ಅನ್ನದಾತ, ರಾಮೋಜಿ ಫಿಲ್ಮ್ ಸಿಟಿಯ ಒಡೆಯ ರಾಮೋಜಿ ರಾವ್ ಇನ್ನಿಲ್ಲ!

Hyderabad: ರಾಮೋಜಿ ಫಿಲ್ಮ್ ಸಿಟಿ (Ramoji Film City)ಯ ಸ್ಥಾಪಕರಾದ ರಾಮೋಜಿ ರಾವ್ ಅವರು ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಆದರೆ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.

Ramoji Rao

ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳ ಶೂಟಿಂಗ್ ನಡೆದಿದೆ. 1996ರಲ್ಲಿ ರಾಮೋಜಿ ಫಿಲ್ಮ್ ಸಿಟಿಯನ್ನು ರಾಮೋಜಿ ರಾವ್ ಸ್ಥಾಪಿಸಿದರು. ಹೈದರಾಬಾದ್​ನಲ್ಲಿರುವ ಈ ಪ್ರದೇಶ 1,666 ಎಕರೆ ಪ್ರದೇಶದಲ್ಲಿ ಇದೆ. ವಿಶ್ವದಲ್ಲೇ ಇದು ಅತಿ ದೊಡ್ಡ ಸ್ಟುಡಿಯೋ ಎನ್ನುವ ಖ್ಯಾತಿಯನ್ನು ಪಡೆದಿದೆ. ಇದು ವಿಶ್ವ ದಾಖಲೆ ಪಟ್ಟಿಯಲ್ಲೂ ಇದೆ.

ರಾಮೋಜಿ ರಾವ್ ಅವರು ಜನಿಸಿದ್ದು 1936ರಲ್ಲಿ. 1984ರಲ್ಲಿ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದರು. 2015ರವರೆಗೂ ಅವರು ಸಿನಿಮಾಗಳನ್ನು ನಿರ್ಮಿಸುತ್ತಿದ್ದರು. ಆ ಬಳಿಕ ಅವರು ನಿರ್ಮಾಣದಿಂದ ದೂರವೇ ಇದ್ದರು. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕನ್ನಡದ ಹಲವು ಸಿನಿಮಾಗೆ ಸೆಟ್​ ಹಾಕಲಾಗಿತ್ತು. ಪತ್ರಕರ್ತರಾಗಿ, ಶಿಕ್ಷಣ ಕ್ಷೇತ್ರ, ನಿರ್ಮಾಪಕರಾಗಿ ರಾಮೋಜಿ ರಾವ್ (Ramoji Rao) ಗುರುತಿಸಿಕೊಂಡಿದ್ದರು. ಕನ್ನಡದಲ್ಲಿ ನಿನಗಾಗಿ, ಚಿತ್ರಾ, ಆನಂದ, ಸವಾರಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.

ಇವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. ತೆಲಂಗಾಣ ಬಿಜಿಪಿ (BJP) ಮುಖ್ಯಸ್ಥ ಹಾಗೂ ಪಾರ್ಟಿ ಸಂಸದ ಜಿ ಕೃಷ್ಣನ್ ರೆಡ್ಡಿ (G Krishnan Reddy) ಅವರು ಸಂತಾಪ ಸೂಚಿಸಿದ್ದಾರೆ. ಇದರ ಜೊತೆಗೆ ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ಸಂತಾಪ ಕೋರಿದ್ದಾರೆ

Exit mobile version