ಭಾರತ(India) ಮತ್ತು ಯುಎಸ್(US) ಎಲೆಕ್ಟ್ರಿಕ್ ಕಾರು(Electric car) ತಯಾರಿಕಾ ಕಂಪನಿ ಟೆಸ್ಲಾ(Tesla) ನಡುವೆ ಯಾವುದೇ ಮಾತುಕತೆಗಳು ಸದ್ಯಕ್ಕೆ ನಡೆಯುತ್ತಿಲ್ಲ.
ಭಾರತದಲ್ಲಿ ಮಾರುಕಟ್ಟೆ ಸ್ಥಾಪಿಸುವ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಟೆಸ್ಲಾ ತನ್ನ ಅಧಿಕಾರಿಗಳನ್ನು ನವದೆಹಲಿಯಲ್ಲಿ(NewDelhi) ನೇಮಿಸಿದೆ. ಆದರೆ ಟೆಸ್ಲಾ ತನ್ನ ಕಾರುಗಳನ್ನು ಚೀನಾದಿಂದ ಆಮದು(Import) ಮಾಡಿಕೊಂಡು ಭಾರತದಲ್ಲಿ ಮಾರಲು ಅವಕಾಶವಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ(Nithin Gadkari) ತಿಳಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಸರ್ಕಾರಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಟೆಸ್ಲಾ ಕಂಪನಿ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಇಚ್ಚಿಸಿರುವುದು ಸ್ವಾಗತಾರ್ಹ.
ಆದರೆ ಕಾರುಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಥವಾ ರಫ್ತು ಮಾಡಲು ಚೀನಾದಿಂದ ಆಮದು ಮಾಡಿಕೊಳ್ಳಬಾರದು. ಚೀನಾದಲ್ಲಿ ತಯಾರಿಸಿದ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ನಮ್ಮ ದೇಶೀಯ ಮಾರುಕಟ್ಟೆಗೆ ಹೊಡೆತ ಬೀಳುತ್ತದೆ. ಇನ್ನು ಟೆಸ್ಲಾ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಸುಂಕ ವಿನಾಯತಿ ಬಯಸುತ್ತಿದೆ. ಕಳೆದ ಒಂದು ವರ್ಷದಿಂದ ಈ ಸಂಬಂಧ ಮಾತುಕತೆಗಳು ನಡೆಯುತ್ತಿವೆ. ಆದರೆ ಟೆಸ್ಲಾ ಕಂಪನಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಲಾನ್ ಮಸ್ಕ್ ಈ ಕುರಿತು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ.
ಭಾರತದಲ್ಲಿ ಹೂಡಿಕೆ ಮಾಡಲು ಎಲಾನ್ ಮಸ್ಕ್ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂದು ಹೇಳಿದರು. ಟೆಸ್ಲಾ ಕಂಪನಿ ಭಾರತದಲ್ಲಿ ಹೂಡಿಕೆ ಮಾಡುವ ಸಂಬಂಧ ದೃಢವಾದ ಹೆಜ್ಜೆಗಳನ್ನು ಇಡಬೇಕಿದೆ. ತನ್ನ ಯೋಜನೆಗಳನ್ನು ಸ್ಪಷ್ಟಪಡಿಸದ ಕಾರಣ ಮಾತುಕತೆಯ ಪ್ರಯತ್ನಗಳು ಸ್ಥಗಿತಗೊಂಡಿವೆ. ಟೆಸ್ಲಾ ಕಂಪನಿ ಭಾರತದಲ್ಲಿ ತನ್ನ ತಯಾರಿಕಾ ಘಟಕ ಸ್ಥಾಪಿಸುವುದಾದರೆ ಅದರಿಂದ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಪುಷ್ಠಿ ಸಿಗುತ್ತದೆ. ಹೀಗಾಗಿ ಟೆಸ್ಲಾ ತಯಾರಿಕಾ ಘಟಕವನ್ನು ಸ್ಥಾಪಿಸಲು ಬಯಸಿದರೆ ಸ್ವಾಗತಿಸುತ್ತೇವೆ ಎಂದು ಗಡ್ಕರಿ ತಿಳಿಸಿದರು.