ಬಿಜೆಪಿ ಸಚಿವರ ವಿರುದ್ದವೂ ಪ್ರಕರಣ ದಾಖಲಿಸಲಿ

Priyank Kharge

ಬೆಂಗಳೂರು ಜ 12 : ಕೊರೊನಾ ನಿಯಮ ಉಲ್ಲಂಘಿಸುವ ಬಿಜೆಪಿ ಶಾಸಕ, ಸಚಿವರ ವಿರುದ್ದವೂ ಸರ್ಕಾರ ಪ್ರಕರಣ ದಾಖಲಿಸಲಿ ಎಂದು ಪ್ರಿಯಾಂಕ ಖರ್ಗೆ ಆಗ್ರಹಿಸಿದ್ದಾರೆ. ನೀರು ಸಿಗುವವರೆಗೆ ಹೋರಾಟ ಮುಂದುವರಿಯುತ್ತಲೇ ಇರುತ್ತದೆ. ಬಿಜೆಪಿಯವರು ಸಹ ಪ್ರತಿಭಟನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯವರು ಕಲುಬುರಗಿಯಲ್ಲಿ ಕಾರ್ಯಕ್ರಮವನ್ನು ಮಾಡಿದ್ದಾರೆ. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಜನ ಸೇರಿದ್ದರು. ಅಲ್ಲಿ ಕೋವಿಡ್ ಉಲ್ಲಂಘನೆಯಾಗಲಿಲ್ಲವೇ ಎಂದು ಪ್ರಶ್ನಿಸಿದರು.

ಮೊದಲು ಮಂತ್ರಿಗಳ ಮೇಲೆ ಕೇಸ್ ಹಾಕಲಿ, ನಾವು ಯಾವ ಕೇಸಿಗೂ ಹೆದರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ಹೋರಾಟದ ಹಿಂದೆ ರಾಜಕೀಯ ಉದ್ದೇಶವೇನು ಇಲ್ಲ ನಿನ್ನೆ ನಡೆದ ಪಾದಯಾತ್ರೆಯಲ್ಲಿಯೂ ಸಾವಿರಾರು ಜನ ಸೇರಿದ್ದರು. ಇಂದು ಕೂಡ ಸೇರಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರ ಯಾವ ಕೇಸನ್ನು ಹಾಕಿದರೂ ಯಾವ ಕೇಸಿಗೂ ಹೆದರುವುದಿಲ್ಲ ಎಂದು ಹೇಳಿದರು. ಕೋವಿಡ್ ನಿಯಮವನ್ನು ಉಲ್ಲಂಘಿಸುವ ಬಿಜೆಪಿ ಸಚಿವರ ವಿರುದ್ಧ ಮತ್ತು ಸರ್ಕಾರದ ವಿರುದ್ಧವೇ ಮೊದಲು ಕೇಸು ದಾಖಲಾಗಲಿ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಸವಾಲು ಹಾಕಿದ್ದಾರೆ.

ಮೇಕೆದಾಟು ಯೋಜನೆಯ ಪ್ರಯುಕ್ತ ಪ್ರತಿಭಟನೆ ನಡೆಸುತ್ತಿರುವ ಪಾದಯಾತ್ರೆ ನಡೆಸುತ್ತಿರುವಂತಹ ಕಾಂಗ್ರೆಸ್ ನಾಯಕರ ಮೇಲೆ ಸರ್ಕಾರ ಕೋವಿಡ್ ನಿಯಮ ಉಲ್ಲಂಘನೆ ಮಾಡಿದೆ ಎಂದು ಕೇಸನ್ನು ದಾಖಲಿಸಿದೆ ಆದರೆ ಮೊದಲು ಬಿಜೆಪಿ ಸಚಿವರ ಮೇಲೆಯೇ ಕೇಸು ದಾಖಲಾಗಬೇಕು ಎಂದು ಅವರು ಆರೋಪ ಮಾಡಿದರು.

Exit mobile version