳವು ತಡೆಗೆ ಈ ರೀತಿ ಮಾಡಿ

ದಿನಗಳು ಕಳೆದಂತೆ ಸೈಬರ್‌ (Cyber) ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಂಚಕರು, ಆಧಾರ್‌ ಮಾಹಿತಿಗೆ ಕನ್ನ ಹಾಕಿ ಅವುಗಳನ್ನು ದುರ್ಬಳಕೆ ಮಾಡಿಕೊಂಡು ಬ್ಯಾಂಕ್‌ ಖಾತೆಗಳಿಂದಲೇ ಹಣ ದೋಚುತ್ತಿದ್ದಾರೆ. ಇತ್ತೀಚೆಗಷ್ಟೇ ಸರ್ಕಾರಿ ಸ್ವಾಮ್ಯದ ‘ಬ್ಯಾಂಕ್‌ ಆಫ್‌ ಬರೋಡಾ’ದ (Bank of Baroda) ಉದ್ಯೋಗಿಗಳೇ ವಂಚನೆಯಲ್ಲಿ ತೊಡಗಿರುವುದು ವರದಿಯಾಗಿತ್ತು.

ಈ ಪ್ರಕರಣ ಸಂಬಂಧಪಟ್ಟಂತೆ 60 ನೌಕರರನ್ನು ಅಮಾನತು ಮಾಡಲಾಗಿದ್ದು, ಕರ್ನಾಟಕದಲ್ಲಿಯೇ ಮಹಿಳೆಯೊಬ್ಬರ ಬಯೋಮೆಟ್ರಿಕ್‌ (Biometric) ಡೇಟಾವನ್ನು ದುರ್ಬಳಕೆ ಮಾಡಿಕೊಂಡ ವಂಚಕರು, ಬ್ಯಾಂಕ್‌ ಖಾತೆಯಲ್ಲಿದ್ದ 20,000 ರೂ. ದೋಚಿದ ಉದಾಹರಣೆಯೂ ಸಹ ಇದೆ. ವಂಚಕರು ಈಗ ಆಧಾರ್‌ ಬಯೋಮೆಟ್ರಿಕ್ಸ್‌ ಬಳಸಿಕೊಂಡು ಹಣ ದೋಚುತ್ತಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆಧಾರ್‌ಕಾರ್ಡ್‌ನಲ್ಲಿ (Aadhar Card) ಕೆಲವು ಸೆಟ್ಟಿಂಗ್‌ ಮಾಡಿಕೊಳ್ಳುವ ಮೂಲಕ ವಂಚನೆಗಳಿಂದ ಸುರಕ್ಷಿತವಾಗಿರಬಹುದು.

ಆಧಾರ್ ಬಳಕೆಯನ್ನು ಬ್ಯಾಂಕಿಂಗ್‌(Banking) , ಸರಕಾರಿ ಯೋಜನೆಗಳಲ್ಲಿ ಮಾಡಲಾಗುತ್ತದೆ. ಸರ್ಕಾರಿ ಕೆಲಸಗಳ ಜೊತೆಗೆ ಖಾಸಗಿ ಕೆಲಸಗಳಿಗೂ ಆಧಾರ್‌ ಬಳಕೆಯಾಗುತ್ತಿದ್ದು, ಇನ್ನು ನಿಮ್ಮ ಬಳಿಯಲ್ಲಿ ಆಧಾರ್‌ ಕಾರ್ಡ್‌ ಇಲ್ಲವಾದಲ್ಲಿ ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವೇ ಇಲ್ಲ ಎನ್ನಬಹುದು.

