ರೇಷನ್ ಕಾರ್ಡ್ ಹೊಂದಿರುವ ಬಡವರಿಗೆ ರಾಷ್ಟ್ರಧ್ವಜ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ : ರಾಹುಲ್ ಗಾಂಧಿ

Narendra Modi

ನವದೆಹಲಿ : ಪಡಿತರ ಚೀಟಿದಾರರನ್ನು(Ration Card Holders) ಪಡಿತರ ನೀಡುವ ಅಂಗಡಿಯವರು ಹಣ ಕೊಟ್ಟು ರಾಷ್ಟ್ರಧ್ವಜವನ್ನು(National Flag) ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದು ಬಿಜೆಪಿ ಸರ್ಕಾರದ(BJP Government) ಪ್ರಚಾರ(Promotion) ಪಿತೂರಿ ಎಂದು ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi) ಆರೋಪಿಸಿದ್ದಾರೆ.


ಈ ಕುರಿತು ಬಿಜೆಪಿ(BJP) ವಿರುದ್ದ ವಾಗ್ದಾಳಿ ನಡೆಸಿರುವ ಅವರು, ಪಡಿತರ ಚೀಟಿದಾರರನ್ನು ಪಡಿತರ ನೀಡುವ ಅಂಗಡಿಯವರು ಹಣ ಕೊಟ್ಟು ರಾಷ್ಟ್ರಧ್ವಜವನ್ನು ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದು ಬಿಜೆಪಿ ಸರ್ಕಾರದ ಪ್ರಚಾರ ಪಿತೂರಿ. ಈ ರೀತಿ ಮಾಡುವ ಮೂಲಕ ಬಿಜೆಪಿಯು “ರಾಷ್ಟ್ರೀಯತೆ”ಯನ್ನು ಮಾರಾಟ ಮಾಡುತ್ತಿದೆ ಮತ್ತು ಬಡವರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.


ತಮ್ಮ ಸಾಮಾಜಿಕ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಗಾಂಧಿ ಮತ್ತು ತ್ರಿವರ್ಣ ಧ್ವಜವು ನಮ್ಮ ಹೆಮ್ಮೆ ಮತ್ತು ಅದು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದೆ. ರಾಷ್ಟ್ರೀಯತೆಯನ್ನು ಎಂದಿಗೂ ಮಾರಾಟ ಮಾಡಲು ಸಾಧ್ಯವಿಲ್ಲ. ಪಡಿತರ ನೀಡುವಾಗ ಬಡವರಿಗೆ ತ್ರಿವರ್ಣ ಧ್ವಜಕ್ಕಾಗಿ 20 ರೂ.ಗಳನ್ನು ಕೊಡುವಂತೆ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ತ್ರಿವರ್ಣ ಧ್ವಜದ ಜೊತೆಗೆ, ಬಿಜೆಪಿ ಸರ್ಕಾರವು ನಮ್ಮ ದೇಶದ ಬಡವರ ಸ್ವಾಭಿಮಾನದ ಮೇಲೂ ದಾಳಿ ಮಾಡುತ್ತಿದೆ.

ಕೆಲವು ಪಡಿತರ ಅಂಗಡಿಯವರು 20 ರೂ. ಪಾವತಿಸಿ ರಾಷ್ಟ್ರಧ್ವಜ ಖರೀದಿಸುವಂತೆ ಬಲವಂತ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ಸಂಸದ ವರುಣ್ ಗಾಂಧಿ(Varun Gandhi) ಕೂಡ ಪಡಿತರ ಚೀಟಿದಾರರು ಪಡಿತರ ಪಡೆಯಲು ಷರತ್ತಿನಂತೆ ರಾಷ್ಟ್ರಧ್ವಜವನ್ನು ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಆಚರಣೆಗಳು ಬಡವರಿಗೆ ಹೊರೆಯಾದರೆ ಅದು ದುರದೃಷ್ಟಕರ ಎಂದಿದ್ದರು.


ಇನ್ನು ಕೇಂದ್ರ ಸರ್ಕಾರವು(Central Government) ತನ್ನ ‘ಹರ್ ಘರ್ ತಿರಂಗಾ’(Har Ghar Thiranga) ಕಾರ್ಯಕ್ರಮದ ಭಾಗವಾಗಿ ಆಗಸ್ಟ್ 13-15 ರಂದು ಜನರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಕರೆ ನೀಡಿದೆ.

Exit mobile version