• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಮಂತ್ರಿ ಮಾಲ್‌ನಿಂದ 39ಕೋಟಿ ತೆರಿಗೆ ಬಾಕಿ

Preetham Kumar P by Preetham Kumar P
in ಪ್ರಮುಖ ಸುದ್ದಿ
ಮಂತ್ರಿ ಮಾಲ್‌ನಿಂದ 39ಕೋಟಿ ತೆರಿಗೆ ಬಾಕಿ
0
SHARES
1
VIEWS
Share on FacebookShare on Twitter

ಬೆಂಗಳೂರು ಸೆ 30 : ಬಿಬಿಎಂಪಿಗೆ ಬರಬೇಕಿದ್ದ 39 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಕ್ಕೆ ಬಿಬಿಎಂಪಿ ಅಧಿಕಾರಿಗಳು ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್‍ಗೆ ಬೀಗ ಹಾಕಿದ್ದು, ತೆರಿಗೆ ಕಟ್ಟುವವರೆಗೆ ಮಾಲ್ ಓಪನ್ ಮಾಡಲು ಬಿಡುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ

ಮಂತ್ರಿ ಮಾಲ್ ನವರು ಕಳೆದ ಮೂರು ವರ್ಷಗಳಿಂದ ತೆರಿಗೆ ಕಟ್ಟಿಲ್ಲ, ಬಡ್ಡಿ ಸೇರಿ ಒಟ್ಟು 39 ಕೋಟಿ ರೂ. ತೆರಿಗೆ ಬಾಕಿ ಉಳಿದಿದೆ. ಇಂದು ಪಾಲಿಕೆ ಅಧಿಕಾರಿಗಳು ವಸೂಲಿಗೆ ತೆರಳಿದ್ದರು. ಈ ವೇಳೆ ಸಹ ತೆರಿಗೆ ಕಟ್ಟಿಲ್ಲ. ಹೀಗಾಗಿ ಬೀಗ ಜಡಿಯಲಾಗಿದೆ ಎಂದು ಮಲ್ಲೇಶ್ವರ ಪಶ್ವಿಮ ಡಿಸಿ ಪ್ರಸನ್ನ ಕುಮಾರ್ ಮಾಹಿತಿ ನೀಡಿದ್ದಾರೆ.

ಎಷ್ಟೇ ನೋಟಿಸ್ ನೀಡಿದರೂ ಮಂತ್ರಿ ಮಾಲ್ ಮಾತ್ರ ಬುದ್ಧಿ ಕಲಿತಿಲ್ಲ. ಪ್ರತಿಷ್ಟಿತ ಮಂತ್ರಿ ಮಾಲ್ 39 ಕೋಟಿ ರೂಪಾಯಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ತೆರಿಗೆ ಬಾಕಿ ಪಾವತಿಸುವಂತೆ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ನೋಟಿಸ್ ನೀಡಿದ್ದರು. 2017ರಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ತೆರಿಗೆ ಬಾಕಿ ಹಿನ್ನೆಲೆ ಮಂತ್ರಿ ಮಾಲ್ ಗೆ ಬೀಗ ಹಾಕಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ಮಂತ್ರಿ ಮಾಲ್ ಗೆ ಬೀಗ ಹಾಕಲಾಗಿತ್ತು. ಬಳಿಕ 5 ಕೋಟಿ ರೂ. ಪಾವತಿ, ಉಳಿದ ಹಣವನ್ನು ಅಕ್ಟೋಬರ್ ಅಂತ್ಯದ ವೇಳೆ ಕಟ್ಟುವುದಾಗಿ ಭರವಸೆ ನೀಡಿದ್ದರಿಂದ ಬೀಗ ತೆರವುಗೊಳಿಸಲಾಗಿದೆ. 

ಆಸ್ತಿ ತೆರಿಗೆ ಕಟ್ಟಲು ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಆದರೂ ಮಂತ್ರಿ ಮಾಲ್ ನಿರ್ಲಕ್ಷ್ಯ ವಹಿಸಿದೆ. ಆಸ್ತಿ ತೆರಿಗೆ ಕಟ್ಟುವಲ್ಲಿ ಮಂತ್ರಿ ಮಾಲ್ ಹಿಂದೇಟು ಹಾಕುತ್ತಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ವಂಚಕರ ಸಂಖ್ಯೆ ಹೆಚ್ಚಾಗಿದ್ದು, ಬಿಬಿಎಂಪಿಗೆ ಮಂತ್ರಿ ಮಾಲ್ ದೊಡ್ಡ ತಲೆನೋವಾಗಿದೆ.

ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ಮಂತ್ರಿ ಮಾಲ್ ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುತ್ತಿದೆ. 2017ರಿಂದ ಇದೂವರೆಗೂ ಆಸ್ತಿ ತೆರಿಗೆ ಕಟ್ಟಿಲ್ಲ. ಮಂತ್ರಿ ಮಾಲ್‌ಗೆ ನೋಟಿಸ್ ಕೊಟ್ಟು ಬಿಬಿಎಂಪಿ ಸುಸ್ತಾಗಿದೆ. ತೆರಿಗೆ ಕಟ್ಟದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಎಷ್ಟೇ ಹೇಳಿದರೂ ಮಂತ್ರಿ ಮಾಲ್ ನ ಆಡಳಿತಾಧಿಕಾರಿ ಮಾತ್ರ ಕೇಳುತ್ತಿಲ್ಲ. ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮಂತ್ರಿ ಮಾಲ್ ಮೊದಲ ಸ್ಥಾನದಲ್ಲಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ, ಕಳೆದ 3 ವರ್ಷದಿಂದ ಬಡ್ಡಿ ಸೇರಿ ಒಟ್ಟು 39 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದರು. ಈ ಪೈಕಿ ಡಿಡಿ ಮೂಲಕ ಇಂದು 5 ಕೋಟಿ ರೂ.ಗಳಷ್ಟು ಪಾವತಿ ಮಾಡಿದ್ದಾರೆ. ಇನ್ನೂ 34 ಕೋಟಿ ರೂ.ಗಳನ್ನು ಅಕ್ಟೋಬರ್ ಕೊನೆಯಲ್ಲಿ ನೀಡುವುದಾಗಿ ಹೇಳಿದ್ದಾರೆ. ಕೊರೊನಾ ನೆಪ ಹೇಳಿದ್ದರು. ಆದರೆ ಸೆಪ್ಟೆಂಬರ್ ಒಳಗಡೆ ಪೂರ್ತಿ ತೆರಿಗೆ ಕಟ್ಟುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಆರ್ಥಿಕ ಸಂಕಷ್ಟದ ಹಿನ್ನೆಲೆ ತೆರಿಗೆ ಪಾವತಿಸಲು ಆಗುತ್ತಿಲ್ಲ ಎಂದು ಹೇಳಿದ್ದರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tags: BBMPbengalurumantri square mallproperty tax

Related News

ಹಿಂದುಸ್ತಾನ್ ಪೆಟ್ರೋಲಿಯಮ್ನಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ ; 15 ಲಕ್ಷ ವೇತನ..!
ದೇಶ-ವಿದೇಶ

ಹಿಂದುಸ್ತಾನ್ ಪೆಟ್ರೋಲಿಯಮ್ನಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ ; 15 ಲಕ್ಷ ವೇತನ..!

September 21, 2023
ಕಾಂಗ್ರೆಸ್ ಸರ್ಕಾರದ ಢೋಂಗಿತನ ಮತ್ತೊಮ್ಮೆ ಬಯಲಾಗಿದೆ ; ಸುಪ್ರೀಂ ತೀರ್ಪಿನ ಬೆನ್ನಲ್ಲೇ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಬಿಜೆಪಿ
ಪ್ರಮುಖ ಸುದ್ದಿ

ಕಾಂಗ್ರೆಸ್ ಸರ್ಕಾರದ ಢೋಂಗಿತನ ಮತ್ತೊಮ್ಮೆ ಬಯಲಾಗಿದೆ ; ಸುಪ್ರೀಂ ತೀರ್ಪಿನ ಬೆನ್ನಲ್ಲೇ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಬಿಜೆಪಿ

September 21, 2023
ಹೊಸ ಪೀಳಿಗೆಯ ಡುಕಾಟಿ ಸ್ಕ್ರ್ಯಾಂಬ್ಲರ್‌ ಶ್ರೇಣಿಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ: ಇದರಲ್ಲೇನಿದೆ ಹೊಸ ಫೀಚರ್‌?
ಡಿಜಿಟಲ್ ಜ್ಞಾನ

ಹೊಸ ಪೀಳಿಗೆಯ ಡುಕಾಟಿ ಸ್ಕ್ರ್ಯಾಂಬ್ಲರ್‌ ಶ್ರೇಣಿಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ: ಇದರಲ್ಲೇನಿದೆ ಹೊಸ ಫೀಚರ್‌?

September 21, 2023
ನೀವು ಸುಂದರವಾಗಿ ಚಿಕ್ಕ ವಯಸ್ಸಿನಂತೆ ಕಾಣಿಸಬೇಕೆ ಹಾಗಾದ್ರೆ ಈ 5 ಪದಾರ್ಥ ಬಳಸಿ
ಆರೋಗ್ಯ

ನೀವು ಸುಂದರವಾಗಿ ಚಿಕ್ಕ ವಯಸ್ಸಿನಂತೆ ಕಾಣಿಸಬೇಕೆ ಹಾಗಾದ್ರೆ ಈ 5 ಪದಾರ್ಥ ಬಳಸಿ

September 21, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.