ಪಿಎಸ್‍ಐ ಅಕ್ರಮದಲ್ಲಿ ಸಿಎಂಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿಲ್ಲ ಯಾಕೆ : ಪ್ರಿಯಾಂಕ್ ಖರ್ಗೆ!

bjp

ಪಿಎಸ್‍ಐ(PSI) ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಅಂದಿನ ಪರೀಕ್ಷಾ ಪ್ರಕ್ರಿಯೆಯ ಮುಖ್ಯಸ್ಥರಾದ ಇಂದಿನ ಮುಖ್ಯಮಂತ್ರಿ(ChiefMinister) ಮತ್ತು ಗೃಹ ಸಚಿವರಿಗೆ(HomeMinister) ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿಲ್ಲ ಯಾಕೆ ಎಂದು ಕಾಂಗ್ರೆಸ್ ನಾಯಕ(Congress Party) ಪ್ರಿಯಾಂಕ್ ಖರ್ಗೆ(Priyank Kharghe) ಸಿಬಿಐ ಅಧಿಕಾರಿಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.


ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಈ ಅಕ್ರಮ ವ್ಯವಹಾರದಲ್ಲಿ ನಾನು ಸಾಕ್ಷಿಯಲ್ಲ, ಆರೋಪಿಯೂ ಅಲ್ಲ. ಆದರೆ ನನಗೆ ನೋಟಿಸ್ ಕೊಟ್ಟಿದ್ದಾರೆ. ಆದರೆ ಯಾವ ಕಾನೂನಿನಡಿ ನನಗೆ ನೋಟಿಸ್ ಕೊಟ್ಟಿದ್ದಾರೆ ಎಂಬ ಮಾಹಿತಿ ಇಲ್ಲ. ನಾನು ವಿಚಾರಣೆಗೆ ಹಾಜರಾಗದೇ ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ಕೊಡುತ್ತೇನೆ ಎಂದರು.

ಇನ್ನು ವಿಚಿತ್ರವೆಂದರೆ ನಾನು ಅಕ್ರಮದ ಕುರಿತು ಮಾಡಿದ ಪ್ರಶ್ನೆಗೆ ಮತ್ತು ಮಾದ್ಯಮಗಳ ಮುಂದೆ ನೀಡಿದ ಹೇಳಿಕೆಗೆ ನೋಟಿಸ್ ನೀಡುತ್ತಾರೆ. ಆದರೆ ನನಗಿಂತಲೂ ಮುಂಚೆಯೇ ಅಕ್ರಮದ ಕುರಿತು ಸಂಕನೂರು ಮತ್ತು ಪ್ರಭು ಚೌಹಾಣ್ ಪತ್ರ ಬರೆದಿದ್ದರು, ಆದರೆ ಅವರನ್ನು ವಿಚಾರಣೆಗೆ ಕರೆದಿಲ್ಲ. ಪ್ರಮುಖ ಆರೋಪಿ ದಿವ್ಯಾ ಹಾಗರಗಿಯ ಬಂಧನವಾಗಿಲ್ಲ ಯಾಕೆ? ಗೃಹ ಸಚಿವರೇ ರಕ್ಷಣೆ ನೀಡ್ತಿದ್ದಾರಾ? ಸರ್ಕಾರವೇ ದಿವ್ಯಾ ಹಾಗರಗಿ ರಕ್ಷಣಗೆ ನಿಂತಿದೆ ಎಂದು ಆರೋಪಿಸಿದರು.

ಇನ್ನು ಅಂದು ನಡೆದ ಪಿಎಸ್‍ಐ ನೇಮಕಾತಿ ಪ್ರಕ್ರಿಯೆಯ ಮುಖ್ಯಸ್ಥರಾಗಿದ್ದವರು ಇಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ. ಆದರೆ ಅವರಿಗೆ ನೋಟಿಸ್ ನೀಡಿಲ್ಲ. ವಿಚಾರಣೆಯನ್ನು ನಡೆಸಿಲ್ಲ. ಈ ಕುರಿತು ಸರ್ಕಾರ ರಾಜ್ಯದ ಜನತೆಗೆ ಉತ್ತರ ನೀಡಬೇಕು. ಇನ್ನು ನಾನು ಅಕ್ರಮದ ಕುರಿತು ಆಡಿಯೋ ರಿಲೀಸ್ ಮಾಡಿದ ತಕ್ಷಣ ನನ್ನ ಟ್ವೀಟ್‍ರ್ ಹ್ಯಾಕ್ ಮಾಡಲಾಗುತ್ತೇ, ಬೆದರಿಕೆ ಕರೆಗಳು ಬರುತ್ತವೆ. ವ್ಯವಸ್ಥಿತವಾಗಿ ನನ್ನನ್ನು ಹೆದರಿಸುವ ಕೆಲಸ ನಡೆಯುತ್ತದೆ. ಪೊಲೀಸರಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ ಎಂದರು.

Exit mobile version