ಸುಳ್ಳು ಭರವಸೆ ಬೇಕಾದ್ರೆ ಮೋದಿ, ಕೇಜ್ರಿವಾಲ್ ಮಾತು ಕೇಳಿ!

rahul

ಪಂಚ ರಾಜ್ಯ ಚುನಾವಣಾ ನೆಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಕಚ್ಚಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಸುಳ್ಳು ಭರವಸೆ ಕೇಳಬೇಕಾದ್ರೆ ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತುಗಳನ್ನು ಕೇಳಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ. ಪಂಜಾಬ್ ನ ಪಟಿಯಾಲ ಜಿಲ್ಲೆಯ ರಾಜ್ ಪುರದಲ್ಲಿ ನಡೆದ ‘ನವಿ ಸೋಚ್ ನವ ಪಂಜಾಬ್’ ಮೆರವಣಿಗೆಯಲ್ಲಿ ಮಾತನಾಡಿದ ಅವರು, 2014ರ ಮೊದಲು ಪ್ರಧಾನಿಯವರು ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ರೂ. ಪ್ರತಿ ವರ್ಷ ಯುವಕರಿಗೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು. ಈಗ ಅವರು ಉದ್ಯೋಗ ಅಥವಾ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ. ಈಗ ಬಿಜೆಪಿ ಡ್ರಗ್ಸ್ ಬಗ್ಗೆ ಮಾತ್ರ ಮಾತನಾಡುತ್ತಿದೆ ಎಂದು ಹೇಳಿದರು.


ನಾನು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಸಾರ್ವಜನಿಕರು ಸುಳ್ಳು ಭರವಸೆಗಳನ್ನು ನೀಡುವುದನ್ನು ಕೇಳಲು ಬಯಸಿದರೆ, ಮೋದಿಜಿ ಮತ್ತು ಕೇಜ್ರಿವಾಲ್ ಅವರ ಮಾತನ್ನು ಕೇಳಿ. ನನಗೆ ಸತ್ಯವನ್ನು ಮಾತ್ರ ಹೇಳಲು ಕಲಿಸಲಾಗಿದೆ ಎಂದು ಹೇಳಿದರು. ರಾಹುಲ್‌ ವಿರುದ್ದ 1000ಕ್ಕೂ ಹೆಚ್ಚು ದೂರು, ಯುವ ಮೋರ್ಚಾ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿರುವ ಬಗ್ಗೆ ಸ್ಪಷ್ಟಪಡಿಸಿದ್ದು, ಅಸ್ಸಾಂ ಬಿಜೆಪಿ ಯುವ ಮೋರ್ಚಾದ ಮಾಧ್ಯಮ ಸಂಚಾಲಕ ಬಿಸ್ವಜಿತ್ ಖೌಂಡ್ ಮಧ್ಯಮಗಳೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಹಿಂದೆ ಮಾಡಿರುವ ಟ್ವೀಟ್ ಆಕ್ಷೇಪರ್ಹವಾಗಿದೆ.

ಹಾಗಾಗಿ ರಾಹುಲ್ ಗಾಂಧಿ ವಿರುದ್ಧ ಯುವ ಮೋರ್ಚಾದ ಕಾರ್ಯಕರ್ತರು 1,000 ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿದ್ದಾರೆ. ಅರುಣಾಚಲ ಪ್ರದೇಶವು ತನ್ನ ಭಾಗವಾಗಿದೆ ಎಂಬ ಚೀನಾದ ಹೇಳಿಕೆಯನ್ನು ರಾಹುಲ್ ಗಾಂಧಿ ಅವರ ಟ್ವೀಟ್ ಒಂದು ಪರೋಕ್ಷವಾಗಿ ಬೆಂಬಲಿಸುತ್ತದೆ ಎಂದು ಆರೋಪಿಸಿದ್ದಾರೆ. ಕೇಸ್‌ ಹಿನ್ನಲೆ : ಕಳೆದ ವಾರ ರಾಹುಲ್ ಗಾಂಧಿ ನಮ್ಮ ಸಂಸ್ಕೃತಿ, ವೈವಿಧ್ಯತೆ, ಭಾಷೆ, ಜನ, ರಾಜ್ಯಗಳ ನಡುವೆ ಒಂದು ಸಂಬಂಧವಿದೆ. ಅದು ನಮ್ಮ ಹೆಮ್ಮೆ. ಕಾಶ್ಮೀರದಿಂದ ಕೇರಳದವರೆಗೆ ಮತ್ತು ಗುಜರಾತ್ನಿಂದ ಪಶ್ಚಿಮ ಬಂಗಾಳದವರೆಗೆ ಭಾರತದ ವೈವಿಧ್ಯತೆ ಹರಡಿದೆ ಎಂದು ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿದ್ದರು. ಇದೀಗ ಈ ಟ್ವೀಟ್ನಲ್ಲಿ ಈಶಾನ್ಯ ಭಾಗದ ರಾಜ್ಯಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಅಸ್ಸಾಂನ ಬಿಜೆಪಿ ಯುವ ಮೋರ್ಚಾ ದೂರು ದಾಖಲಿಸಿದೆ.

Exit mobile version