ರಥಸಪ್ತಮಿ ಅಂಗವಾಗಿ ಸಾಮೂಹಿಕ ಸೂರ್ಯ ನಮಸ್ಕಾರ: ರಾಜವಂಶಸ್ಥ ಯದುವೀರ್ ಒಡೆಯರ್ ಚಾಲನೆ

ಮೈಸೂರು: ರಥಸಪ್ತಮಿ ಅಂಗವಾಗಿ ಮೈಸೂರಿನಲ್ಲಿ
ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.

ಅರಮನೆ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ್ ಭಾಗಿಯಾಗಿದ್ರು.
ವಿಶೇಷ ಹೋಮದಲ್ಲೂ ಕೂಡ ಯದುವೀರ್ ಪಾಲ್ಗೊಂಡರು. ದೀಪ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಳಿಕ ಮಾತನಾಡಿದ ಅವರು,
ಸೂರ್ಯ ನಮಸ್ಕಾರಕ್ಕೆ ನನ್ನ ಜೀವನದಲ್ಲಿ ತುಂಬ ಮಹತ್ವ ಇದೆ.. ನಾನು ಕೂಡ ಸೂರ್ಯ ನಮಸ್ಕಾರ ಪ್ರತಿನಿತ್ಯ ಅಳವಡಿಸಿಕೊಂಡಿದ್ದೇನೆ..ನಮ್ಮ ಮೈಸೂರಿನ ಸಂಸ್ಕೃತಿ ಜೊತೆ ಯೋಗ ಪ್ರಾರಂಭವಾಗಿದೆ.

ಯೋಗಕ್ಕೆ ನಮ್ಮ ತಾತನವರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ. ಯೋಗ ವ್ಯಾಯಾಮಕ್ಕೆ ಸೀಮಿತವಾಗಿಲ್ಲ. ಎಲ್ಲರ ಬದುಕಲ್ಲೂ ಯೋಗ ಭಾಗವಾಗಬೇಕು ಇದ್ರಿಂದ ಉತ್ತಮ ಪ್ರಯೋಜನವಾಗುತ್ತೆ ಅಂತ ತಿಳಿಸಿದ್ರು.

ಹಾಗೆಯೇ ರಥ ಸಪ್ತಮಿ ಹಿನ್ನೆಲೆ ಅರಮನೆಯ ಕೋಟೆ ಅಂಜಿನೇಯ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ದೇವಾಲಯದಲ್ಲಿ ಮೂರ್ತಿಯ ಉತ್ಸವ ಜರುಗಿತು. ಉತ್ಸವಕ್ಕೆ ರಾಜವಂಶಸ್ಥ ಯದುವೀರ್ ಚಾಲನೆ ನೀಡಿದ್ರು. ಇನ್ನು ಸಾವಿರಾರು ಯೋಗಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾದ್ರು.

Exit mobile version