ಡಕ್‍ಔಟ್ ಆದ ವಿರಾಟ್ ; ಕೊಹ್ಲಿಗೆ ಸೂಕ್ತ ವಿಶ್ರಾಂತಿ ಅಗತ್ಯವಿದೆ : ರವಿಶಾಸ್ತ್ರಿ!

virat kohli

ಕೋವಿಡ್ -19(Covid 19) ಸಾಂಕ್ರಾಮಿಕದ ನಿರ್ಬಂಧಗಳ ಮಧ್ಯೆಯೂ ಕೂಡ ಐಪಿಎಲ್ 15ರ(Tata IPL) ಆವೃತ್ತಿ ಯಶಸ್ವಿಯಾಗಿ ಸಾಗುತ್ತಿದೆ. ಈ ನಡುವೆ ಮಂಗಳವಾರ ನಡೆದ ಕೆ.ಎಲ್ ರಾಹುಲ್(KL Rahul) ನಾಯಕತ್ವದ ಲಕ್ನೊ ಸೂಪರ್ ಜೈಂಟ್ಸ್(Luknow Super Giants) ತಂಡ ಮತ್ತು ಫಾಫ್ ಡೂ ಪ್ಲೆಸಿಸ್(Faf Du Plesis) ನಾಯಕತ್ವದ ಆರ್.ಸಿಬಿ(RCB) ತಂಡಗಳು ಗೆಲುವಿಗಾಗಿ ಪೈಪೋಟಿ ನಡೆಸಿತು.

ಈ ಕಾಳಗದಲ್ಲಿ ರೋಚಕವಾಗಿ ಆರ್.ಸಿ.ಬಿ ತಂಡ ಗೆಲುವಿನ ಪತಾಕೆಯನ್ನು ಹಿಡಿದು ಸಂಭ್ರಮಿಸಿತು. ಆದ್ರೆ, ಮಾಜಿ ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli) ಕ್ರೀಡಾಂಗಣಕ್ಕೆ ಬಂದಿಳಿದ ಮೊದಲ ಎಸತಕ್ಕೆ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಹಾದಿ ನೋಡಿದರು. ವಿರಾಟ್ ಕೊಹ್ಲಿ ಆಟವನ್ನು ಗಮನಿಸಿದ ರವಿಶಾಸ್ತ್ರಿ, ಸ್ಪರ್ಧೆಯನ್ನು ಉತ್ತಮವಾಗಿ ಮುನ್ನೆಡೆಸುವ ಕ್ರಮದಿಂದ ವಿರಾಟ್ ವಿಶ್ರಾಂತಿ ತೆಗೆದುಕೊಳ್ಳುವುದು ಸೂಕ್ತ ಎಂದು ಹೇಳಿದ್ದಾರೆ.

ಐಪಿಎಲ್ 2022 ರಲ್ಲಿ ವಿರಾಟ್ ಕೊಹ್ಲಿ ಲೀನ್ ಪ್ಯಾಚ್ ರೀತಿ ಅನುಸರಿಸುತ್ತಿದ್ದಾರೆ. ಭಾರತದ ಮಾಜಿ ನಾಯಕನ ಕೈನಲ್ಲಿ ಇನ್ನೂ 6-7 ವರ್ಷಗಳ ಕ್ರಿಕೆಟ್ ಉಳಿದಿದೆ ಮತ್ತು ಭಾರತವು ಅವರನ್ನು ಬಲಿಷ್ಠ ಆಟಗಾರ ಎಂದು ಇಂದಿಗೂ ಎದುರುನೋಡುತ್ತಿದೆ. ಇದನ್ನು ವಿರಾಟ್ ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು, ಅದನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಭಾರತದ ಇಂಗ್ಲೆಂಡ್ ಮುಂದಿನ ಪ್ರವಾಸಕ್ಕೂ ಮುನ್ನ ಕೊಹ್ಲಿ ವಿರಾಮ ತೆಗೆದುಕೊಳ್ಳುವುದು ಅಗತ್ಯ ಎಂದು ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.

Exit mobile version