ಪಿಎಸ್ಐ ನೇಮಕಾತಿ ಹಗರಣ : 52 ಅಭ್ಯರ್ಥಿಗಳು ಶಾಶ್ವತ ಡಿಬಾರ್

ಕರ್ನಾಟಕ : ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ 545 ಪಿಎಸ್ ಐ ನೇಮಕಾತಿ ಹಗರಣದಲ್ಲಿ (PSI Scam Candidates Debarred) ಭಾಗಿಯಾಗಿರುವ ಆರೋಪ ಹೊತ್ತಿರುವ 52 ಅಭ್ಯರ್ಥಿಗಳನ್ನು

ಶಾಶ್ವತವಾಗಿ ಅನರ್ಹಗೊಳಿಸಿ ಎಂದು ಪೊಲೀಸ್ ನೇಮಕ ವಿಭಾಗ (Police Recruitment Department)ಮಂಗಳವಾರ ಆದೇಶ ಹೊರಡಿಸಿದೆ. ಇದರಿಂದಾಗಿ ನೌಕರಿ ಸಿಗುವ ವಿಶ್ವಾಸ

ಉಳಿದವರಲ್ಲಿ ಮೂಡಿದ್ದು,ಇದೀಗ ಹೈಕೋರ್ಟ್​ನತ್ತ (PSI Scam Candidates Debarred) ಎಲ್ಲರ ಚಿತ್ತ ಹರಿದಿದೆ..

ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಈ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ತನಿಖೆ ನಡೆಸಿ ಸಿಐಡಿ (CID) ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದ್ದಾರೆ. ಆದ್ದರಿಂದ ಪೊಲೀಸ್

ಇಲಾಖೆ ನಡೆಸುವ ಈ ನೇಮಕಾತಿ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ನಿಷೇಧಿಸಲಾಗಿದೆ ಎಂದು ನೇಮಕಾತಿ ವಿಭಾಗದ ಡಿಜಿಪಿ ಕಮಲ್ ಪಂತ್ (DGP Kamal Pant) ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಇಂದಿರಾ ಕ್ಯಾಂಟೀನ್‌ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಮತ್ತು ತುಮಕೂರು ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್‌ (FIR) ದಾಖಲಿಸಲಾಗಿದೆ. ಲಿಖಿತ ಪರೀಕ್ಷೆ ವೇಳೆ ಪೇಪರ್-1ರಲ್ಲಿ ಕೆಲ ಅಭ್ಯರ್ಥಿಗಳು

ಬ್ಲೂಟೂತ್ (Bluetooth) ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿದ್ದರು. ಕೆಲವು ಅಭ್ಯರ್ಥಿಗಳು ತಮ್ಮ ಓಎಂಆರ್ ಶೀಟ್ಗಳನ್ನೇ (OMR Sheet) ತಿದ್ದುಪಡಿ ಮಾಡಿಸಿಕೊಂಡಿರುವುದು ದೃಢವಾಗಿದೆ.

ಇದಾದ ನಂತರ ಸಿಐಡಿ ಅಧಿಕಾರಿಗಳು ಒಟ್ಟು 52 ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ. ಏ.6ರಂದು ಈ ವರದಿ ಆಧರಿಸಿ ಆರೋಪಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು.

ಅಭ್ಯರ್ಥಿಗಳು ಇದಕ್ಕೆ ಸಮಜಾಯಿಷಿ ನೀಡಿದ್ದಾರೆ. ಒಟ್ಟು 52 ಅಭ್ಯರ್ಥಿಗಳು 1977ರ ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮ-20ರಲ್ಲಿ ಉಲ್ಲೇಖಿಸಿದಂತೆ ದುರ್ನಡತೆ ತೋರಿದ್ದಾರೆ.

ಸುಳ್ಳು ಹೇಳಿಕೆ, ನಕಲಿ ವ್ಯಕ್ತಿಗಳು, ವಾಸ್ತವ ಮಾಹಿತಿ ಮರೆಮಾಚಿರುತ್ತಾರೆ. ಅಷ್ಟೇ ಅಲ್ಲದೆ ಪರೀಕ್ಷಾ ಕೊಠಡಿಯಲ್ಲಿ ನೇಮಕಾತಿ ಸಮಿತಿ ನೀಡಿರುವ ಸೂಚನೆಗಳನ್ನು ಉಲ್ಲಂಘಿಸಿ ನಕಲು ಮಾಡಿರುವುದನ್ನು

ದುರ್ನಡತೆ ಎಂದು ನಿರ್ಧರಿಸಲಾಗಿದೆ ಎಂದು ನೇಮಕಾತಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಕೆಲಸಕ್ಕೂ ಕುತ್ತು:

