‘ನಾನು ಇಲ್ಲಿ ದೊಡ್ಡ ಬದಲಾವಣೆಯನ್ನು ಕಂಡಿದ್ದೇನೆ’ : ಯುಪಿ ಸಿಎಂ ಯೋಗಿಯನ್ನು ಶ್ಲಾಘಿಸಿದ ನಟಿ ಪ್ರಿಯಾಂಕಾ ಚೋಪ್ರಾ

Lucknow : ಗ್ಲೋಬಲ್ ಸ್ಟಾರ್ ಮತ್ತು ಯುನಿಸೆಫ್ ಗುಡ್ವಿಲ್ ರಾಯಭಾರಿ ಪ್ರಿಯಾಂಕಾ ಚೋಪ್ರಾ(Priyanka Chopra Likes UP) ಅವರು ಸಿಎಂ ಯೋಗಿ ಆದಿತ್ಯನಾಥ್(Yogi Adityanath) ನೇತೃತ್ವದ ಉತ್ತರ ಪ್ರದೇಶ ಸರ್ಕಾರವು(Uttar Pradesh) ಮಹಿಳೆಯರ ಬಗ್ಗೆ ಜವಾಬ್ದಾರಿಯುತ ವರ್ತನೆ ಮತ್ತು ರಾಜ್ಯದಲ್ಲಿ ಅವರ ಸ್ಥಿತಿಯ ಸುಧಾರಣೆ ಮಾಡಿದ್ದಾಗಿ ಶ್ಲಾಘಿಸಿದ್ದಾರೆ.

ಯುನಿಸೆಫ್ ಕಾರ್ಯಕ್ರಮಕ್ಕಾಗಿ ಲಖನೌಗೆ ಆಗಮಿಸಿದ ಪ್ರಿಯಾಂಕಾ, ಉತ್ತರ ಪ್ರದೇಶದ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ಮಾತನಾಡಿದ ಅವರು,

“ಕಳೆದ ಎರಡು ದಿನಗಳ ಭೇಟಿಯಲ್ಲಿ ನಾನು ಇಲ್ಲಿ ದೊಡ್ಡ ಬದಲಾವಣೆಯನ್ನು ಕಂಡಿದ್ದೇನೆ. ವಾಸ್ತವವಾಗಿ ಉತ್ತರ ಪ್ರದೇಶಕ್ಕೆ ಈ ಬದಲಾವಣೆಯ ಅಗತ್ಯವಿದೆ. 

ಇಂದು ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಮಕ್ಕಳ ಪೌಷ್ಟಿಕತೆಗೆ ಸಾಕಷ್ಟು ಕೆಲಸ ಮಾಡಲಾಗುತ್ತಿದೆ.

ದೇಶದಲ್ಲಿಯೇ ಮೊದಲ ಪೌಷ್ಟಿಕಾಂಶ ಆ್ಯಪ್ ಇಲ್ಲಿ ಆರಂಭವಾಗಿದೆ. ಆ್ಯಪ್(App) ಮೂಲಕ ಕೇವಲ ಅಂಗನವಾಡಿ ಕಾರ್ಯಕರ್ತೆಯರು ಮಾತ್ರವಲ್ಲ.

ಇದನ್ನೂ ಓದಿ : https://vijayatimes.com/probe-ordered-over-hall-ticket/

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಪತ್ತೆಹಚ್ಚಬಹುದು, ಅವರ ಮನೆಗಳಿಗೆ ಭೇಟಿ ನೀಡಬಹುದು ಮತ್ತು ಅವರ ಕುಟುಂಬಗಳೊಂದಿಗೆ ಮಾತನಾಡಬಹುದು ಮತ್ತು ಅವರಿಗೆ ಸಹಾಯ ಮಾಡಬಹುದು.

ಈ ರೀತಿಯ ಡಿಜಿಟಲೀಕರಣದಿಂದ ರಾಜ್ಯವು ಸಾಕಷ್ಟು ಪ್ರಯೋಜನ ಪಡೆದಿದೆ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಶ್ಲಾಘಿಸಿದರು.

