“ಗುಂಗಿ ಗುಡಿಯಾ” ಮುಂದೆ ‘ಐರನ್ ಲೇಡಿ’ ಯಾದಳು ನನ್ನ ಅಜ್ಜಿ : ರಾಹುಲ್‌ಗಾಂಧಿ

Mumbai : ಮುಂಬೈನ ಮಾದ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ (Rahul Gandhi statement) ಅವರು, ನೀವು ನನ್ನ ಹೆಸರನ್ನು ಹೇಗೆ ಕರೆಯುತ್ತೀರಿ ಎಂಬ ಬಗ್ಗೆ ನನಗೆ ಕಾಳಜಿ ಇಲ್ಲ. ನೀವು ಏನು ಬೇಕಾದರೂ ನನ್ನನ್ನು ಕರೆಯಬಹುದು. ನಾನು ಅದನ್ನು ತೆಗೆದುಕೊಳ್ಳಬೇಕಾಗಿಲ್ಲ.

ಈ ಹಿಂದೆ  ನನ್ನ ಅಜ್ಜಿಯನ್ನು ʼಐರನ್ ಲೇಡಿʼ ಎಂದು ಕರೆಯುವ ಮೊದಲು ಅವಳನ್ನು ʼಗುಂಗಿ ಗುಡಿಯಾʼ ಎಂದು ಕರೆಯಲಾಗುತ್ತಿತ್ತು ಎಂದು ಹೇಳಿದ್ದಾರೆ. ನನ್ನನ್ನು ಕರೆಯಲು ಬಳಸುವ ಎಲ್ಲಾ ಹೆಸರುಗಳನ್ನು ನಾನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ. 

ಇದರಿಂದ ನನಗೆ ಒಳ್ಳೆಯದಾಗಿದೆ. ನನ್ನ ಹೆಸರನ್ನು  ಲೇವಡಿ ಮಾಡುವುದರಿಂದ ನಿಮಗೆ ಸಂತೋಷ ಉಂಟಾಗುತ್ತದೆ (Rahul Gandhi statement) ಎಂದಾದರೆ,

https://vijayatimes.com/cover-story-donation-scam/

ದಯವಿಟ್ಟು ನನ್ನ ಹೆಸರನ್ನು ಹೆಚ್ಚು ತೆಗೆದುಕೊಳ್ಳಿ . 24×7 ನನ್ನ ಮೇಲೆ ದಾಳಿ ಮಾಡುವ ಅದೇ ಜನರು ಅವಳನ್ನು ʼಗುಂಗಿ ಗುಡಿಯಾʼ ಎಂದು ಕರೆಯುತ್ತಿದ್ದರು.

ಇವರು ಲೇವಡಿ ಮಾಡಿದ ‘ಗುಂಗಿ ಗುಡಿಯಾ’ ಮುಂದೆ  ‘ಐರನ್ ಲೇಡ’ ಯಾದಳು. ಏಕೆಂದರೆ ಅವಳು ಯಾವಾಗಲೂ ಐರನ್ ಲೇಡಿಯೇ ಆಗಿದ್ದಳು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇನ್ನು  ಕಾಂಗ್ರೆಸ್‌ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಯು (Bharat Jodo Yatra) ಡಿಸೆಂಬರ್ 24 ರಂದು ದೆಹಲಿಯನ್ನು ತಲುಪಿತು.

ಸದ್ಯಕ್ಕೆ, ಯಾತ್ರೆಯು ವಿರಾಮದಲ್ಲಿದೆ ಮತ್ತು ಜನವರಿ 3 ರಂದು ಪುನರಾರಂಭವಾಗಲಿದೆ.

ಉತ್ತರ ಭಾರತದಲ್ಲಿ ಉಳಿದ ಯಾತ್ರೆಯನ್ನು ಪೂರ್ಣಗೊಳಿಸಲು ಜನವರಿ 3ರಂದು ದೆಹಲಿಯ ಕಾಶ್ಮೀರ್ ಗೇಟ್‌ನಿಂದ ಯಾತ್ರೆ ಪುನರಾರಂಭವಾಗಲಿದೆ. ಜಮ್ಮು(Jammu) ಮತ್ತು ಕಾಶ್ಮೀರದಲ್ಲಿ (Kashmir) ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
Exit mobile version