ರಕ್ಷಣೆ ಮಾಡುದು ಹೇಗೆ?
ಯಾವುದೇ ರೀತಿಯ ವಂಚನೆಗೆ ಒಳಗಾಗದಂತೆ ಸುರಕ್ಷಿತವಾಗಿ ಇರಬೇಕೆಂದರೆ, ಬಯೋಮೆಟ್ರಿಕ್‌ ಮಾಹಿತಿಯನ್ನು ಆಧಾರ್‌ನಲ್ಲಿ ಲಾಕ್‌(Link) ಮಾಡಬೇಕು. ನಂತರ ಬಯೋಮೆಟ್ರಿಕ್‌ ಮಾಹಿತಿಯನ್ನು ಲಾಕ್‌ ಮಾಡಿದ ಮೇಲೆ ಆಧಾರ್‌ಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ. ಇನ್ನು ಆಧಾರ್‌ ಅನ್ನು ಬಳಸಬೇಕಾದಾಗ ಅದನ್ನು ಮತ್ತೆ ಅನ್‌ಲಾಕ್‌ ಮಾಡಬಹುದು ಮತ್ತು ಅದನ್ನು ಬಳಸಬಹುದು. ಇದು ವಂಚನೆಯ ಸಾಧ್ಯತೆಯನ್ನು ಬಹಳವಾಗಿ ಕಡಿಮೆ ಮಾಡುತ್ತದೆ.

ಬ್ಯಾಂಕ್‌ ಖಾತೆಗಳಿಗೆ ಅನಧಿಕೃತ ಪ್ರವೇಶವನ್ನು ತಡೆಯಲು, ಬೆರಳಚ್ಚುಗಳು, ಐರಿಸ್‌ ಸ್ಕ್ಯಾ‌ನ್‌ಗಳು ಮತ್ತು ಮುಖದ ಗುರುತಿಸುವಿಕೆ ಡೇಟಾ ಸೇರಿದಂತೆ ತಮ್ಮ ಬಯೋಮೆಟ್ರಿಕ್‌ ಮಾಹಿತಿಯನ್ನು ರಕ್ಷಿಸಲು ಆಧಾರ್‌ ಕಾರ್ಡ್‌ದಾರರಿಗೆ ಅಧಿಕಾರ ನೀಡುವುದಲ್ಲದೆ. ಆಧಾರ್‌ ಬಯೋಮೆಟ್ರಿಕ್‌ ಲಾಕ್‌ ಎನ್ನುವುದು ಸುರಕ್ಷತಾ ವೈಶಿಷ್ಟ್ಯವಾಗಿದೆ. ಈ ವೈಶಿಷ್ಟ್ಯವು ಭಾರತದಲ್ಲಿ ವಿಶೇಷವಾಗಿ ನಿರ್ಣಾಯಕವಾಗಿದೆ.

*ಮೊದಲು UADAI ವೆಬ್‌ಸೈಟ್‌ಗೆ (Website) ಭೇಟಿ ನೀಡಿ ಅಥವಾ ಆಧಾರ್‌ ಆ್ಯಪ್‌ mAadhaar ಅನ್ನು ಡೌನ್‌ಲೋಡ್‌ (Download) ಮಾಡಿಕೊಳ್ಳಬೇಕು.

ಈ ಎಲ್ಲಾ ಪ್ರಕ್ರಿಯೆ ಬಳಿಕ ನಿಮ್ಮ ಆಧಾರ್‌ ಬಯೋಮೆಟ್ರಿಕ್ಸ್‌ ಸುರಕ್ಷಿತವಾಗಿ ಲಾಕ್‌ ಆಗುವುದಲ್ಲದೆ. ಯಾವುದೇ ಹಂತದಲ್ಲಿಅವುಗಳನ್ನು ಅನ್‌ಲಾಕ್‌ ಮಾಡಲು ಬಯಸಿದರೆ, ಮೇಲಿನ ಪ್ರಕ್ರಿಯೆಯನ್ನು ಅನುಸರಿಸಿ ಮತ್ತು ‘ಬಯೋಮೆಟ್ರಿಕ್ಸ್‌’ ಅನ್ನು ಅನ್‌ಲಾಕ್‌ ಮಾಡಬಹುದಾಗಿದೆ.

ಭವ್ಯಶ್ರೀ ಆರ್.ಜೆ

Exit mobile version