INDIA VS NDA : ಈ ಕದನದಲ್ಲಿ ಗೆಲ್ಲುವವರು ಯಾರು ? ಸೋಲುವವರು ಯಾರು?

INDIA Vs NDA. ಶುರುವಾಗಿದೆ ಹೊಸ ಕದನ. ಈ ಕದನದಲ್ಲಿ ಗೆಲ್ಲುವವರು ಯಾರು ? ಸೋಲುವವರು ಯಾರು? ಮೋದಿ ಮಣಿಸಲು (raghav chadha tweet war) ಸಫಲವಾಗುತ್ತಾ ಇಂಡಿಯಾ?


ಈ ಬಾರಿಯ ಲೋಕಸಭಾ ಚುನಾವಣೆ ಸಖತ್ ಇಂಟರೆಸ್ಟಿಂಗ್ ಆಗಿರುತ್ತೆ. ಯಾಕಂದ್ರೆ ಈ ಬಾರಿಯ ಚುನಾವಣೆಯನ್ನು INDIA Vs Modi ಅಂತಲೇ ಬಿಂಬಿಸಲಾಗ್ತಿದೆ. ಬಿಜೆಪಿಯ ವಿರೋಧಿ ಬಣಗಳೆಲ್ಲಾ

ಒಟ್ಟಾಗಿ ಮೋದಿ ಹಠಾವೋ ದೇಶ್‌ ಬಚಾವೋ ಅನ್ನೋ ಆಂದೋಲನ ಬೇರೆ ಸ್ಟಾಟ್‌ ಮಾಡಿದ್ದಾವೆ. ಇವರ ಹೋರಾಟಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಅದಕ್ಕೆ ಬೆಂಗಳೂರಲ್ಲಿ ನಾಂದಿಯೂ ಹಾಡಿಯಾಗಿದೆ.


INDIA Vs NDA : ಯಾಕಾಗಿ ಈ ಸಭೆ ?


ಕೇಂದ್ರದ ಗದ್ದುಗೆ ಏರಲು ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಮಿತ್ರ ಪಕ್ಷಗಳನ್ನ ಒಗ್ಗೂಡಿಸುತ್ತಿವೆ. ಕಾಂಗ್ರೆಸ್ 26 ಪಕ್ಷದ 40 ಕ್ಕೂ ಹೆಚ್ಚು ಮುಖಂಡರೊಂದಿಗೆ ಮಾತುಕತೆ ನಡೆಸಿದೆ.

ಇನ್ನು NDA 38 ಪಕ್ಷದ ಮುಖಂಡರ ಜೊತೆ ಸಭೆ ನಡೆಸಿದೆ


INDIA ಟೀಂನಲ್ಲಿರುವವರು ಯಾರು?


INDIA ಟೀಂನಲ್ಲಿರುವ ಪ್ರಮುಖ ಪಕ್ಷಗಳು ಯಾವುವು ಅಂತ ನೋಡೋದಾದ್ರೆ. ಕಾಂಗ್ರಸ್, ಟಿಎಂಸಿ, ಸಿಪಿಐ, ಸಿಪಿಎಂ, NCP {ಶರತ್ ಪವಾರ್ ಬಣ }ಸಂಯುಕ್ತ ಜನತಾ ದಳ ಡಿಎಂಕೆ, ಆಪ್, ಜೆಎಂಎಂ,

ಶಿವಸೇನಾ ಉದ್ಧವ್ ಠಾಕ್ರೆ ಬಣ ರಾಷ್ಟ್ರೀಯ ಜನತಾದಳ ಬಣ ಸಮಾಜವಾದಿ ಪಾರ್ಟಿ ಪಿಡಿಪಿ ಆರ್ಎಲ್ಡಿ IUML ಕೇರಳ ಕಾಂಗ್ರೆಸ್ RSP ಸೇರಿದಂತೆ 26 ಪಕ್ಷಗಳಿವೆ.


NDA ಟೀಂನಲ್ಲಿರುವವರು ಯಾರು?


NDA ಟೀಂನಲ್ಲಿರುವವರನ್ನು ಗುರುತಿಸೋದಾದ್ರೆ ಎಐಎಡಿಎಂಕೆ, ಶಿವಸೇನೆ ಎನ್ಪಿಪಿ, ಎನ್ಡಿಪಿಪಿ, ಎಸ್ಕೆಎಂ, ಜೆಜೆಪಿ, ಎಜೆಎಸ್ಯು, ಆರ್ಪಿಐ, ಎಂಎನ್ಎಫ್, ತಮಿಳು ಮನಿಲಾ ಕಾಂಗ್ರೆಸ್, ಎಎಂಕೆಎಂಕೆ,

ಐಪಿಎಫ್ಟಿ, ಬಿಪಿಪಿ, ಪಟ್ಟಾಲಿ ಮಕ್ಕಳ್ ಕಚ್ಚಿ, ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ, ಅಪ್ನಾ ದಳ, ಅಸ್ಸಾಂ ಗಣ ಪರಿಷತ್, ನಿಶಾದ್ ಪಾರ್ಟಿ, ಜನಸೇನಾ, ಯುಪಿಪಿಎಲ್, ಎಐಆರ್ಎನ್ಸಿ, ಶಿರೋಮಣಿ ಅಕಾಲಿ ದಳ,

ಎನ್ಸಿಪಿ (ಅಜಿತ್ ಪವಾರ್ ಬಣ), ಲೋಕ ಜನಶಕ್ತಿ ಪಕ್ಷ, ಹಿಂದೂಸ್ಥಾನಿ ಅವಾಮ್ ಮೋರ್ಚಾ, ಆರ್ಎಲ್ಎಸ್ಪಿ, ವಿಐಪಿ, ಎಸ್ಬಿಎಸ್ ಪಕ್ಷ ಸೇರಿದಂತೆ 38 ರಾಜಕೀಯ ಪಕ್ಷಗಳು.

