4.28 ಕೋಟಿ ಪಡಿತರ ಚೀಟಿ ರದ್ದುಪಡಿಸಿದ ಕೇಂದ್ರ ಸರ್ಕಾರ

ನವದೆಹಲಿ ಡಿ 11 : ಕಳೆದು 7 ವರ್ಷಗಳಲ್ಲಿ ಸುಮಾರು 4.28 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗಿದೆ ಎಂದು ಕೆಂದ್ರ ಸರ್ಕಾರ ಮಾಹಿತಿ ನೀಡದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಟಿಪಿಡಿಎಸ್) ಸುಧಾರಣೆಗಳಿಗಾಗಿ ಮಾಹಿತಿ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿರುವ ಪರಿಣಾಮ ಕಳೆದ ಏಳು ವರ್ಷಗಳಲ್ಲಿ ಸುಮಾರು 4.28 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು, ಮನೆಗಳು ಅಥವಾ ಫಲಾನುಭವಿಗಳ ಸೇರ್ಪಡೆ ಮತ್ತು ಹೊರಗಿಡುವ ಕಾರ್ಯಾಚರಣೆಯ ಜವಾಬ್ದಾರಿಗಳು ಆಯಾ ರಾಜ್ಯ ಮತ್ತು ಕೇಂದ್ರಾಡಳಿತಗಳ ಸರ್ಕಾರಗಳ ಮೇಲಿದೆ ಎಂದು ಹೇಳಿದರು.

“ಪಡಿತರ ಕಾರ್ಡ್‌ಗಳ ಸೇರ್ಪಡೆ ಮತ್ತು ಅಳಿಸುವಿಕೆಯು ನಿರಂತರ ಪ್ರಕ್ರಿಯೆಯಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪಡಿತರ ಚೀಟಿಗಳ ಫಲಾನುಭವಿಗಳ ಪಟ್ಟಿಯನ್ನು ನಿಯಮಿತವಾಗಿ ಪರಿಶೀಲಿಸುತ್ತವೆ ಮತ್ತು ಸರಿಯಾದ ಪರಿಶೀಲನೆಯ ನಂತರ ಸಂಭಾವ್ಯ ಅನರ್ಹ,  ನಕಲಿ ಪಡಿತರ ಚೀಟಿಗಳನ್ನು ಗುರುತಿಸಲಾಗುತ್ತದೆ ಮತ್ತು ರದ್ದುಪಡಿಸಲಾಗುತ್ತದೆ.  ನಿಜವಾದ ಅರ್ಹತೆ ಮತ್ತು ಬಿಟ್ಟುಹೋದ ಮನೆಗಳು ಮತ್ತು ಫಲಾನುಭವಿಗಳನ್ನು ಸೇರಿಸುವ ಕಾರ್ಯವೂ ನಡೆಯುತ್ತದೆ” ಎಂದು ಸಚಿವರು ಹೇಳಿದ್ದಾರೆ.

 ಟಿಪಿಡಿಎಸ್ ಸುಧಾರಣೆಗಳು, ಪಡಿತರ ಚೀಟಿಗಳ ದತ್ತಾಂಶಗಳ ಡಿಜಿಟಲೀಕರಣ, ಡಿ-ಡಪ್ಲಿಕೇಶನ್ ಪ್ರಕ್ರಿಯೆ, ಶಾಶ್ವತ ವಲಸೆ, ಸಾವುಗಳು, ಅನರ್ಹ,  ನಕಲಿ ಪಡಿತರ ಚೀಟಿಗಳ ಗುರುತಿಸುವಿಕೆ ಇತ್ಯಾದಿಗಳಿಗೆ ಮಾಹಿತಿ ತಂತ್ರಜ್ಞಾನದ ಬಳಕೆಯಿಂದಾಗಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ನಕಲಿ ಕಾರ್ಡ್‌ಗಳನ್ನು ರದ್ದುಪಡಿಸಲು ಸಾಧ್ಯವಾಗುತ್ತಿದೆ. 2014 ರಿಂದ 2021 ರ ಅವಧಿಯಲ್ಲಿ ಇದುವರೆಗೆ ಸುಮಾರು 4.28 ಕೋಟಿ ಬೋಗಸ್ ಪಡಿತರ ಚೀಟಿಗಳು ರದ್ದಾಗಿವೆ” ಎಂದು ಅವರು ಹೇಳಿದ್ದಾರೆ

Exit mobile version