ರಣಜಿ ಪಂದ್ಯದಲ್ಲಿ ಪೃಥ್ವಿ ಶಾ ತ್ರಿಶತಕ ; ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್‌ಮಾಡಿ ಹೇಳಿದ್ದೇನು

ಪ್ರತಿಭಾವಂತ ಯುವ ಕ್ರಿಕೆಟಿಗ ಪೃಥ್ವಿ ಶಾ(Pruthvi shah) ರಣಜಿ ಟ್ರೋಫಿಯಲ್ಲಿ ತ್ರಿಶತಕ (383 ಎಸೆತಗಳಲ್ಲಿ 379) ಸಿಡಿಸಿದ್ದಾರೆ. ಮುಂಬೈ ಪರ ಆಡುತ್ತಿರುವ ಅವರು ಅಸ್ಸಾಂ(Assam) ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 687/4 ಸೇರಿಸಲು ತಮ್ಮ ತಂಡಕ್ಕೆ  ಅದ್ಭುತವಾದ  ತ್ರಿಶತಕದ ಕೊಡುಗೆ ನೀಡಿದ್ದಾರೆ.

ಬಲಗೈ ಬ್ಯಾಟರ್‌  ಪೃಥ್ವಿ ಶಾ ಬಾರಿಸಿರುವ 379 ರನ್‌ಗಳು ಇದೀಗ ರಣಜಿ ಟ್ರೋಫಿ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಸ್ಕೋರ್ ಆಗಿದೆ. 1948ರಲ್ಲಿ ಸೌರಾಷ್ಟ್ರ ವಿರುದ್ಧ ಮಹಾರಾಷ್ಟ್ರದ(Maharashtra) ಪರವಾಗಿ ಆಡುವಾಗ ಬಿಬಿ ನಿಂಬಾಳ್ಕರ್ ಅವರ ಅಜೇಯ 443 ರನ್‌ಗಳನ್ನು  ಗಳಿಸಿದ್ದು ಈ ಹಿಂದಿನ ದಾಖಲೆಯಾಗಿದೆ. . ಇನ್ನು ಸಂಜಯ್‌ ಮಂಜ್ರೇಕರ್ 1991 ರಲ್ಲಿ ಹೈದರಾಬಾದ್ ವಿರುದ್ಧ 377 ರನ್ ಗಳಿಸಿದ್ದರು. ಇದು ರಣಿಜಿ ಟ್ರೋಫಿಯಲ್ಲಿ ಎರಡನೇಯ ಅತ್ಯಧಿಕ ಸ್ಕೋರ್‌ಆಗಿತ್ತು.

ಇದೀಗ ಪೃಥ್ವಿ ಶಾ, ಸಂಜಯ್‌ ಮಂಜ್ರೇಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.  ಈ ಮೂಲಕ ಪೃಥ್ವಿ ಶಾ ರಣಜಿ ಟ್ರೋಫಿಯಲ್ಲಿ ತ್ರಿಶತಕ, ವಿಜಯ್ ಹಜಾರೆ ಟ್ರೋಫಿ (ದೇಶೀಯ 50-ಓವರ್‌ಗಳ ಪಂದ್ಯಾವಳಿ) ಮತ್ತು ಸೈಯದ್ ಮುಷ್ತಾಕ್ ಅಲಿ  ಟಿ-20(T20) ಪಂದ್ಯಗಳಲ್ಲಿ ಶತಕ ಗಳಿಸಿದ ಮೊದಲ ಕ್ರಿಕೆಟಿಗರಾಗಿದ್ದಾರೆ. ಜುಲೈ, 2021 ರಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಪಂದ್ಯವನ್ನು ಆಡಿದ ನಂತರ, ಪೃಥ್ವಿ ಶಾ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ.  ಪೃಥ್ವಿ ಶಾ ತ್ರಿಶತಕ ಗಳಿಸಿದ ನಂತರ

ಈ ಕುರಿತು ಟ್ವೀಟರ್‌ನಲ್ಲಿ  ಬರೆದುಕೊಂಡಿರುವ ಬಿಸಿಸಿಐ(bcci) ಕಾರ್ಯದರ್ಶಿ ಜಯ್‌ಶಾ ಅವರು, “ದಾಖಲೆ ಪುಸ್ತಕಗಳಿಗೆ ಮತ್ತೊಂದು ಪ್ರವೇಶ. ಎಂತಹ ಅಸಾಧಾರಣ ಇನ್ನಿಂಗ್ಸ್. ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ರಣಜಿ ಟ್ರೋಫಿ ಸ್ಕೋರ್ ಹೊಡೆದಿದ್ದಕ್ಕಾಗಿ ಅಭಿನಂದನೆಗಳು. ಅಪಾರ ಸಾಮರ್ಥ್ಯ ಹೊಂದಿರುವ ಪ್ರತಿಭೆ. ಸೂಪರ್ ಹೆಮ್ಮೆ..! ಎಂದು ಪೋಸ್ಟ್ ಮಾಡಿದ್ದಾರೆ. ಜಯ್‌ಶಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಪೃಥ್ವಿ ಶಾ “ತುಂಬಾ ಧನ್ಯವಾದಗಳು ಜಯ್‌ ಶಾ ಸರ್. ನಿಮ್ಮ ಪ್ರೋತ್ಸಾಹದ ಮಾತುಗಳು ಬಹಳಷ್ಟಿವೆ. ಕಷ್ಟಪಟ್ಟು ಕೆಲಸ ಮಾಡುತ್ತಿರುತ್ತೇನೆ” ಎಂದು ಉತ್ತರಿಸಿದ್ದಾರೆ.

Exit mobile version