ರಾಹುಲ್ ಗಾಂಧಿ ಬುದ್ಧಿವಂತ ವ್ಯಕ್ತಿ, ಪಪ್ಪು ಅಲ್ಲ: ರಘುರಾಮ್ ರಾಜನ್

New Delhi : ರಾಹುಲ್ ಗಾಂಧಿ(Rahul gandhi)ಒಬ್ಬ ಬುದ್ಧಿವಂತ ವ್ಯಕ್ತಿ, ಪಪ್ಪು ಅಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್( Reserve Bank of India) ಮಾಜಿ ಗವರ್ನರ್ ರಘುರಾಮ್ ರಾಜನ್(Rahul gandhi smart man) ಹೇಳಿದ್ದಾರೆ.


ಕಳೆದ ತಿಂಗಳು ರಾಜಸ್ಥಾನದಲ್ಲಿ(Rajasthan) ನಡೆದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ(Bharath jodo yatra)

ಯಾತ್ರೆಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ಸಂಕ್ಷಿಪ್ತವಾಗಿ ಪಾಲ್ಗೊಂಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)(RBI) ಮಾಜಿ ಗವರ್ನರ್ ರಘುರಾಮ್ ರಾಜನ್,

ರಾಹುಲ್ ಗಾಂಧಿ ಅವರನ್ನು ‘ಪಪ್ಪು’ ಎಂದು ಕರೆಯುವುದು ದುರದೃಷ್ಟಕರ. ಆದ್ರೆ, ಅವರೊಬ್ಬ ಸ್ಮಾರ್ಟ್ ವ್ಯಕ್ತಿ ಎಂದು ಹೇಳಿದ್ದಾರೆ.

Rahul gandhi smart man

ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ನೇಪಥ್ಯದಲ್ಲಿ ಇಂಡಿಯಾ ಟುಡೆ(India today) ಸುದ್ದಿ ನಿರ್ದೇಶಕ ರಾಹುಲ್ ಕನ್ವಾಲ್(Rahul gandhi smart man) ಅವರೊಂದಿಗೆ ಮಾತನಾಡಿದ ರಘುರಾಮ್ ರಾಜನ್ ಅವರು,

ಈ ಚಿತ್ರವು ನಿಜಕ್ಕೂ ದುರದೃಷ್ಟಕರ ಎಂದು ನಾನು ಭಾವಿಸುತ್ತೇನೆ! ನಾನು ಅವರೊಂದಿಗೆ ಹಲವು ರಂಗಗಳಲ್ಲಿ ಸಂವಹನ ನಡೆಸಲು ಸುಮಾರು ಒಂದು ದಶಕವನ್ನು ಕಳೆದಿದ್ದೇನೆ.

ಇದನ್ನೂ ಓದಿ: https://vijayatimes.com/varisu-earns-210-crore/

ರಾಹುಲ್ ಗಾಂಧಿ ಯಾವುದೇ ರೀತಿಯಲ್ಲಿ ‘ಪಪ್ಪು’(Pappu) ಅಂದ್ರೆ ಮೂರ್ಖ ಎಂಬುದು ನನಗೆ ತಿಳಿಯಲಿಲ್ಲ. ಅವರು ಬುದ್ಧಿವಂತ ವ್ಯಕ್ತಿ, ಉತ್ಸಾಹಿ ಯುವಕ, ಕುತೂಹಲಕಾರಿ ವ್ಯಕ್ತಿ.

ಆದ್ಯತೆಗಳು, ಮೂಲಭೂತ ಅಪಾಯಗಳು ಮತ್ತು ಅವುಗಳನ್ನು ಮೌಲ್ಯಮಾಪನ ಮಾಡುವ ಸಾಮರ್ಥ್ಯದ ಉತ್ತಮ ಅರ್ಥವನ್ನು ಹೊಂದಿರುವುದು ಮುಖ್ಯ ಎಂದು ನಾನು ಮೊದಲಿಗೆ ಭಾವಿಸುತ್ತೇನೆ.

ರಾಹುಲ್ ಗಾಂಧಿ ಅವರು ಈ ಎಲ್ಲವನ್ನು ಮಾಡಲು ಸಂಪೂರ್ಣವಾಗಿ ಸಮರ್ಥರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ.

ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಮೌಲ್ಯಗಳ ಪರವಾಗಿ ನಿಂತಿದ್ದಾರೆ ಎಂದು ರಘುರಾಮ್ ರಾಜನ್ ಒತ್ತಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ(Narendra modi) ನೇತೃತ್ವದ ಕೇಂದ್ರದ ಆರ್ಥಿಕ ನೀತಿಗಳನ್ನು ಟೀಕಿಸಿದ ರಘುರಾಮ್ ರಾಜನ್ ಅವರು,

ನಾನು ಭಾರತ್ ಜೋಡೋ ಯಾತ್ರೆಯ ಮೌಲ್ಯಗಳ ಪರವಾಗಿ ನಿಂತಿದ್ದೇನೆ ಹೊರೆತು ನಾನು ಯಾವುದೇ ರಾಜಕೀಯ ಪಕ್ಷವನ್ನು ಸೇರುತ್ತಿಲ್ಲಎಂದು ರಘುರಾಮ್ ರಾಜನ್ ಹೇಳಿದ್ದಾರೆ.

ಸದ್ಯ ರಘರಾಮ್ ರಾಜನ್ ಅವರು ಕಾಂಗ್ರೆಸ್(Congress) ಪಕ್ಷದ ಉದ್ದೇಶ ಹಾಗೂ ರಾಹುಲ್ ಗಾಂಧಿ ಅವರನ್ನು ಹೊಗಳಿ ಮಾತನಾಡಿರುವುದನ್ನು ಹಲವರು ಸಾಮಾಜಿಕ ಜಲತಾಣದಲ್ಲಿ(Social Media) ಟೀಕಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಇದು ನಿಮ್ಮ ಮೊದಲ ಹೆಜ್ಜೆಯೇ? ಎಂದು ಪ್ರಶ್ನಿಸಿದ್ದಾರೆ!

Exit mobile version