ನಾನೀಗ ಸ್ಟ್ರಾಂಗ್ ವುಮನ್ ಆಗಿದ್ದೇನೆ : ವರ್ಕೌಟ್‌ ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

Bengaluru : ನಟಿ ರಶ್ಮಿಕಾ ಮಂದಣ್ಣ(Rashmika Mandanna) ತಮ್ಮ ಜಿಮ್ ವರ್ಕ ಔಟ್ ವೀಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದ(Social Media) ಖಾತೆಯಲ್ಲಿ ಹಂಚಿಕೊಂಡಿದ್ದು, ನಾನು ಬಯಸಿದಂತೆ ಇದೀಗ ‘ಸ್ಟ್ರಾಂಗ್ ವುಮನ್’ ಆಗಿದ್ದೇನೆ ಎಂದು ವೀಡಿಯೊಗೆ ಶೀರ್ಷಿಕೆ ಕೊಟ್ಟು ಪೋಸ್ಟ್ ಮಾಡಿದ್ದಾರೆ. ಸದ್ಯ ನಟಿ ರಶ್ಮಿಕಾ ಮಂದಣ್ಣ ಅವರ ಈ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಹರಿದಾಡುತ್ತಿದ್ದು, ಅನೇಕ ನೆಟ್ಟಿಗರು ಇದಕ್ಕೆ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಮ್‌(Instagram) ಖಾತೆಯಲ್ಲಿ ಹೊಸ ವರ್ಕೌಟ್ ವೀಡಿಯೊವನ್ನು(Work out Video) ಹಂಚಿಕೊಂಡಿದ್ದು, ತಾನು ಯಾವಾಗಲೂ ‘ಸ್ಟ್ರಾಂಗ್ ವುಮನ್’ (Strong women)ಆಗಲು ಬಯಸಿದ್ದೆ, ಇಂದು ನಾನು ಆ ‘ಸ್ಟ್ರಾಂಗ್ ವುಮನ್’ ಆಗಿ ಹೊರಹೊಮ್ಮಿದ್ದೇನೆ ಎಂದು ಶೀರ್ಷಿಕೆ ಕೊಟ್ಟು ಪೋಸ್ಟ್ ಮಾಡಿದ್ದಾರೆ. ಜಿಮ್ ನಲ್ಲಿ ವ್ಯಾಯಾಮ ಮಾಡುವ ಬಾಲ್ ಗಳನ್ನು ಬಳಿಸಿ, ತಮ್ಮ ದೇಹವನ್ನು ಸಮತೋಲನಗೊಳಿಸುವುದರ ಜೊತೆಗೆ ಪುಷ್-ಅಪ್ಗಳನ್ನು ಮಾಡಿದ್ದಾರೆ. ಈ ದೃಶ್ಯ ವೀಡಿಯೊದಲ್ಲಿ ಕಾಣಬಹುದಾಗಿದೆ. ಈ ಒಂದು ವೀಡಿಯೊಗೆ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಕಮೆಂಟ್ ಮೂಲಕ ಸಾಕಷ್ಟು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ಒಂದು ಕಾಲದಲ್ಲಿ ನಾನು ಬಲಿಷ್ಠ ಮಹಿಳೆಯರನ್ನು ನೋಡುತ್ತಿದ್ದೆ. ಆಗ ನಾನು ನನ್ನ ಬಗ್ಗೆ ಯೋಚಿಸುತ್ತಿದ್ದೆ, ನಾನು ಅವರಂತೆಯೇ ಇರಬೇಕೆಂದು ಬಯಸುತ್ತಿದ್ದೆ ಮತ್ತು ಇಂದು ನಾನು ನನ್ನ ಈ ವೀಡಿಯೊಗಳನ್ನು ನೋಡುತ್ತೇನೆ ಮತ್ತು ಅದೇ ರೀತಿ ಸಾಗುತ್ತೇನೆ. ನಾನು ಅಂದುಕೊಂಡಂತೆ ಇಂದು ‘ಸ್ಟ್ರಾಂಗ್ ವುಮನ್’ ಆಗಿದ್ದೇನೆ ಎಂದು ನಟಿ ರಶ್ಮಿಕಾ ಮಂದಣ್ಣ ಬರೆದು ಪೋಸ್ಟ್(Post) ಮಾಡಿದ್ದಾರೆ.

ಇದನ್ನೂ ಓದಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮದುವೆಗೆ ಒಪ್ಪಿಗೆ ನೀಡಿದ ಕರ್ನಾಟಕ ಹೈಕೋರ್ಟ್

ಈ ನಡುವೆ ನಟಿ ರಶ್ಮಿಕಾ ಮಂದಣ್ಣ ಅವರ ಈ ಒಂದು ವೀಡಿಯೊಗೆ ನಟಿ ಕೃತಿ ಸನೋನ್(Kruthi Sanoon) ಸೇರಿದಂತೆ ಕೆಲ ನಟ-ನಟಿಯರು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ವೀಡಿಯೊಗೆ ರಶ್ಮಿಕಾ ಅವರ ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದು, “ಲವ್ ಇಟ್”(Love it) ಎಂದು ಬರೆದಿದ್ದಾರೆ. ಮತ್ತೊಬ್ಬರು ಫಾಬುಲೆಸ್ ಎಂದು ಕಾಮೆಂಟ್ ಮಾಡಿದ್ದಾರೆ.

Exit mobile version