ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ಆರ್​ಸಿಬಿ ಗೆಲ್ಲೋದು ಫಿಕ್ಸ್! ಆರ್​ಸಿಬಿ ಪಾಲಿಗೆ ಪ್ಲಸ್ ಪಾಯಿಂಟ್ಏನಿದೆ? ಇಲ್ಲಿದೆ ಮಾಹಿತಿ

Delhi : ಐಪಿಎಲ್ 2023ರ (IPL 2023) 50ನೇ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ (Arun Jaitley Stadium) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿದೆ. ಈ ತಂಡಗಳ ನಡುವೆ (RCB Vs Delhi Capitals) ಇದುವರೆಗೆ ಒಟ್ಟು 30 ಪಂದ್ಯಗಳು ನಡೆದಿವೆ. ಹಿಂದಿನ ಪಂದ್ಯಗಳನ್ನು ಗೆದ್ದು ಈಗ ಎರಡೂ ತಂಡಗಳು ಉತ್ತಮ ವಲಯದಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಅತ್ಯುತ್ತಮ

ದಾಖಲೆಯನ್ನು ಹೊಂದಿದೆ ಏಕೆಂದರೆ RCB 18 ಪಂದ್ಯಗಳನ್ನು ಗೆದ್ದಿದೆ ಆದರೆ ಡೆಲ್ಲಿ 10 ಗೆಲುವುಗಳನ್ನುದಾಖಲಿಸಿದೆ.

ಈ ಮೂಲಕ ಆರ್‌ಸಿಬಿತಂಡವು ಮೇಲುಗೈ ಸಾಧಿಸಿದೆ.ಇನ್ನು ಪಾಯಿಂಟ್ಸ್ ಟೇಬಲ್ ಬಗ್ಗೆ ಮಾತನಾಡುವುದಾದರೆ,

ಇದುವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 9 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳನ್ನು (RCB Vs Delhi Capitals) ಗೆದ್ದು ಕೊನೆಯ ಸ್ಥಾನದಲ್ಲಿದೆ.

ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ ಐದನೇ ಸ್ಥಾನದಲ್ಲಿದೆ.

ಇದನ್ನೂ ಓದಿ : https://vijayatimes.com/neet-ug-2023-exam/

ಆರ್​ಸಿಬಿ ಪಾಲಿಗೆ ಪ್ಲಸ್ ಪಾಯಿಂಟ್ :

ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಹಿನ್ನಡೆಯುಂಟಾಗುವ ಸಾಧ್ಯತೆ ಇದೆ ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬೌಲರ್ ಆಗಿರುವ ಅನಿಕ್ಹ್ ನೋಕಿಯೋ (Anrich Nortje)

ಶುಕ್ರವಾರ ರಾತ್ರಿ ತನ್ನ ತವರಾದ ಸೌತ್ ಆಫ್ರಿಕಾಗೆ (South Africa) ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರ್​ಸಿಬಿ ವಿರುದ್ಧದ ಪಂದ್ಯವು ನಿರ್ಣಾಯಕ.

ಏಕೆಂದರೆ ಈಗಾಗಲೇ ಆಡಿರುವ 9 ಪಂದ್ಯಗಳಲ್ಲಿ 3 ರಲ್ಲಿ ಮಾತ್ರ ಜಯ ಸಾಧಿಸಿದೆ.ಆದರೆ 9 ಪಂದ್ಯಗಳಲ್ಲಿ 5 ಪಂದ್ಯದಲ್ಲಿ ಆರ್​ಸಿಬಿ ಜಯ ಸಾಧಿಸಿದೆ.

ಒಂದು ವೇಳೆ ಈ ಪಂದ್ಯದಲ್ಲಿ ಆರ್​ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದರೆ ಪಾಯಿಂಟ್ಸ್​ ಟೇಬಲ್​ನಲ್ಲಿ ಟಾಪ್-4 ಹಂತಕ್ಕೇರುವ ಎಲ್ಲಾ ಅವಕಾಶಗಳು ಇವೆ.

ಅಷ್ಟೇ ಅಲ್ಲದೆ ಅನ್ರಿಕ್ ನೋಕಿಯಾ ಕೂಡ ಡೆಲ್ಲಿ ತಂಡದಿಂದ ಹೊರಗುಳಿದಿರುವುದು ಆರ್​ಸಿಬಿ ಪಾಲಿಗೆ ಬಹು ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.

Exit mobile version