ನೂಪುರ್ ಶರ್ಮಾ ಹೇಳಿಕೆ ವಿವಾದ ; ಶುಕ್ರವಾರದ ಪ್ರಾರ್ಥನೆಯ ನಂತರ ಹಲವು ಬೀದಿಗಳಲ್ಲಿ ಕಲ್ಲು ತೂರಾಟ!

ಜಾಗತಿಕ ಆಕ್ರೋಶಕ್ಕೆ ಕಾರಣವಾದ ಪ್ರವಾದಿಯ ಕುರಿತಾದ ಹೇಳಿಕೆಗಳ ವಿರುದ್ಧ ದೆಹಲಿ(Delhi), ಕೋಲ್ಕತ್ತಾ(Kolkata), ಪ್ರಯಾಗ್‌ರಾಜ್ ಮತ್ತು ದೇಶದ ಇತರ ಸ್ಥಳಗಳಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ.

ದೆಹಲಿಯಲ್ಲಿ, ಶುಕ್ರವಾರದ ಪ್ರಾರ್ಥನೆಯ ನಂತರ ಜಮಾ ಮಸೀದಿಯ(Jama Masijid) ಹೊರಗೆ ಪ್ರತಿಭಟನೆಯು ಭುಗಿಲೆದ್ದಿತು ಮತ್ತು ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಮತ್ತು ಬಿಜೆಪಿಯಿಂದ ಅಮಾನತುಗೊಂಡ ನೂಪುರ್ ಶರ್ಮಾ(Nupur Sharma) ಅವರನ್ನು ಬಂಧಿಸುವಂತೆ ಒತ್ತಾಯಿಸಲಾಗಿದೆ. ನೂಪುರ್ ಶರ್ಮಾ ಮತ್ತು ಉಚ್ಛಾಟಿತ ನಾಯಕ ನವೀನ್ ಜಿಂದಾಲ್ ಅವರ ಪ್ರಚೋದಕ ಹೇಳಿಕೆಗಳ ವಿರುದ್ಧ ಪ್ರತಿಭಟಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ ಎನ್ನಲಾಗಿದೆ. ಜಾಮಾ ಮಸೀದಿಯ ಶಾಹಿ ಇಮಾಮ್, “ಮಸ್ಜಿದ್ ಪ್ರತಿಭಟನೆಗೆ ನಾವು ಕರೆ ನೀಡಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

“ಪ್ರತಿಭಟಿಸುವವರು ಯಾರು ಎಂದು ನಮಗೆ ತಿಳಿದಿಲ್ಲ. ಅವರು ಎಐಎಂಐಎಂಗೆ ಸೇರಿದವರಾ? ಅಥವಾ ಓವೈಸಿಯವರ ಎಂಬುದು ನನಗೆ ತಿಳಿದಿಲ್ಲ. ಪ್ರತಿಭಟನೆ ಮಾಡಲು ಬಯಸಿದರೆ ಅವರು ಮಾಡಬಹುದು, ಆದರೆ ನಾವು ಅವರನ್ನು ಬೆಂಬಲಿಸುವುದಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ” ಎಂದು ಹೇಳಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡಿದ ನಾಯಕರನ್ನು ಬಿಜೆಪಿ ಅಮಾನತುಗೊಳಿಸಿದ್ದರೂ, ನುಪೂರ್ ಶರ್ಮಾ ಕೂಡ ಕ್ಷಮೆಯಾಚಿಸಿದರೂ, ಪ್ರತಿಭಟನಾಕಾರರು ಅವರನ್ನು ಬಂಧಿಸುವಂತೆ ಸದ್ಯ ಒತ್ತಾಯಿಸುತ್ತಿದ್ದಾರೆ.

ಕೋಲ್ಕತ್ತಾದಲ್ಲಿ, ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಒತ್ತಾಯಿಸಿ 300 ಕ್ಕೂ ಹೆಚ್ಚು ಜನರು ಪೋಸ್ಟರ್‌ಗಳೊಂದಿಗೆ ನಮಾಜ್‌ಗೆ ಬಂದರು. ನಮಾಜ್ ಮುಗಿಸಿದ ಬಳಿಕ ದೆಹಲಿ,ಕೊಲ್ಕತ್ತಾ, ಯುಪಿ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಎದುರಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ನಿವಾರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

Exit mobile version