Mumbai : ಬಾಲಿವುಡ್‌ನಟಿ ರಾಖಿ ಸಾವಂತ್(Rakhi sawant) ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತಮ್ಮ ಹೆಸರನ್ನು ʼರಾಖಿ ಸಾವಂತ್‌ಪಾತೀಮಾʼ ಎಂದು ಬದಲಾಯಿಸಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಬಾಲಿವುಡ್‌ನಟಿ ರಾಖಿ ಸಾವಂತ್ ಮತ್ತು ಆದಿಲ್ ಖಾನ್(Adil khan) ಅವರ ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಮದುವೆ ಪ್ರಮಾಣಪತ್ರದ ಫೋಟೋ ಜೊತೆಗೆ ರಾಖಿ ಸಾವಂತ್‌ಹೆಸರನ್ನು ರಾಖಿ ಸಾವಂತ್ ಫಾತಿಮಾ(Rakhi sawant fatima) ಎಂದು ಬರೆಯಲಾಗಿದೆ. ರಾಖಿ ಸಾವಂತ್ ಅವರು ಆದಿಲ್ ಖಾನ್ ಜೊತೆಗಿನ ರಹಸ್ಯ ವಿವಾಹವನ್ನು ಒಪ್ಪಿಕೊಂಡಿದ್ದಾರೆ. ಅದು ಕಳೆದ ವರ್ಷ ನಡೆದಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ಆದಿಲ್ ಖಾನ್ ಮದುವೆ ಮತ್ತು ಫೋಟೋಗಳನ್ನು ನಿರಾಕರಿಸಿದ್ದಾರೆ.
ರಾಖಿ ಸಾವಂತ್ ತನ್ನ ಹೆಸರನ್ನು ಫಾತಿಮಾ ಎಂದು ಬದಲಾಯಿಸಿದ್ದಾರೆಯೇ ಎಂಬ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ರಾಖಿ ಸಾವಂತ್ ಸಹೋದರ ಹೇಳಿದ್ದಾರೆ. ಆದರೆ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ(Social Media) ಬಿಸಿಬಿಸಿ ಚರ್ಚೆ ನಡೆದಿದೆ. ರಾಖಿ ಸಾವಂತ್ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ವಿವಾಹ ಮಾಡಿಕೊಂಡಿರುವುದರ ಕುರಿತು ಪ್ರತಿಕ್ರಿಯೆ ನೀಡಿರುವ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರು, “ರಾಖಿ ಸಾವಂತ್ ಅವರು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದ ಒಂದೇ ಕಾರಣಕ್ಕಾಗಿ ಅವರು ಇಸ್ಲಾಂಗೆ(Islam) ಮತಾಂತರಗೊಳ್ಳಬೇಕಾಯಿತು.
ಇಸ್ಲಾಂ ವಿಮರ್ಶಾತ್ಮಕ ಪರಿಶೀಲನೆ, ವಾಕ್ ಸ್ವಾತಂತ್ರ್ಯ, ಮಹಿಳಾ ಸಮಾನತೆ, ಮುಸ್ಲಿಮೇತರ ಹಕ್ಕುಗಳು ಇತ್ಯಾದಿಗಳನ್ನು ವಿಕಸನಗೊಳಿಸಬೇಕು ಮತ್ತು ಸ್ವೀಕರಿಸಬೇಕು. ಇಲ್ಲದಿದ್ದರೆ ಆಧುನಿಕ ಸಮಾಜದಲ್ಲಿ ಅದಕ್ಕೆ ಯಾವುದೇ ಸ್ಥಾನವಿಲ್ಲ” ಎಂದು ಅವರು ಹೇಳಿದ್ದಾರೆ. ಇನ್ನು ವರದಿಗಳ ಪ್ರಕಾರ, ಮುಂಬೈನ ಓಶಿವಾರದಲ್ಲಿರುವ ರಾಖಿ ಸಾವಂತ್ ಅವರ ಮನೆಯಲ್ಲಿ ಮೇ 29, 2022 ರಂದು ನಿವಾಹ ನಡೆದಿದೆ ಮತ್ತು ವಧುವಿಗೆ 51,786 ಭದ್ರತಾ ಠೇವಣಿ ನೀಡಲಾಗಿದೆ. ರಾಖಿ ಸಾವಂತ್ ಅವರ ಹೆಸರು ಬದಲಾವಣೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ‘ಲವ್ ಜಿಹಾದ್’(Love jihad) ಕುರಿತು ವಿವಿಧ ವಲಯಗಳಿಂದ ಟೀಕೆಗಳು ಬರುತ್ತಿವೆ. ಪ್ರೀತಿಸಿ ಮದುವೆಯಾಗುವುದಾದರೆ ಮತಾಂತರವೇಕೆ? ಮತಾಂತರವಾಗದೇ ಮದುವೆಯಾಗಲು ಸಾಧ್ಯವಾಗದಿದ್ದರೆ ಅದೆಂತಾ ಪ್ರೀತಿ? ಎಂದು ಅನೇಕರು ಈ ಮತಾಂತರದ ಮದುವೆಯನ್ನು ಟೀಕಿಸಿದ್ದಾರೆ.