ಕನ್ನಡ ಭಾಷೆಯನ್ನು ಮೊದಲಿಗೆ ಬಳಸಿ ಹಬ್ಬಕ್ಕೆ ಶುಭಕೋರಿದ ರಶ್ಮಿಕಾಗೆ ಮತ್ತೊಮ್ಮೆ ನೆಗಟಿವ್ ಕಮೆಂಟ್!

Bengaluru : ಸಂಕ್ರಾಂತಿ ಹಬ್ಬಕ್ಕೆ ದೇಶದ ಪ್ರಮುಖ ಭಾಷೆಗಳಲ್ಲಿ ನ್ಯಾಷನಲ್ ಕ್ರಶ್, ಪಂಚಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika got negative comment) ಟ್ವೀಟ್ ಮೂಲಕ ಹಬ್ಬದ ಶುಭಾಶಯಗಳನ್ನು ಕೋರಿದರು ಕೂಡ ಅನೇಕ ಕನ್ನಡಿಗರಿಗೆ ಇದು ಖುಷಿ ನೀಡಿಲ್ಲ ಎಂಬಂತೆ ತೋರಿದೆ!

ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ(Kirik Party) ಚಿತ್ರದ ಮೂಲಕ ಮಿಂಚಿದ ನಟಿ ರಶ್ಮಿಕಾ ಮಂದಣ್ಣ, ಇಂದು ತೆಲುಗು (Telugu), ತಮಿಳು, ಹಿಂದಿ ಚಿತ್ರರಂಗದ ಸಿನಿಮಾಗಳಲ್ಲಿ ನಟಿಸಿ, ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.

ಕನ್ನಡ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳದೇ ಇದ್ದರೂ ಪರ ಭಾಷೆಯ ಸಿನಿಮಾಗಳಲ್ಲಿ ನಟಿಸಿ, ಉತ್ತಮ ಹೆಸರು (Rashmika got negative comment) ಸಂಪಾದಿಸಿದ್ದಾರೆ.

ಕಡಿಮೆ ಅವಧಿಯಲ್ಲಿ ಹಲವು ಸಿನಿಮಾಗಳ ಮೂಲಕ ಹೆಚ್ಚು ಕೀರ್ತಿ ಗಳಿಸಿರುವ ನಟಿ ರಶ್ಮಿಕಾ ಮಂದಣ್ಣ ಅವರನ್ನು ಮೆಚ್ಚಿ ಮಾತನಾಡುವವರ ಸಂಖ್ಯೆ ಒಂದೆಡೆಯಾದರೆ,

ಅವರನ್ನು ಟೀಕಿಸಿ ಮಾತನಾಡುವವರ ಸಂಖ್ಯೆ ಮತ್ತೊಂದೆಡೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಏನೇ ಹೇಳಿದರು, ಏನೇ ಮಾಡಿದರು ಅದು ಒಂದಲ್ಲ ಒಂದು ರೀತಿ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರಿ ಟೀಕೆಗೆ ಕಾರಣವಾಗುತ್ತದೆ.

ವೈರಲ್ ಆಗುವುದರ ಜೊತೆಗೆ ಒಂದಿಷ್ಟು ಪಾಸಿಟಿವ್ ಕಮೆಂಟ್‌ಗಳು ವ್ಯಕ್ತವಾದರೇ, ಹೆಚ್ಚಿನ ಸಂಖ್ಯೆಯಲ್ಲಿ ನೆಗೆಟಿವ್ ಕಮೆಂಟ್‌ಗಳು ವ್ಯಕ್ತವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಟ್ರೋಲ್ ಪೇಜ್‌ಗಳ(Troll

page) ಪುಟದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹೆಚ್ಚಾಗಿ ಕಮೆಂಟ್ ಸೆಕ್ಷನ್ ನಲ್ಲಿ ಮಾತನಾಡುವವರ ಸಂಖ್ಯೆ ಇಂದಿಗೂ ಅಧಿಕವಾಗಿಯೇ ಇದೆ!

ಕೆಲ ಒಳ್ಳೆಯ ಸಂಗತಿಗಳನ್ನು ನಟಿ ರಶ್ಮಿಕಾ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡರು, ಆ ವಿಷಯಕ್ಕೆ ಸದಾ ನೆಗಟಿವ್ ಮಾತನಾಡುವವರ ಒಂದು ವರ್ಗವೇ ನಿರ್ಮಾಣವಾಗಿದೆ ಎಂದೇ ಹೇಳಬಹುದು.

ಜನವರಿ 15 ರಂದು ಆಚರಿಸುವ ಸಂಕ್ರಾಂತಿ ಹಬ್ಬವನ್ನು ರಾಜ್ಯದ ನಾನಾ ಭಾಗಗಳಲ್ಲಿ ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ.

