ಮುಸ್ಲಿಂ ಗುಂಡಾಗಿರಿಯಿಂದ ಶಿವಮೊಗ್ಗದಲ್ಲಿ ಗಲಾಟೆ ಸೃಷ್ಟಿಯಾಗಿದ್ದು : ಸಚಿವ ಆರ್. ಅಶೋಕ್!

ಮೊದಲು ಹಿಜಾಬ್ ಗಲಾಟೆ ಶುರುವಾಯಿತು, ಇದೀಗ ಈ ಗಲಭೆಗೂ ಇದೆ ಕಾರಣ ಎಂಬುದು ಸ್ಪಷ್ಟವಾಗುತ್ತಿದೆ. ಶಿವಮೊಗ್ಗದಲ್ಲಿ ಗಲಾಟೆ ಆಗಿರೋದು ಅಲ್ಲಿನ ಮುಸ್ಲಿಂ ಗೂಂಡಾಗಿರಿಗೆ. ಎಸ್ ಡಿಪಿಐ, ಪಿಎಫ್ಐ ಈ ತರಹದ ಸಂಘಟನೆಗಳು ನಿರಂತರವಾಗಿ ಆಕ್ಟಿವ್ ಆಗಿವೆ ಅನ್ನೊದಕ್ಕೆ ಇದೇ ಸಾಕ್ಷಿ. ಈ ಘಟನೆಯ ಬಗ್ಗೆ ತನಿಖೆ ಆಗ್ತಿದೆ, ಈಗಾಗಲೇ ಹಲವರನ್ನು ಬಂಧಿಸಲಾಗಿದೆ ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ೨೬ ವರ್ಷದ ಯುವಕ ಹರ್ಷನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಮುಸ್ಲಿಂ ಗೂಂಡಾಗಿರಿಗೆ, ಎಸ್ ಡಿಪಿಐ ಮತ್ತು ಪಿಎಫ್ಐ ಈ ತರಹದ ಸಂಘಟನೆಗಳು ನಿರಂತರವಾಗಿ ಆಕ್ಟಿವ್ ಆಗಿವೆ ಅನ್ನೊದಕ್ಕೆ ಇದು ನಿದರ್ಶನ. ಹಿಜಾಬ್ ವಿಚಾರ ಅಥವಾ ಆ ೬ ಜನ ಹೆಣ್ಣುಮಕ್ಕಳ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಮಾಧ್ಯಮಗಳ ಮೊದಲು, ವಿದೇಶಿ ಮಾಧ್ಯಮಗಳಲ್ಲಿ ಪ್ರಚಾರ ಆಗುತ್ತಿದೆ. ಈ ಬಗ್ಗೆ ವಿದೇಶಿ ಶಕ್ತಿಗಳ ಕೈವಾಡ ಇದೆ. ಯಾವುದೇ ದೇಶ ದ್ರೋಹಿಯನ್ನು ಬಿಡುವುದಿಲ್ಲ. ಈ ಬಗ್ಗೆ ಇನ್ನೂ ತನಿಖೆ ನಡಿಯುತ್ತಿದೆ ಎಂದು ಹೇಳಿದ್ದಾರೆ.

ಇದರಲ್ಲಿ ಪಿಎಫ್ಐ ಭಾಗಿಯಾಗಿದ್ಯಾ ಅನ್ನೋದು ತನಿಖೆಯಿಂದ ತಿಳಿಯಬೇಕಿದೆ. ಇನ್ನು ಬೆದರಿಕೆ ಇದೆ ಅನ್ನೋ ಸತ್ಯ ತಿಳಿದು ಬಂದಿದೆ. ಸತ್ಯಾ ಸತ್ಯತೆ ಏನು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ ಈ ಬಗ್ಗೆ ಸಿಎಂ ಜೊತೆ ಇಂದು ಚರ್ಚೆ ಮಾಡ್ತೀವಿ ಎಂದು ತಿಳಿಸಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಈಶ್ವರಪ್ಪ ಅವರ ನಡುವೆ ವೈಯಕ್ತಿಕ ಜಗಳ ನಡೆದಿದೆ. ನಾನು ಗೃಹ ಸಚಿವನಾಗಿ ಈ ಹಿಂದೆ ಕೆಲಸ ಮಾಡಿದ್ದೀನಿ. ಪೋಲಿಸ್ ಎಂಬುದು ಸ್ವಾತಂತ್ರ್ಯ ಸಂಸ್ಥೆ, ತನಿಖೆಗೆ ಸಂಪೂರ್ಣ ಸ್ವಾತಂತ್ರ್ಯ‌ ನೀಡಿದ್ದೇವೆ. ಹಲವಾರು ಜನ ಸಲಹೆ ನೀಡುತ್ತಾರೆ. ಅವರ ಸಲಹೆಗಳನ್ನು ಗೌರವಯುತವಾಗಿ ಸ್ವೀಕರಿಸುತ್ತೇವೆ. ಇದು ಸಿಎಂ ಗಮನಕ್ಕೂ ಬಂದಿದೆ. ಅಂತಿಮವಾಗಿ ಸಿಎಂ ತೀರ್ಮಾನ ಕೈಗೂಳ್ಳುತ್ತಾರೆ. ಅಧಿವೇಶನ‌ ಕೂಡ ಇವರಿಬ್ಬರ ವೈಯಕ್ತಿಕ ವಿಚಾರಕ್ಕೆ ನಿಂತಿರುವುದು, ವೈಯಕ್ತಿಕ ಟೀಕೆಗೆ ಗುರಿಯಾಗಿದೆ ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

Exit mobile version