ಇದೇ ವೇಳೆ ಉತ್ತರಪ್ರದೇಶ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಧನಾತ್ಮಕ ಬದಲಾವಣೆಯನ್ನೂ ಪ್ರಿಯಾಂಕಾ ಪ್ರಸ್ತಾಪಿಸಿ,

 “ಇಲ್ಲಿನ ಒನ್ ಸ್ಟಾಪ್ ಸೆಂಟರ್ಗೆ (ಆಶಾಜ್ಯೋತಿ ಸೆಂಟರ್) ಭೇಟಿ ನೀಡಲು ನನಗೆ ಅವಕಾಶ ಸಿಕ್ಕಿತು. ಇಲ್ಲಿ ನಾನು ಹಿಂಸೆಗೆ ಒಳಗಾದ ಅನೇಕ ಮಹಿಳೆಯರನ್ನು ಭೇಟಿಯಾಗಿ ಮಾತನಾಡಿದೆ.

ಮಕ್ಕಳ ಶಿಕ್ಷಣಕ್ಕಾಗಿ ನಡೆಸುತ್ತಿರುವ ಯೋಜನೆಗಳು ಮತ್ತು ಕೋವಿಡ್ ಸಮಯದಲ್ಲಿ ಅನಾಥರಾದ ಮಕ್ಕಳಿಗಾಗಿ ನಡೆಸುತ್ತಿರುವ ಯೋಜನೆಗಳು ಗಮನಾರ್ಹವಾಗಿವೆ ಎಂದರು.

2017 ರಿಂದ ಉತ್ತರ ಪ್ರದೇಶ ರಾಜ್ಯ ಸರ್ಕಾರವು ಮಹಿಳೆಯರಿಗೆ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯನ್ನು ಒದಗಿಸಲು ಅನೇಕ ದೊಡ್ಡ ಕ್ರಮಗಳನ್ನು ತೆಗೆದುಕೊಂಡಿದೆ.

ಇದುವರೆಗೆ 13.67 ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳು ಕನ್ಯಾ ಸುಮಂಗಲಾ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ. 31.50 ಲಕ್ಷ ಮಹಿಳೆಯರು ನಿರ್ಗತಿಕ ಮಹಿಳಾ ಪಿಂಚಣಿಯ ಪ್ರಯೋಜನ ಪಡೆಯುತ್ತಿದ್ದಾರೆ.

ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಿಂದ 12,340 ಮಹಿಳೆಯರು ಪ್ರಯೋಜನ ಪಡೆದಿದ್ದಾರೆ.

https://fb.watch/gFRT6QX_Gh/ ಸಿಎಂ ಬರುವಿಕೆಗಾಗಿ ಶೀಘ್ರಗತಿಯಲ್ಲಿ ಕಾಮಗಾರಿಯನ್ನು ಮುಗಿಸುತ್ತಿರುವ ಜಿಲ್ಲಾಧಿಕಾರಿಗಳು

ಅದೇ ರೀತಿ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯಿಂದ 2 ಲಕ್ಷಕ್ಕೂ ಹೆಚ್ಚು ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದಾರೆ. ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ, 66 ಲಕ್ಷ ಗ್ರಾಮೀಣ ಮಹಿಳೆಯರನ್ನು 6.34 ಲಕ್ಷ ಸ್ವ-ಸಹಾಯ ಗುಂಪುಗಳು, 31,601 ಗ್ರಾಮ ಸಂಸ್ಥೆಗಳು ಮತ್ತು 1,735 ಕ್ಲಸ್ಟರ್ ಮಟ್ಟದ ಒಕ್ಕೂಟಗಳಿಗೆ ಲಿಂಕ್ ಮಾಡಲಾಗಿದೆ ಎಂದು ಯೋಗಿ ನೇತೃತ್ವದ ಸರ್ಕಾರವನ್ನು ಶ್ಲಾಘಿಸಿದರು.

Exit mobile version