ಭಾರತದ ಹೆಮ್ಮೆ ಕಲ್ಪನಾ ಚಾವ್ಲಾ ಅವರ ಬಗ್ಗೆ ನಿಮಗೆ ತಿಳಿಯದ ಕೆಲ ಸಂಗತಿಗಳು ಇಲ್ಲಿವೆ ನೋಡಿ!

ಭಾರತದ(India) ಹೆಮ್ಮೆಯ ಮಹಿಳೆ ಕಲ್ಪನಾ ಚಾವ್ಲಾ(Kalpana Chawla) ಅವರ ಹೆಸರನ್ನು ನಮ್ಮ ದೇಶದ ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಬಾಹ್ಯಾಕಾಶಕ್ಕೆ(Space) ಹೋದ ಭಾರತೀಯ ಮೂಲದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಲ್ಪನಾ ಚಾವ್ಲಾರವರ ಸಾವು ಮಾತ್ರ ಘೋರ ದುರಂತ. ಕಷ್ಟಪಟ್ಟು ತನ್ನೆಲ್ಲ ಕನಸನ್ನು ಚಿಕ್ಕ ಹಳ್ಳಿಯಿಂದ ಅಮೇರಿಕಾದ ನಾಸಾದವರೆಗೆ ವಿಸ್ತರಿಸಿಕೊಂಡು, ಛಲಗಾರ್ತಿಯಾಗಿ ಕೊನೆಗೂ ಭೂಮಿಗೆ ಮರಳುವ ಕೇವಲ 16 ನಿಮಿಷದ ಮೊದಲು ವಿಧಿಯ ಕ್ರೂರ ಆಟಕ್ಕೆ ಬಲಿಯಾದರು. ಫೆಬ್ರವರಿ 1, 2003 ರಂದು ಏಳು ಗಗನಯಾತ್ರಿಗಳನ್ನು ಹೊತ್ತಿದ್ದ ಬಾಹ್ಯಾಕಾಶ ನೌಕೆಯು ಟೆಕ್ಸಾಸ್ ಮತ್ತು ಲೂಸಿಯಾನ ಪ್ರದೇಶದಲ್ಲಿ ಭೀಕರ ದುರಂತಕ್ಕೆ ಸಾಕ್ಷಿಯಾಗಿತ್ತು,

ಇದರಲ್ಲಿ ಇದ್ದ ಏಳು ಯಾತ್ರಿಗಳಲ್ಲಿ ಮೊದಲ ಭಾರತೀಯ ಮಹಿಳಾ ಗಗನಯಾತ್ರಿಯಾದ ಕಲ್ಪನಾ ಚಾವ್ಲಾ ಕೂಡ ಒಬ್ಬರು. ಆಗ ಇವರ ವಯಸ್ಸು ಕೇವಲ 40 ವರ್ಷ. ಕಲ್ಪನಾ ಅವರು 1983 ರಲ್ಲಿ ಜೀನ್-ಪಿಯರೆ ಹ್ಯಾರಿಸೊ ಅವರನ್ನು ವಿವಾಹವಾಗಿದ್ದರು. 2003 ರಲ್ಲಿ ಕಲ್ಪನಾ ನಿಧನರಾಗುವ ಮೊದಲು ಈ ಜೋಡಿ 20 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಅಕಸ್ಮಾತ್ ಕಲ್ಪನಾ ಅವರು ಆ ದುರಂತದಲ್ಲಿ ಬದುಕಿ ಉಳಿದಿದ್ದರೆ, ಬಾಹ್ಯಾಕಾಶದ ಅದೆಷ್ಟೋ ರಹಸ್ಯ ವಿಷಯಗಳನ್ನು ಬಹಿರಂಗ ಪಡಿಸಿ, ಹೆಮ್ಮೆಯ ಸಾಧನೆಗಳನ್ನು ಮಾಡಿ ತಮ್ಮ ತಾಯ್ನಾಡಿಗೆ ಅದೆಷ್ಟು ಕೀರ್ತಿ ತರುತ್ತಿದ್ದರೋ ಏನೋ.

ಆದ್ರೆ ಭೂಮಿಗೆ ಬರುವ ಮುನ್ನ ಅವರನ್ನು ಹೊತ್ತಿದ್ದ ಕೊಲಂಬಿಯಾ ಸ್ಪೇಸ್ ತಾಂತ್ರಿಕ ದೋಷದಿಂದ ಬೆಂಕಿ ಉತ್ಪತ್ತಿಯಾಗಿ ಭಸ್ಮವಾಗಿತ್ತು. ಹಲವು ಸಂಶೋಧನೆಗಳ ಪ್ರಕಾರ ಗಗನ ನೌಕೆ ಹೆಚ್ಚಿನ ಉಷ್ಣಾಂಶ ತಡೆದುಕೊಳ್ಳಲಾಗದೇ ಸಂಪರ್ಕ ಕಡಿತಗೊಂಡು ಅಪಘಾತವಾಯಿತು ಎನ್ನುವ ವರದಿ ಇದೆ. ಇತ್ತೀಚಿಗೆ ನಾಸಾ ತನ್ನೆಲ್ಲ ಸ್ಪೇಸ್ ಶಿಪ್ ಗಳಿಗೆ ಉಷ್ಣಾಂಶ ತಡೆದುಕೊಳ್ಳುವ ಪದರವನ್ನು, ಮತ್ತು ಯಾವುದೇ ದುರ್ಘಟನೆ ನಡೆಯುವ ಸಂದರ್ಭದಲ್ಲಿ ರೆಸ್ಕ್ಯೂ ಟೀಮ್ ಅನ್ನು ಕೂಡ ರೆಡಿ ಮಾಡಿಕೊಂಡಿದೆ.

ಆಗ ಈ ವ್ಯವಸ್ಥೆ ಇದ್ದಿದ್ದರೆ, ಕಲ್ಪನಾ ಅವರು ಸೇರಿ ಆರು ಜನ ಗಗನಯಾತ್ರಿಗಳು ಬದುಕುಳಿಯುತ್ತಿದ್ದರು. ನಮ್ಮ ದೇಶ ಕಂಡ ಹೆಮ್ಮೆಯ ಮಹಿಳೆ ಕಲ್ಪನಾ ಚಾವ್ಲಾ ಅವರ ಹೆಸರಿನಲ್ಲಿ, ಭಾರತದ ಪ್ರತಿ ರಾಜ್ಯವು ಕೂಡ ಹೆಣ್ಣುಮಕ್ಕಳ ಅಭಿವೃದ್ದಿಗಾಗಿ ಒಂದಲ್ಲ ಒಂದು ಯೋಜನೆಯನ್ನು ರೂಪಿಸಿದೆ. ಅವರ ಗೌರವಾರ್ಥವಾಗಿ ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಪ್ರಶಸ್ತಿಗಳನ್ನೂ ಹೆಸರಿಸಲಾಗಿದೆ.

2004 ರಲ್ಲಿ ಕರ್ನಾಟಕ ಸರ್ಕಾರವು ಯುವ ಮಹಿಳಾ ವಿಜ್ಞಾನಿಗಳಿಗೆ ಕಲ್ಪನಾ ಚಾವ್ಲಾ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಕಲ್ಪನಾ ಚಾವ್ಲಾ ಅವರ ನೆನಪು ಜನಮಾನಸದಲ್ಲಿ ಎಂದಿಗೂ ಹಚ್ಚ ಹಸಿರು ಎಂಬುದು ಅಕ್ಷರಶಃ ಸತ್ಯ!

Exit mobile version