ಮದುವೆಯ ಬಗ್ಗೆ ಯೋಚನೆ ಮಾಡುವಷ್ಟು ದೂಡ್ಡವಳಾಗಿಲ್ಲ ನಾನು : ರಶ್ಮಿಕಾ ಮಂದಣ್ಣ!

ನ್ಯಾಷನಲ್ ಕ್ರಶ್, ಪುಷ್ಪ ಚಿತ್ರದ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಹೊಂದಿರುವ ನಟಿ ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ತಮ್ಮಿಬ್ಬರ ಸಂಬಂಧಕ್ಕೆ ಬ್ರೇಕ್ ಹಾಕಿ ಇಂದಿಗೆ 4 ವರ್ಷವೇ ಕಳೆದಿದೆ. ಕಿರಿಕ್ ಪಾರ್ಟಿ ಸಿನಿಮಾದ ನಂತರ ಅಂದರೆ 2017 ಜುಲೈ 3ನೇ ತಾರೀಖು ಈ ಜೋಡಿ ಅದ್ದೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ನಿಸ್ವಾರ್ಥದ ಬಳಿಕ ಇವರಿಬ್ಬರ ವಯಸ್ಸಿನ ಅಂತರ ಎಲ್ಲೆಡೆ ಅಂದು ಬಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಜೋಡಿ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಿದ್ದರು.

ಕೊಡಗಿನ ಕುವರಿ ಈ ಬೆಡಗಿ, ಕರ್ನಾಟಕ ಕ್ರಶ್ ಎಂದೇ ಮಿಂಚಿದ ಕಿರಿಕ್ ಬೆಡಗಿ ಈಗ ನ್ಯಾಷನಲ್ ಕ್ರಷ್. ಒಂದಲ್ಲ ಎರಡಲ್ಲ ಅನೇಕ ಹೆಸರುಗಳಿಂದ ಕರೆಯುತ್ತಾರೆ ಇವರ ಅಭಿಮಾನಿಗಳು. 2016 ರಲ್ಲಿ ರಿಲೀಸ್ ಆದ ಸಿನಿಮಾ, ಕನ್ನಡದಲ್ಲಿ ದಾಖಲೆ ಸೃಷ್ಟಿಸಿದ ಚಿತ್ರ ಕಿರಿಕ್ ಪಾರ್ಟಿ. ಈ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ರಶ್ಮಿಕ ಮೊದಲ ಸಿನಿಮಾದಲ್ಲೇ, ಅಭಿನಯದಲ್ಲಿ ಸೈ ಎನಿಸಿಕೊಂಡ ನಟಿ. ಅಪಾರ ಅಭಿಮಾನಿ ಬಳಗವನ್ನು ಇಂದು ಸಂಪಾದಿಸಿದ್ದಾರೆ. ಸ್ಯಾಂಡಲ್ವುಡ್ ನಲ್ಲಿ ಕಾಲಿಟ್ಟ ರಶ್ಮಿಕಾ, ಪರ ಭಾಷೆಗಳಲ್ಲೂ ನಟಿಸಿ ಮೆಚ್ಚುಗೆ ಪಡೆದಿದ್ದಾರೆ. ಕಿರಿಕ್ ಪಾರ್ಟಿ ನಂತರ ರಶ್ಮಿಕ ಮುಟ್ಟಿದ್ದೆಲ್ಲಾ ಚಿನ್ನವಾಯಿತು.

ದೇಶದೆಲ್ಲೆಡೆ ದೊಡ್ಡ ಫ್ಯಾನ್ ಬಳಗ ಹೊಂದಿರುವ ನ್ಯಾಷನಲ್ ಕ್ರಷ್ ರಶ್ಮಿಕಾಗೆ, ಕರ್ನಾಟಕದಲ್ಲಿ ಮಾತ್ರ ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು. ರಶ್ಮಿಕ ಅಂದ್ರೆ ಟ್ರೋಲ್ ಪೇಜ್ ಗಳಿಗಂತೂ “ಫ್ರೆಂಚ್ ಫ್ರೈಸ್” , ಯಾವುದಾದರೊಂದು ವಿಷಯದಲ್ಲಿ ಟ್ರೋಲ್ ಗೆ ಗುರಿಯಾಗುತ್ತಲೇ ಇರುತ್ತಾರೆ. ಇದಕ್ಕೆಲ್ಲಾ ಕಾರಣ, ಕನ್ನಡವನ್ನು ಗೌರವಿಸೋದಿಲ್ಲ ಅನ್ನೋದು. ಕನ್ನಡದವರಾಗಿ ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರುವುದಿಲ್ಲ ಎಂದರೆ ನಾಚಿಕೆಯ ಸಂಗತಿ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ರಶ್ಮಿಕಾ ಇಡೀ ಕರ್ನಾಟಕದಲ್ಲೇ ಸಂಚಲನ ಮೂಡಿಸಿದ ನಟಿ. ರಶ್ಮಿಕಾ ಅವರ ಕೆಲ ನಡೆಗಳು ರಕ್ಷಿತ್ ಅವರ ಫ್ಯಾನ್ಸ್ಗಳ ಮುಖದಲ್ಲಿ ಬೇಸರ ಮೂಡಿಸಿತ್ತು.ಇಷ್ಟೆಲ್ಲಾ ಆದ್ರೂ ಕೂಡಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಶ್ಮಿಕಾ ಸದ್ಯಕ್ಕೆ ಹೈದರಾಬಾದ್ ನಲ್ಲಿ ಸೆಟಲ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿಯ ಸಂಬಂಧಕ್ಕೆ ತೆರೆ ಬಿದ್ದು 4 ವರ್ಷಗಳು ಕಳೆದರೂ ಈಗ ಮತ್ತದೇ ಬ್ರೇಕಪ್ ವಿಚಾರ ಸುದ್ದಿಯಾಗುತ್ತಿದೆ. ಇತ್ತೀಚೆಗೆ ನಡೆದ ಖಾಸಗಿ ಸಂದರ್ಶನ ಒಂದರಲ್ಲಿ ಕೇಳಿರುವ ಪ್ರಶ್ನೆಗೆ, ರಶ್ಮಿಕಾ ನೀಡಿರುವ ಉತ್ತರ ಎಲ್ಲೆಡೆ ವೈರಲ್ ಆಗುತ್ತಿದೆ.

ಹೌದು, ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ರಶ್ಮಿಕಾ, ಮದುವೆಯ ಬಗ್ಗೆ ಯೋಚನೆ ಮಾಡುವಷ್ಟು ದೂಡ್ಡವಳಾಗಿಲ್ಲ ಎಂದು ಉತ್ತರಿಸಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಉಂಗುರ ಬದಲಿಸಿಕೊಂಡಾಗ ರಶ್ಮಿಕಾಗೆ 20 ವರ್ಷ, ಹಾಗಾಗಿ ಕಿರಿಕ್ ಹುಡುಗಿಯ ಈ ಮಾತು, ಪರೋಕ್ಷವಾಗಿ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ಗೆ ಉತ್ತರವಾಗಿದೆಯಾ ಅನ್ನೊ ವಿಷಯ ಚರ್ಚೆಗೆ ಕಾರಣವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.