ರಕ್ತದೊತ್ತಡದಲ್ಲಿ ಏರುಪೇರು: ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

ಚೆನೈ, ಡಿ. 25: ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಜನಿ ಅಭಿನಯದ ಅಣ್ಣಾತ್ತೆ ಚಿತ್ರದ ಶೂಂಟಿಂಗ್‌ ವೇಳೆ ಚಿತ್ರತಂಡದ ನಾಲ್ವರಿಗೆ ಕೊರೊನಾ ಪಾಸಿಟಿವ್‌ ಬಂದಿತ್ತು. ಹೀಗಾಗಿ ಶೂಟಿಂಗ್‌ ಅರ್ಧಕ್ಕೆ ನಿಲ್ಲಿಸಿ ಚೆನ್ನೈಗೆ ಹಿಂತಿರುಗಿದ್ದ ರಜನಿ ಮನೆಯಲ್ಲೇ ಸೆಲ್ಫ್‌ ಕ್ವಾರಂಟೇನ್‌ ಆಗಿದ್ದರು. ಆದರೆ ಇಂದು ರಜನಿ ಆರೋಗ್ಯದಲ್ಲಿ ಏರಳಿತವಾದ ಕಾರಣ ಅವರನ್ನು  ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿ.12 ರಂದು ಹುಟ್ಟ ಹಬ್ಬ ಆಚರಿಸಿಕೊಂಡಿದ್ದ ರಜನಿ ಇದೇ ತಿಂಗಳ 31ರಂದು ತಮ್ಮ ಹೊಸ ರಾಜಕೀಯ ಪಕ್ಷವನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ರಜನಿ ಕೂಡ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

Exit mobile version