ಸಾವರ್ಕರ್ ರಾಷ್ಟ್ರೀಯ ಐಕಾನ್ – ರಾಜನಾಥ್ ಸಿಂಗ್

ನವದೆಹಲಿ ಅ 14 : ವೀರ ಸಾವರ್ಕರ್ ಒಬ್ಬ ಅಪ್ಪಟ ರಾಷ್ಟ್ರವಾದಿ ಮತ್ತು 20ನೇ ಶತಮಾನದ ಭಾರತದ ಮೊದಲ ಮಿಲಿಟರಿ ಕಾರ್ಯತಂತ್ರಜ್ಞ ಎಂದು ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಮಹಾತ್ಮ ಗಾಂಧೀಜಿಯವರ ಮನವಿಯ ಮೇರೆಗೆ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾದಾನ ನೀಡುವಂತೆ ಪತ್ರ ಬರೆದಿದ್ದರು. ಮಾರ್ಕ್ಸ್‌ವಾದಿಗಳು ಮತ್ತು ಲೆನಿನ್‌ವಾದಿಗಳು ಸಾವರ್ಕರ್ ಅವರನ್ನು ತಪ್ಪಾಗಿ ಟೀಕೆ ಮಾಡುತ್ತಿದ್ದಾರೆ ಎಂದಿದ್ದಾರೆ.

ವೀರ ಸಾವರ್ಕರ್ ಅವರನ್ನು ರಾಷ್ಟ್ರೀಯ ಐಕಾನ್ ಎಂದು ಕರೆದಿರುವ ರಾಜನಾಥ್ ಸಿಂಗ್, ಅವರು ದೇಶಕ್ಕೆ ರಕ್ಷಣಾ ಮತ್ತು ರಾಜತಾಂತ್ರಿಕ ಸಿದ್ಧಾಂತವನ್ನು ನೀಡಿದ್ದಾರೆ ಎಂದಿದ್ದಾರೆ

“ಸಾವರ್ಕರ್ ಭಾರತೀಯ ಇತಿಹಾಸದ ಐಕಾನ್ ಮತ್ತು ಮುಂದೆಯೂ ಐಕಾನ್ ಆಗಿ ಉಳಿಯಲಿದ್ದಾರೆ. ಅವರ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳು ಇರಬಹುದು ಆದರೆ ಅವರನ್ನು ಕೀಳಾಗಿ ನೋಡುವುದು ಸಮಂಜಸವಲ್ಲ ಮತ್ತು ನ್ಯಾಯಸಮ್ಮತವಲ್ಲ. ಅವರೊಬ್ಬ ಪ್ರಖರ ರಾಷ್ಟ್ರೀಯವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರ. ಆದರೆ ಮಾರ್ಕ್ಸ್‌ವಾದಿ, ಲೆನಿನ್ ವಾದಿಗಳು ಅವರನ್ನು ಫ್ಯಾಸಿಸ್ಟ್ ಎಂದು ಟೀಕಿಸುತ್ತಾರೆ. ಸಾವರ್ಕರ್ ಬಗೆಗಿನ ದ್ವೇಷ ಅಸಂಬದ್ಧ” ಎಂದಿದ್ದಾರೆ.

Exit mobile version