ಪೂರ್ವ ರೈಲ್ವೆಯಲ್ಲಿ ಬೃಹತ್ ಹುದ್ದೆಗಳ ನೇಮಕ. ಎಸ್‌ಎಸ್‌ಎಲ್‌ಸಿ (SSLC) ಮತ್ತು ಐಟಿಐ ವಿದ್ಯಾರ್ಹತೆ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅರ್ಜಿಗೆ ಇದೆ ತಿಂಗಳು ಅಕ್ಟೋಬರ್ 26 ರವರೆಗೆ ಅವಕಾಶ ನೀಡಲಾಗಿದೆ.

ಪೂರ್ವ ರೈಲ್ವೆಯ – ರೈಲ್ವೆ ನೇಮಕಾತಿ ಮಂಡಳಿಯು ಆಕ್ಟ್ ಅಪ್ರೆಂಟಿಸ್ ಕಾಯ್ದೆಯಡಿಯಲ್ಲಿ 3115 ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಇದೀಗ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ರೈಲ್ವೆ ಇಲಾಖೆಯಲ್ಲಿ ಅಪ್ರೆಂಟಿಸ್ ಪೋಸ್ಟ್‌ನಲ್ಲಿ #ApprenticePost ಕೆಲಸ ಮಾಡಲು ಆಸಕ್ತಿ ಇರುವವರು ಈ ಹುದ್ದೆಗಳಿಗೆ ಅರ್ಜಿಸಲ್ಲಿಸಬಹದು. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಪರೀಕ್ಷೆ ನಡೆಸಲಾಗುವುದಿಲ್ಲ. ಹುದ್ದೆಗಳ ವಿವರ ಈ ಕೆಳಗಿನಂತಿದೆ.
ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ವಿವರ
೧. ಲಿಲುಅ ವಿಭಾಗ – 612
೨. ಔರಾ ವಿಭಾಗ – 659
೩. ಕಂಚ್ರಪರ ವರ್ಕ್‌ಶಾಪ್ –187
೪. ಸೀಲ್ಧಾಹ್ ವಿಭಾಗ – 440
೫. ಅಸನ್ಸೋಲ್ ವಿಭಾಗ –412
೬.ಮಾಲ್ದಾ ವಿಭಾಗ – 138
೭. ಜಮಲ್ಪುರ್ ವರ್ಕ್‌ಶಾಪ್ –667
ವಿದ್ಯಾರ್ಹತೆ :
ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ (ITI) ವಿದ್ಯಾರ್ಹತೆಯನ್ನು ಕನಿಷ್ಠ 50 ಅಂಕಗಳೊಂದಿಗೆ ಪಾಸ್ ಮಾಡಿದವರು ಅರ್ಜಿ ಸಲ್ಲಿಸಬಹುದು. ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಸರ್ಟಿಫಿಕೇಟ್ (SCVT) ಹೊಂದಿರಬೇಕು. ಕೇಂದ್ರ ರೈಲ್ವೆಯಲ್ಲಿ 2409 ಹುದ್ದೆ ನೇಮಕ: ಯಾವುದೇ ಪರೀಕ್ಷೆ ಇರುವುದಿಲ್ಲ.
ವಯಸ್ಸಿನ ಅರ್ಹತೆ
ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿವೆ.
ಪ್ರಮುಖ ದಿನಾಂಕಗಳು
ಅಧಿಸೂಚನೆ ಬಿಡುಗಡೆ ದಿನಾಂಕ : 12-09-2023
ಆನ್‌ಲೈನ್ ಅಪ್ಲಿಕೇಶನ್ ಸ್ವೀಕಾರ ಆರಂಭ ದಿನಾಂಕ : 27-09-2023
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಕೆಗೆ ಕೊನೆ ದಿನಾಂಕ : 26-10-2023

ಉತ್ತರ ರೈಲ್ವೆಯಲ್ಲಿ ಉದ್ಯೋಗಾವಕಾಶ: ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು.
ಅಪ್ಲಿಕೇಶನ್ ಶುಲ್ಕ ರೂ.100.
ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್
ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ @DebitCard,ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.