ಸಭೆಯಲ್ಲಿ ನಡೆದದ್ದೇನು ?

INDIA ಹಾಗೂ NDA ಸಭೆಗಳಲ್ಲಿ ಪಕ್ಷ ಸಂಘಟಿಸುವ ಯೋಚನೆ ಯೋಜನೆಕ್ಕಿಂತ ಪರಸ್ಪರ ದೋಷರೋಪದ ಟಾಕ್ ಶೋ ಆಯಿತು. ಆಡಳಿತಾರೂಢ ಬಿಜೆಪಿ ನಡೆಸಿದ ಸಭೆಯಲ್ಲಿ ಜೆಪಿ ನಡ್ಡಾ ಅಮಿತ್ ಷಾ, ನರೇಂದ್ರ

ಮೋದಿ ಎಲ್ಲರೂ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳನ್ನು ಕಟು ಶಬ್ಧಗಳಲ್ಲಿ ಟೀಕಿಸುತ್ತಾ ಹೋದ್ರೆ ವಿನ: NDA ಬಲಪಡಿಸುವ ಚರ್ಚೆಯೇ ನಡೆದಿಲ್ಲ.

ಇದನ್ನು ಓದಿ: ನಾಯಕರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳ ಬಳಕೆ: ಸದನದಲ್ಲಿ ಬಿಜೆಪಿ ಧರಣಿ

ಕಡು ಭ್ರಷ್ಟರೆಲ್ಲಾ ಒಂದಾಗಿದ್ದಾರೆ: ಮೋದಿ

ಕಡು ಭ್ರಷ್ಟರೆಲ್ಲಾ ಒಂದಾಗಿದ್ದಾರೆ. ಅವರೆಲ್ಲಾ ಭ್ರಷ್ಟರನ್ನ ಬೆಂಬಲಿಸುವವರೆ ಆಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿ ಪಕ್ಷಗಳನ್ನು ತೀವ್ರವಾಗಿ ಟೀಕಿಸಿದ್ರು. ಕುಟುಂಬದಿಂದ ಕುಟುಂಬಕ್ಕಾಗಿ

ಕುಟುಂಬಕ್ಕೋಸ್ಕರ ಇರೋ ಪಕ್ಷ ಕಾಂಗ್ರೆಸ್ ಎಂದು ಪ್ರಧಾನಿ ದೂರಿದ್ರು.

NDA ಸಭೆಗೆ ಖರ್ಗೆ ಆಕ್ರೋಶ

ಭಾರತೀಯರು ಕೋಮುವಾದಿಗಳನ್ನ ಇಷ್ಟ ಪಡುವವರಲ್ಲ. ಸಂವಿಧಾನ ಹಾಗೂ ಸೌಹಾರ್ದತೆಯ ಉಳಿವಿಗೆ ಜನ INDIAವನ್ನು ಅಧಿಕಾರಕ್ಕೆ ತರುತ್ತಾರೆ ಅನ್ನೋ ವಿಶ್ವಾಸ ನಮಗಿದೆ ಎಂದು ಖರ್ಗೆ ನುಡಿದರು.

ED ಗೆ ಭಯಪಟ್ಟು ಮೋದಿ ಸಭೆಗೆ ಭಾಗಿ ಮೋದಿ ಸಭೆಯಲ್ಲಿ ಭಾಗಿಯಾದ ಅಷ್ಟು ಪ್ರಮುಖರಲ್ಲಿ ಹಲವಾರು ನಾಯಕರು ED ಗೆ ಭಯಪಟ್ಟು ಬಂದಿದ್ದಾರೆ. ಅವರನ್ನ ಭಯಪಡಿಸಿ ಸಭೆಗೆ ಕರೆತರಲಾಗಿದೆ

ಎಂದು ಆಪ್‌ನ ರಾಷ್ಟ್ರೀಯ ವಕ್ತಾರ ರಾಘವ್ ಚಡ್ಡ ಹೇಳಿದರು.ಈ ರೀತಿ ಉಭಯ ತಂಡಗಳು ಆರೋಪ ಪ್ರತ್ಯಾರೋಪಗಳನ್ನ ಮಾಡುತ್ತಾ ಲೋಕ ಸಭಾ(raghav chadha tweet war)ಚುನಾವಣೆಗೆ ರಣ ಕಹಳೆ ಮೊಳಗಿಸಿದವು.

ಈ ರಣತಂತ್ರ ಯಾರಿಗೆ ಎಷ್ಟು ಲಾಭದಾಯಕವಾಗುತ್ತೆ. ಈ ಬಾರಿ ಜನತೆ ಯಾರನ್ನು ಗದ್ದುಗೆಗೇರಿಸ್ತಾರೆ, ಯಾರನ್ನು ಇಳಿಸ್ತಾರೆ ಅನ್ನೋದನ್ನ ಕಾದುನೋಡೋಣ.

Exit mobile version