Telangana : ಕಳೆದ 3 ದಿನಗಳ ದೀಪಾವಳಿ ಹಬ್ಬಕ್ಕೂ ಮುನ್ನ ಕರ್ನಾಟಕದ ರಾಯಚೂರಿನ ಮೂಲಕ ತೆಲಂಗಾಣ (Telangana) ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ (Rahul Gandhi Beats Drum) ಬ್ರೇಕ್ ಪಡೆದು, ಈಗ ತೆಲಂಗಾಣದಿಂದ ಪುನಾರಂಭಗೊಂಡಿದೆ.

ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮಖ್ತಲ್‌ನಿಂದ ಭಾರತ್ ಜೋಡೋ ಯಾತ್ರೆ ಪ್ರಾರಂಭಗೊಂಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಗುರುವಾರ ಸ್ಥಳೀಯ ಕಲಾವಿದರೊಂದಿಗೆ ಸೇರಿ ಡೋಲು ಬಾರಿಸಿ ಸಂಭ್ರಮಿಸಿದ್ದಾರೆ.
ಸದ್ಯ ಇದು 50ನೇ ದಿನದ ಯಾತ್ರೆಯಾದ ಕಾರಣ, ಇಂದು ರೈತರೊಂದಿಗೆ ಸಂವಾದ ನಡೆಸುವ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ.
ಗುರುವಾರ ರಾಹುಲ್ ಗಾಂಧಿ ಸ್ಥಳೀಯ ಕಲಾವಿದರೊಂದಿಗೆ ಡೋಲು ಬಾರಿಸಿ, ಸಂಭ್ರಮಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral) ಆಗಿದ್ದು, ನೆಟ್ಟಿಗರು ಅಭಿಪ್ರಾಯಗಳ ಸುರಿಮಳೆ ಹರಿಸಿದ್ದಾರೆ.
ಕೆಲವರು ಅಪಹಾಸ್ಯ ಮಾಡಿದರೆ, ಇನ್ನು ಕೆಲವರು (Rahul Gandhi Beats Drum) ಪರವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ : https://vijayatimes.com/kishore-requests-haters/
ವೀಡಿಯೊದಲ್ಲಿ ರಾಹುಲ್ ಗಾಂಧಿ ಕಲಾವಿದರಿಂದ ಸುತ್ತುವರೆದು ಸಂಭ್ರಮಿಸುತ್ತಿರುವುದನ್ನು ನೋಡಬಹುದು. “ದೀಪಾವಳಿ ಮತ್ತು ಖರ್ಗೆ-ಜಿ ಅಧಿಕಾರ ವಹಿಸಿಕೊಳ್ಳಲು 3 ದಿನಗಳ ವಿರಾಮದ ನಂತರ, ಭಾರತ್ ಜೋಡೋ ಯಾತ್ರೆಯು ನಾಳೆ (ಗುರುವಾರ) ಬೆಳಗ್ಗೆ 6 ಗಂಟೆಗೆ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮಖ್ತಲ್‌ನಿಂದ ಪುನರಾರಂಭಗೊಳ್ಳಲಿದೆ.

ಎಂದಿನಂತೆ ಮಧ್ಯಾಹ್ನ 2 ಗಂಟೆಗೆ ರೈತರ ಸಂವಾದ ನಡೆಯಲಿದೆ. ರಾಹುಲ್ ಗಾಂಧಿ ಸೇರಿದಂತೆ ಭಾರತ ಯಾತ್ರಿಗಳು ರಿಫ್ರೆಶ್ ಆಗಿದ್ದಾರೆ ಮತ್ತು ಪುನರಾರಂಭಿಸಲು ಉತ್ಸುಕರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಬುಧವಾರ ಟ್ವೀಟ್ ಮಾಡಿದ್ದಾರೆ.
https://youtu.be/lLC_P0d_2kQ ಮಾರುಕಟ್ಟೆಗೆ ಕೃತಕ ಮಾಂಸ ! Watch out meat lovers!
ಇದುವರೆಗೆ ಭಾರತ್ ಜೋಡೋ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದ ನಾಲ್ಕು ರಾಜ್ಯಗಳ 18 ಜಿಲ್ಲೆಗಳಲ್ಲಿ ಈಗಾಗಲೇ 1,230 ಕಿ.ಮೀ ಕ್ರಮಿಸಿದೆ.