ಪೂರ್ವ ರೈಲ್ವೆಯಲ್ಲಿ ಆಕ್ಟ್ ಅಪ್ರೆಂಟಿಸ್ ಪೋಸ್ಟ್‌ಗಳನ್ನು ಭರ್ತಿ ಮಾಡುವ ಟ್ರೇಡ್ (ವಿಭಾಗ)ಗಳೆಂದರೆ ಫಿಟ್ಟರ್, ಮೆಕ್ಯಾನಿಕಲ್, ವೆಲ್ಡರ್,ಇಲೆಕ್ಟ್ರಿಕಲ್, ಪೇಂಟರ್,ಕಾರ್ಪೆಂಟರ್, ಮೆಕ್ಯಾನಿಕ್ ಮಷಿನ್ ಟೂಲ್, ಟರ್ನರ್, ವೈಯರ್‌ಮನ್, ರೆಫ್ರಿಜೆರೇಷನ್ ಟ್ರೇಡ್‌ಗಳು.
ಪೂರ್ವ ರೈಲ್ವೆಯ ಅಧಿಕೃತ ವೆಬ್‌ಸೈಟ್ ವಿಳಾಸ: https://er.indianrailways.gov.in/
ರೂ.52.5 ಲಕ್ಷ ವೇತನ! ರೈಲ್ವೆ ಜೆನೆರಲ್ ಮ್ಯಾನೇಜರ್’ಗೆ ತಿಂಗಳಿಗೆ ಇಷ್ಟೊಂದು ಸಂಬಳವೇ.. ಹಾಗಾದರೆ ಈ ಹುದ್ದೆ ಪಡೆಯುವುದು ಹೇಗೆ? ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯ ಶೇಕಡ.50 ಅಂಕಗಳು ಹಾಗೂ ಐಟಿಐ ಟ್ರೇಡ್‌ನಲ್ಲಿ ಗಳಿಸಿದ ಅಂಕಗಳ ಶೇಕಡ.50 ಅಂಕಗಳನ್ನು ಪರಿಗಣಿಸಿ, ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ. ನಂತರ ಹುದ್ದೆಗಳು ಹಾಗೂ ಮೀಸಲಾತಿಗೆ ಅನುಗುಣವಾಗಿ ಸಂದರ್ಶನಕ್ಕೆ ಕರೆದು ಆಯ್ಕೆ ಮಾಡಲಾಗುತ್ತದೆ. ಶಾರ್ಟ್ ಲಿಸ್ಟ್ ಆದವರಿಗೆ ದಾಖಲೆಗಳ ಪರಿಶೀಲನೆ / ಮೆಡಿಕಲ್ ಟೆಸ್ಟ್ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಪೂರ್ವ ರೈಲ್ವೆ ಅಧಿಸೂಚನೆ:
ಪ್ರಕಟಣೆ ದಿನಾಂಕ: 15-09-2023
ಕೊನೆ ದಿನಾಂಕ: 26-10-2023
ಉದ್ಯೋಗ ವಿಧ: ಇಂಟರ್ನ್
ಉದ್ಯೋಗ ಕ್ಷೇತ್ರ: ರೈಲ್ವೆ ಉದ್ಯೋಗ
ವಿದ್ಯಾರ್ಹತೆ: ಐಟಿಐ
ಕಾರ್ಯಾನುಭವ: 0ವರ್ಷ
ನೇಮಕಾತಿ ಸಂಸ್ಥೆ
ಸಂಸ್ಥೆಯ ಹೆಸರು ಪೂರ್ವ ರೈಲ್ವೆ
ವೆಬ್‌ಸೈಟ್ ವಿಳಾಸ https://er.indianrailways.gov.in/
ಉದ್ಯೋಗ ಸ್ಥಳ:
ವಿಳಾಸ: ಕೋಲ್ಕತ್ತ, ಪ್ರದೇಶ ಕೋಲ್ಕತ್ತ, ಅಂಚೆ ಸಂಖ್ಯೆ 700012, ಭಾರತ
ಮೇಘಾ ಮನೋಹರ ಕಂಪು