ಡಿಬಾರ್ ಆಗಿರುವ ಒಟ್ಟು 52 ಅಭ್ಯರ್ಥಿಗಳಲ್ಲಿ 10 ಕಾನ್ಸ್ಟೆಬಲ್ಗಳು(Constable) ಇದ್ದಾರೆ. ಅವರ ಪೊಲೀಸ್ ಸೇವೆಗೂ ಇದೀಗ ಕುತ್ತು ಬಂದಿದೆ. 402 ಎಸ್ಐ (Sub Inspector) ಹುದ್ದೆಗಳ ನೇಮಕಾತಿಗೂ ಇವರು

ಇವರು ಅರ್ಜಿ ಸಲ್ಲಿಸಿದ್ದರು. ದೈಹಿಕ ಪರೀಕ್ಷೆ ಈಗಾಗಲೇ ಮುಗಿದಿದ್ದು, ಲಿಖಿತ ಪರೀಕ್ಷೆ ಮಾತ್ರ ಬಾಕಿ ಉಳಿದಿದೆ. ಇದೀಗ ಇದರಿಂದಲೂ ಅವರನ್ನು ಹೊರಹಾಕಲಾಗಿದೆ.

ಡಿಬಾರ್ ಆದ ಅಭ್ಯರ್ಥಿಗಳು

ಎಚ್.ಯು. ರಘುವೀರ್, ಎಸ್. ಜಾಗೃತ್, ಬಿ. ಗಜೇಂದ್ರ, ಸೋಮನಾಥ ಮಲ್ಲಿಕಾರ್ಜುನಯ್ಯ ಹಿರೇಮಠ, ಬಿ.ಸಿ. ವೆಂಕಟೇಶ್ ಗೌಡ, ಎಂ.ಸಿ. ಚೇತನ್ಕುಮಾರ್, ಎ.ಪಿ. ಮನೋಜ್, ಜಿ.ಆರ್. ಮಂಜುನಾಥ್, ಪಿ. ಸಿದ್ದಲಿಂಗಪ್ಪ,

ಎಸ್.ಮಮತೇಶ್ ಗೌಡ, ಸಿ.ಕೆ. ದಿಲೀಪ್ಕುಮಾರ್, ಎಚ್. ಯಶವಂತ್ಗೌಡ, ಸಿ.ಎಂ. ನಾರಾಯಣ, ಸಿ.ಎಸ್. ನಾಗೇಶ್ ಗೌಡ, ಆರ್. ಮಧು, ಸಿ. ಯಶವಂತ ದೀಪ್, ರಚನ ಹಣಮಂತ್, ಜಿ. ಶಿವರಾಜ್, ಸಿ. ಪ್ರವೀಣ್ಕುಮಾರ್, ಕೆ.

ಸೂರ್ಯನಾರಾಯಣ, ಸಿ.ಎಂ. ನಾಗರಾಜ್, ಜಿ.ಸಿ. ರಾಘವೇಂದ್ರ,ಎನ್. ಚೇತನ್, ಬೀರಪ್ಪ ಮೇತಿ, ಎಚ್. ಮೋಹನ್ಕುಮಾರ್, ಎನ್. ದಿಲೀಪ್ಕುಮಾರ್, ದರ್ಶನ್ಗೌಡ, ಲಕ್ಕಪ್ಪ ರಾವುತಪ್ಪ, ಎಚ್.ಬಿ. ಹರೀಶ್, ಜೆ. ಕುಶಾಲ್ಕುಮಾರ್,

ವೀರೇಶ್, ಕೆ. ಪ್ರವೀಣ್ಕುಮಾರ್, ಅರುಣ್ಕುಮಾರ್, ಎಸ್. ಶರಣಪ್ಪ ಪಾಟೀಲ್, ವಿಶಾಲ್,ಇಸ್ಮಾಲ್ ಖಾದಿರ್, ಎಚ್.ವಿ. ಸುನೀಲ್, ಎಚ್.ಎನ್. ದೇಸಾಯಿ, ಶ್ರೀಧರ್, ಶಾಂತಿಬಾಯಿ, ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ, ಸುಪ್ರೀಯ

ಹುಂಡೆಕರ್, ಪ್ರಭು ಇಟ್ಟಗರ್, ವಿಜಯಕುಮಾರ್ ಪೂಜಾರಿ, ಯಶವಂತ ಮಾನೆ, ಬಿ. ಜೋಗೂರ್, ಸೋಮನಾಥ್, ಶ್ರೀಮಂತ ಸತ್ತಾಪುರ್, ರವಿರಾಜ್, ಪೀರಪ್ಪ ಮತ್ತು ಶ್ರೀಶೈಲಾ.

ರಶ್ಮಿತಾ ಅನೀಶ್

Exit mobile version