ಈ ಹಿನ್ನೆಲೆ ಸಂಕ್ರಾಂತಿ(Sankranti) ಹಬ್ಬದ ದಿನದಂದು ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು,

ಹಣ್ಣೆಗೆ ಸಿಂಧೂರ ಇಟ್ಟುಕೊಂಡಿರುವ ಫೋಟೋ ಮೂಲಕ ತಮ್ಮ ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ರಶ್ಮಿಕಾ ತಿಳಿಸಿದ್ದಾರೆ.

ಇದನ್ನೂ ಓದಿ: https://vijayatimes.com/siddaramaiah-ironic-to-sunil-kumar/

ತಮ ಟ್ವಿಟರ್ (Twitter) ಖಾತೆಯಲ್ಲಿ ಪೋಸ್ಟ್ ಮಾಡಿದ ನಟಿ ರಶ್ಮಿಕಾ ಮಂದಣ್ಣ, ಮೊದಲು ಕನ್ನಡ (Kannada) ಭಾಷೆಯಲ್ಲಿ ಸಂಕ್ರಾಂತಿ ಹಬ್ಬದ ಶುಭಾಷಯಗಳು ಎಂದು ಪ್ರಾರಂಭಿಸಿ

ತದನಂತರ ಅನ್ಯ ಭಾಷೆಗಳಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ಬಾರಿ ಕನ್ನಡದಲ್ಲೇ ಮೊದಲು ಶುಭಕೋರಿದ್ದು, ಕನ್ನಡಕ್ಕೆ ಆದ್ಯತೆ ಕೊಟ್ಟಿರುವುದನ್ನು ಗಮನಿಸಿದ ಕನ್ನಡಿಗರು, ರಶ್ಮಿಕಾ ಅವರೇ ನೀವು ಈ ಹಿಂದೆ ಮಾಡಿರುವುದನ್ನು ನಾವು ಎಂದಿಗೂ ಮರೆಯೋದಿಲ್ಲ.

ನೀವು ಈಗ ಏನೇ ಮಾಡಿದರು ಅದು ನಮಗೆ ಇಷ್ಟವಾಗುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು ಈಗ ಕನ್ನಡ ನಿಮಗೆ ನೆನಪಾಯಿತೇ ಎಂದು ಕಮೆಂಟ್ (Comment) ಹಾಕಿದ್ದಾರೆ. ಈ ರೀತಿ ಹಲವು ನೆಗೆಟಿವ್ ಕೆಮಂಟ್‌ಗಳು ವ್ಯಕ್ತವಾಗಿದ್ದರು,

ಇದಕ್ಕೆಲ್ಲಾ ನಟಿ ರಶ್ಮಿಕಾ ಮಂದಣ್ಣ ಅವರು ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ.

ರಶ್ಮಿಕಾ ಮಂದಣ್ಣ ಅವರ ಈ ಶುಭಾಶಯ ಪೋಸ್ಟ್‌ಗೆ ಪಾಸಿಟಿವ್ ಕಮೆಂಟ್‌ಗಳು ಲಭ್ಯವಾಗಿದ್ದು, ಅನೇಕರು ರಶ್ಮಿಕಾ ಅವರಿಗೆ ಮರು ಶುಭಾಷಯಗಳನ್ನು ತಿಳಿಸಿದ್ದಾರೆ ಮತ್ತು ಅವರ ಮುಂದಿನ ಚಿತ್ರಗಳಿಗೆ, ಯೋಜನೆಗಳಿಗೆ ಶುಭ ಹಾರೈಸಿದ್ದಾರೆ.

ಕಳೆದ ವಾರವಷ್ಟೇ ನಟಿ ರಶ್ಮಿಕಾ ಮಂದಣ್ಣ ಅವರ ತಮಿಳು ಚಿತ್ರ ವಾರಿಸು (Varisu) ಬಿಡುಗಡೆಗೊಂಡು ಸಾಕಷ್ಟು ಸದ್ದು ಮಾಡುತ್ತಿದೆ.

ಪ್ರೇಕ್ಷಕರ ಆಗಮನದ ಜೊತೆಗೆ ಉತ್ತಮ ಗಳಿಕೆಯನ್ನು ಕಾಣುತ್ತಿರುವ ಪ್ರಮುಖ ಚಿತ್ರವಾಗಿದೆ.

ಇನ್ನು ಇದೇ ಜನವರಿ 20 ರಂದು ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರ (Siddarth melhotra) ಅವರೊಟ್ಟಿಗೆ ನಟಿಸಿರುವ ಮಿಷನ್ ಮಜ್ನು ಚಿತ್ರ ಬಿಡುಗಡೆಯಾಗುತ್ತಿದ್ದು,
ಈ ಸಿನಿಮಾ ಕೇವಲ ಓಟಿಟಿ (OTT) ವೇದಿಕೆಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಲಾಗಿದೆ.
Exit mobile version