Mumbai: ಮುಂಬೈನಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ನಿವಾಸ ʼಮನ್ನತ್ʼ ಮುಂದೆ ಭಾರೀ ಪ್ರತಿಭಟನೆ ನಡೆಯುತ್ತಿದೆ. ಅಪಾರ (protest in front of Mannat) ಸಂಖ್ಯೆಯಲ್ಲಿ

ಜಮಾಯಿಸಿರುವ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇತ್ತ ಮನೆ ಮುಂದೆ ಭಾರೀ ಪ್ರತಿಭಟನೆ ವ್ಯಕ್ತವಾಗಿದ್ದರೆ, ಅತ್ತ ನಟ ಶಾರುಖ್ ಖಾನ್ ತಮ್ಮ ಸಿನಿಮಾದ
ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.ಇನ್ನು ಈ ಪ್ರತಿಭಟನೆಗೆ ಮುಖ್ಯ ಕಾರಣ ನಟ ಶಾರುಖ್ ಖಾನ್ ಅಭಿನಯಿಸುತ್ತಿರುವ ಜಾಹೀರಾತುಗಳು. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟ
ಶಾರುಖ್ ಖಾನ್, ಆನ್ಲೈನ್ ಆಟಗಳ ಜಾಹೀರಾತುಗಳನ್ನು ಒಪ್ಪಿಕೊಂಡಿದ್ದಾರೆ. ಈ ಆಟಗಳಿಂದ ಅನೇಕರ ಜೀವನವೇ ನಾಶವಾಗಿದೆ. ಇಂತಹ ಜಾಹೀರಾತುಗಳನ್ನು ಸಾಮಾಜಿಕ ಜವಾಬ್ದಾರಿ
ಇರುವ ಯಾವ ನಟನು ಒಪ್ಪಿಕೊಳ್ಳಬಾರದು ಎನ್ನುವುದು ಅನ್ ಟಚ್ ಯೂತ್ ಫೆಡರೇಷನ್ ಆಗ್ರಹ. ಈ ಸಂಘಟನೆಯ ಸದಸ್ಯರೇ ಇದೀಗ ನಟ ಶಾರುಖ್ ಖಾನ್ ನಿವಾಸದ ಮುಂದೆ ಪ್ರತಿಭಟನೆ
ನಡೆಸುತ್ತಿದ್ದಾರೆ.ಈ ಕುರಿತು ಮಾತನಾಡಿರುವ ಅನ್ ಟಚ್ ಯೂತ್ ಫೆಡರೇಷನ್ ನ ಅಧ್ಯಕ್ಷ ಕೃಷ್ಣ ಚಂದ್ರ ಅಡಾಲ್, ಸಾಕಷ್ಟು ಜನರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಜನರ
ಭಾವನೆಗಳನ್ನು ಗೌರವಿಸುವ ದೃಷ್ಟಿಯಿಂದ ಶಾರುಖ್ ಖಾನ್ ಅವರು ಆನ್ಲೈನ್ ಗೇಮಿಂಗ್ ಜಾಹೀರಾತುಗಳಿಂದ ದೂರ ಸರಿಯಬೇಕು. ಇದರಿಂದ ಲಕ್ಷಾಂತರ ಜನರ ಬದುಕು ನಾಶವಾಗುತ್ತಿದೆ.

ಹಣಕ್ಕಾಗಿ ಈ ರೀತಿಯ ಜಾಹೀರಾತುಗಳನ್ನು ಒಪ್ಪಿಕೊಳ್ಳಬಾರದು (protest in front of Mannat) ಎಂದು ಆಗ್ರಹಿಸಿದ್ದಾರೆ.
ಇನ್ನು ಅಪಾರ ಸಂಖ್ಯೆಯಲ್ಲಿ ಜಮಾಯಿಸಿರುವ ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಪ್ರಯತ್ನ ನಡೆಸಿದ್ದಾರೆ. ಆದರೆ ಖುದ್ದು ನಟ ಶಾರುಖ್ ಖಾನ್ ಅವರೇ ಬಂದು ಹೇಳಿಕೆ ನೀಡಬೇಕೆಂದು,
ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಜವಾನ್ ಚಿತ್ರದಲ್ಲಿ ಶಾರುಖ್ ಬ್ಯುಸಿ :
ಶಾರುಖ್ ಖಾನ್ ಅಭಿನಯಿಸಿರುವ ‘ಜವಾನ್’ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7, 2023 ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಇದರಲ್ಲಿ ಶಾರುಖ್ ಖಾನ್ ಜೊತೆಗೆ
ವಿಜಯ್ ಸೇತುಪತಿ, ನಯನತಾರಾ, ಸನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ನಟಿಸಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.,