ಏಕರೂಪ ನಾಗರಿಕ ಸಂಹಿತೆ, ಜನಸಂಖ್ಯೆ ನಿಯಂತ್ರಣ ಕಾನೂನನ್ನು ತರುವಂತೆ ಪ್ರಧಾನಿಗೆ ಮನವಿ : ರಾಜ್ ಠಾಕ್ರೆ!

Raj Thackrey

ಮಹಾರಾಷ್ಟ್ರ(Maharashtra) ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ(Raj Thackrey) ಮೇ 22 ರಂದು ಪುಣೆಯಲ್ಲಿ(Pune) ಸಾರ್ವಜನಿಕ ರ್ಯಾಲಿಯನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ರಾಜ್ ಠಾಕ್ರೆ ಏಕರೂಪ ನಾಗರಿಕ ಸಂಹಿತೆ ಮತ್ತು ಜನಸಂಖ್ಯೆ ನಿಯಂತ್ರಣ ಕಾನೂನನ್ನು ತರುವಂತೆ ಪ್ರಧಾನಿ(PrimeMinister) ನರೇಂದ್ರ ಮೋದಿಯವರಿಗೆ(Narendra Modi) ಮನವಿ ಮಾಡಿದ್ದಾರೆ. ಏಕರೂಪ ನಾಗರಿಕ ಸಂಹಿತೆಯನ್ನು ಶೀಘ್ರವಾಗಿ ತರಲು ನಾನು ಪ್ರಧಾನಿಯವರನ್ನು ವಿನಂತಿಸುತ್ತೇನೆ, ಜನಸಂಖ್ಯೆ ನಿಯಂತ್ರಣದ ಬಗ್ಗೆ ಕಾನೂನನ್ನು ತರಬೇಕು ಮತ್ತು ಔರಂಗಾಬಾದ್(Aurangabad) ಹೆಸರನ್ನು ಸಂಭಾಜಿನಗರ ಎಂದು ಬದಲಾಯಿಸಬೇಕು ಎಂದು ಠಾಕ್ರೆ ಉಲ್ಲೇಖಿಸಿ ಹೇಳಿದ್ದಾರೆ.

ರ್ಯಾಲಿಯಲ್ಲಿ ಎಂಎನ್‌ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಔರಂಗಾಬಾದ್‌ನ ಲೋಕಸಭಾ ಸ್ಥಾನವನ್ನು ಗೆಲ್ಲಲು ಎಐಎಂಐಎಂಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು. ಎಐಎಂಐಎಂ ಅಲಂಕರಿಸಲು ಅನುವು ಮಾಡಿಕೊಡಲು ಎಂವಿಎ ಆಡಳಿತ ಪಕ್ಷವು ಕಾರಣವಾಗಿದೆ ಎಂದು ಹೇಳಿದರು. ಎಐಎಂಐಎಂ ಅಭ್ಯರ್ಥಿ (ಇಮ್ತಿಯಾಜ್ ಜಲೀಲ್) ಶಿವಸೇನಾ ಅಭ್ಯರ್ಥಿಯನ್ನು (ಚಂದ್ರಕಾಂತ್ ಖೈರೆ) ಸೋಲಿಸಿ ಔರಂಗಾಬಾದ್‌ನಲ್ಲಿ ಸಂಸದರಾಗಿ ಆಯ್ಕೆಯಾಗಿರುವುದು ಆಘಾತಕಾರಿಯಾಗಿದೆ.

ಎಐಎಂಐಎಂ ಚುನಾಯಿತ ಪ್ರತಿನಿಧಿಗಳು ಔರಂಗಜೇಬನ ಸಮಾಧಿಗೆ ಹೋಗಿ ಛತ್ರಪತಿ ಶಿವಾಜಿ ಮಹಾರಾಜರನ್ನು ಕೊಲ್ಲಲು ಈ ಪ್ರದೇಶಕ್ಕೆ ಬಂದ ಮೊಘಲ್ ರಾಜನಿಗೆ ಹೂವುಗಳನ್ನು ಅರ್ಪಿಸಿದ ನಂತರ ಮಹಾರಾಷ್ಟ್ರವು ಕೆಂಡಾಮಂಡಲವಾಗಿದೆ ಎಂದು ನಾನು ಭಾವಿಸಿದ್ದೇನೆ. ರಾಜ್ ಠಾಕ್ರೆ ಅವರು ತಮ್ಮ ಅಯೋಧ್ಯೆ ಪ್ರವಾಸವನ್ನು ಅವರ ಸೊಂಟದ ಮೂಳೆಯ ಕೀಲು ಬದಲಾವಣೆಯಿಂದಾಗಿ ಮುಂದೂಡಲಾಗಿದೆ ಎಂದು ಹೇಳಿದರು. ಮಾಧ್ಯಮಗಳಿಂದ ಯಾವುದೇ ತಪ್ಪು ಮಾಹಿತಿ ಹರಡದಂತೆ ನಾನು ಸ್ಪಷ್ಟಪಡಿಸುತ್ತಿದ್ದೇನೆ ಎಂದು ಹೇಳಿದರು.

ಎರಡು ದಿನಗಳ ಹಿಂದೆ, ನನ್ನ ಅಯೋಧ್ಯೆ ಭೇಟಿಯನ್ನು ಮುಂದೂಡುವ ಬಗ್ಗೆ ನಾನು ಟ್ವೀಟ್ ಮಾಡಿದ್ದೆ. ನನ್ನ ಅಯೋಧ್ಯೆ ಭೇಟಿಯನ್ನು ವಿರೋಧಿಸಿದವರು ನನ್ನನ್ನು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ನಾನು ಈ ವಿವಾದಕ್ಕೆ ಸಿಲುಕದಿರಲು ದೃಢವಾಗಿದ್ದೇನೆ ಎಂದು ಹೇಳಿದ್ದಾರೆ.

Exit mobile version