Bengaluru: ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿರುವ ಪ್ರಜ್ವಲ್ ರೇವಣ್ಣ ( Prajwal Revanna) ಪೆನ್ ಡ್ರೈವ್ ಪ್ರಕರಣದಲ್ಲಿ ಜೆಡಿಎಸ್(Ramalingareddy supports Okkaliga)
ಮತ್ತು ಬಿಜೆಪಿ (BJP) ನಾಯಕರು ಒಕ್ಕಲಿಗ ಸಮುದಾ ಯವನ್ನು ಎಳೆದು ತರುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ನ ಒಕ್ಕಲಿಗ ಸಚಿವರು ಮತ್ತು ಶಾಸಕರು, ಒಕ್ಕಲಿಗ ಸಮುದಾಯಕ್ಕೂ,
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಸಂಬಂಧ ಕಲ್ಪಿಸುವುದು ಸರಿಯಲ್ಲ. ಸಮುದಾಯದ ಹೆಸರು ಹೇಳಿಕೊಂಡು ತಪ್ಪು ಕೆಲಸ ಮಾಡಿ ಆಮೇಲೆ ಅಪಕೀರ್ತಿ ದೂಡಬೇಕು ಎಂಬುದು ಇವರ ಉದ್ದೇಶ ಎಂದು ಸಾರಿಗೆ
ಸಚಿವ ರಾಮಲಿಂಗಾರೆಡ್ಡಿ (Ramalingareddy) ಕಿಡಿ (Ramalingareddy supports Okkaliga) ಕಾರಿದ್ದಾರೆ.
ಒಕ್ಕಲಿಗ ನಾಯಕರಾದ ಎನ್.ಚೆಲುವರಾಯಸ್ವಾಮಿ, (N. Cheluvarayaswamy,) ಕೃಷ್ಣ ಬೈರೇಗೌಡ (Krishna Byregowda,) , ರಾಮಲಿಂಗಾರೆಡ್ಡಿ (Ramalingareddy) , ಡಾ. ಎಂ.ಸಿ.ಸುಧಾಕರ್
(Dr. MC Sudhakar) ಸೇರಿದಂತೆ ಕಾಂಗ್ರೆಸ್ನ (Congress) ಪ್ರಮುಖ ಒಕ್ಕಲಿಗ ನಾಯಕರು ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ದಿಢೀರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಪ್ರಜ್ವಲ್ ರೇವಣ್ಣ (Prajwal Revanna)
ಪ್ರಕರಣದ ಪ್ರಸ್ತುತ ಬೆಳವಣಿಗೆಗಳ ಕುರಿತಂತೆ ಜೆಡಿಎಸ್ (JDS) ರಾಜ್ಯಾಧ್ಯಕ್ಷಎಚ್.ಡಿ.ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ತಮ್ಮ ಸ್ವಾರ್ಥಕ್ಕಾಗಿ ಹೇಳಿಕೆ ನೀಡುವ ಮೂಲಕ ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಜೆಡಿಎಸ್ (JDS) ನಾಯಕ ಕುಮಾರಸ್ವಾಮಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್. ಅಶೋಕ್ (R Ashok) ಅವರು ಪ್ರಜ್ವಲ್ ಪ್ರಕರಣದಿಂದ ಒಕ್ಕಲಿಗರನ್ನು ಮುಗಿಸಲು ಸರ್ಕಾರ ಮುಂದಾಗಿದೆ ಎಂದು ಹೇಳುತ್ತಾರೆ. ಪ್ರಜ್ವಲ್ (Prajwal) ಅಶ್ಲೀಲ ವಿಡಿಯೋ ಪ್ರಕರಣಕ್ಕೂ ಒಕ್ಕಲಿಗರಿಗೂ
ಏನು ಸಂಬಂಧ? ಸುಖಾಸುಮ್ಮನೆ ನಮ್ಮ ಸಮುದಾಯವನ್ನು ಎಳೆತಂದು ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಜೆಡಿಎಸ್ ಮತ್ತು ಬಿಜೆಪಿ ನಾಯಕರ ನಡುವಿನ ಕಿತ್ತಾಟಕ್ಕೆ ಹೊರಬಂದ ಪ್ರಕರಣ.
ಅವರ ಜಗಳದಿಂದ ರಾಷ್ಟ್ರಮಟ್ಟದಲ್ಲಿ ಒಕ್ಕಲಿಗ ಸಮುದಾ ಯದ ಮಾನ ಹರಾಜಾಗುವಂತಾಗಿದೆ .ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು (punished) .ಕುಮಾರಸ್ವಾಮಿ ಏನೇ ಮಾಡಿದರೂ ಒಕ್ಕಲಿಗರು
(Okkaliga) ಬೆಂಬಲಿಸುತ್ತಾರೆ ಎಂದು ತಿಳಿದಿದ್ದರೆ ಅದು ಅವರ ಭ್ರಮೆ. ಒಕ್ಕಲಿಗ ಸಮುದಾಯ ನಿಮ್ಮನ್ನು ಬೆಂಬಲಿಸಿದಂತೆ, ನಮ್ಮನ್ನೂ ಬೆಂಬಲಿಸುತ್ತದೆ. ನಾವೂ ಸಮುದಾಯದ ಆಶೀರ್ವಾದದಿಂದಲೇ
ಬಂದವರು. ಆದರೆ, ಇಡೀ ಸಮುದಾಯ ನಿಮ್ಮ ಹಿಡಿತದಲ್ಲಿದೆ ಎಂಬ ಯೋಚನೆ ಬಿಟ್ಟು ಬಿಡಿ ಎಂದು ಕಿಡಿ ಕಾರಿದ್ದಾರೆ.
ಇದನ್ನು ಓದಿ: ಮಂಡ್ಯ ಜಿಲ್ಲೆಯಲ್ಲಿ ಅರಿವು ಮೂಡಿಸಿದರೂ ನಿಲ್ಲದ ಹೆಣ್ಣು ಭ್ರೂಣ ಹತ್ಯೆ