ರೈಲಲ್ಲಿ ರಾತ್ರಿ ಪ್ರಯಾಣಿಸುತ್ತೀರಾ? ಹಾಗಾದ್ರೆ ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಿ

ನೀವೇನಾದ್ರೂ ರೈಲಲ್ಲಿ ರಾತ್ರಿ ಪ್ರಯಾಣಿಸುವ ಪ್ಲಾನ್‌ ಮಾಡ್ತಿದ್ದೀರಾ. ಹಾಗಾದ್ರೆ ಇತ್ತೀಚೆಗೆ ಜಾರಿಯಾಗಿರುವ ಹೊಸ ನಿಯಮಗಳ ಬಗ್ಗೆ ನೀವು (railway department new rules) ತಿಳಿದುಕೊಳ್ಳಲೇ ಬೇಕು.

ಯಾಕಂದ್ರೆ ಪ್ರಯಾಣಿಕರ ಅನುಕೂಲಕ್ಕೆ ರೈಲ್ವೆ ಇಲಾಖೆ (railway department new rules) ಹಲವು ಹೊಸ ಯೋಜನೆಗಳನ್ನು ರೂಪಿಸಿದೆ.

ಅಲ್ಲದೆ ರಾತ್ರಿ ಪ್ರಯಾಣ ಸುಖಕರವಾಗಿರಲೆಂದು ಭಾರತೀಯ ರೈಲ್ವೆ ಇಲಾಖೆ ಹೊಸ ನಿಯಮಗಳನ್ನು ಘೋಷಿಸಿದೆ. ಅವು ಯಾವುವು ಅಂತ ತಿಳ್ಕೊಳೋಣ.

  1. ಏರು ದನಿಯಲ್ಲಿ ಮಾತನಾಡಬಾರದು: ಭಾರತೀಯ ರೈಲ್ವೆ ಇಲಾಖೆ ಹೊರಡಿಸಿದ ನಿಯಮಗಳ ಪ್ರಕಾರ ಏರು ಧ್ವನಿಯಲ್ಲಿ ಮಾತನಾಡುವ ಹಾಗಿಲ್ಲ. ಸಹ ಪ್ರಯಾಣಿಕರಿಗೆ ಕಿರಿಕಿರಿಯಾಗುವಂತ ಯಾವ (railway department new rules) ಚಟುವಟಿಕೆಗಳನ್ನು ಮಾಡುವ ಹಾಗಿಲ್ಲ.
  2. ಸಂಗೀತ ಕೇಳಬಾರದು: ಯಾವುದೇ ಪ್ರಯಾಣಿಕರು ತಮ್ಮ ಆಸನಗಳಲ್ಲಿ ಇಯರ್ ಫೋನ್ ಇಲ್ಲದೆ ದೊಡ್ಡ ಧನಿಯಲ್ಲಿ ಸಂಗೀತವನ್ನು ಕೇಳ ಬಾರದು. ಭಾರತೀಯ ರೈಲ್ವೆಯು ವಿಶಾಲವಾದ ಜಾಲವನ್ನು ಹೊಂದಿದ್ದು ದಿನನಿತ್ಯ ಲಕ್ಷಾಂತರ ಜನರು ಈ ಮೂಲಕ ಪ್ರಯಾಣಿಸುತ್ತಾರೆ, ಪ್ರಯಾಣಿಕರು ಹೆಚ್ಚು ಶಬ್ದ ಮಾಡುವುದರಿಂದ ಉಳಿದ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ, ಅಂತಹ ಸಂಗತಿಗಳು ಪ್ರಯಾಣಿಕರಿಗೆ ಕೆಟ್ಟ ಅನುಭವವನ್ನು ನೀಡಲಿವೆ ಎನ್ನುವ ಕಾರಣದಿಂದ ರೈಲ್ವೆ ಈ ಹೊಸ ನಿಯಮಗಳನ್ನು ಘೋಷಿಸಿದೆ.
  3. ಟಿಟಿಇ ಬರೋದಿಲ್ಲ: ರಾತ್ರಿ 10 ಗಂಟೆಯ ನಂತರ ಟಿಕೆಟ್ ಪರಿಶೀಲಿಸಲು ಟಿಟಿಇ ಬರುವುದಿಲ್ಲ. ಟಿಟಿಇಯ ಆಗಮನದಿಂದ ಪ್ರಯಾಣಿಕರ ಸುಖ ನಿದ್ದೆಗೆ ಅಡ್ಡಿಯಾಗುತ್ತೆ ಅನ್ನೋ ಕಾರಣಕ್ಕೆ ಈ ಹೊಸ ನಿಯಮವನ್ನು ಜಾರಿ ಮಾಡಲಾಗಿದೆ
  4. ಗುಂಪಾಗಿ ಮಾತನಾಡಬಾರದು: ರಾತ್ರಿ ಹೊತ್ತು ಗುಂಪಾಗಿ ಪ್ರಯಾಣಿಸುವವರು 10 ಗಂಟೆಯ ನಂತರ ಮಾತನಾಡುವಂತಿಲ್ಲ. ಆರಾಮವಾಗಿ ಮಲಗಿ ವಿಶ್ರಾಂತಿ ಪಡೆಯಬೇಕು.
  5. ದೀಪಗಳನ್ನು ಹಚ್ಚುವಂತಿಲ್ಲ: ರಾತ್ರಿ ಬೆಳಕಿನ ಹೊರತು ಬೇರೆ ಯಾವುದೇ ದೀಪಗಳನ್ನು ಹಚ್ಚುವಂತಿಲ್ಲ. ದೀಪಗಳನ್ನು ಹಚ್ಚುವುದು ತೆಗೆಯುವುದು ಸಹ ಪ್ರಯಾಣಿಕರಿಗೆ ಭಾರೀ ಕಿರಿಕಿರಿಯುಂಟು ಮಾಡುತ್ತೆ.
  6. ಪ್ರಯಾಣಿಕರನ್ನು ಪ್ರಶ್ನಿಸುವಂತಿಲ್ಲ: ಮಧ್ಯಮ-ಬರ್ತ್ ಸಹ-ಪ್ರಯಾಣಿಕರು ತಮ್ಮ ಆಸನವನ್ನು ತೆರೆದರೆ ಕೆಳ-ಬರ್ತ್ ಪ್ರಯಾಣಿಕರು ಏನನ್ನೂ ಹೇಳವಂತಿಲ್ಲ
  7. ಆಹಾರ ಸರಬರಾಜಿಗೆ ಬ್ರೇಕ್‌: ರೈಲು ಸೇವೆಗಳಲ್ಲಿ ಆನ್‌ಲೈನ್ ಆಹಾರವು ರಾತ್ರಿ 10 ಗಂಟೆಯ ನಂತರ ಆಹಾರವನ್ನು ನೀಡಲು ಸಾಧ್ಯವಿಲ್ಲ. ಆದಾಗ್ಯೂ, ಇ-ಕೇಟರಿಂಗ್ ಸೇವೆಗಳೊಂದಿಗೆ ರಾತ್ರಿಯಲ್ಲಿಯೂ ನಿಮ್ಮ ಊಟ ಅಥವಾ ಉಪಹಾರವನ್ನು ನೀವು ರೈಲಿನಲ್ಲಿ ಪೂರ್ವ-ಆರ್ಡರ್ ಮಾಡಬಹುದು.

-ಅಮರೇಶ

Exit mobile version